ಲೋಕ ಅದಾಲತ್‌ನಲ್ಲಿ 549 ಪ್ರಕರಣ ಇತ್ಯರ್ಥ: ನ್ಯಾಯಾಧೀಶ ಅಬ್ದುಲ್‌ ಖಾದರ

| Published : Mar 09 2025, 01:49 AM IST

ಲೋಕ ಅದಾಲತ್‌ನಲ್ಲಿ 549 ಪ್ರಕರಣ ಇತ್ಯರ್ಥ: ನ್ಯಾಯಾಧೀಶ ಅಬ್ದುಲ್‌ ಖಾದರ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ದಿವಾಣಿ ನ್ಯಾಯಾಲಯದಲ್ಲಿ 459 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದರೆ, ಕಿರಿಯ ದಿವಾಣಿ ನ್ಯಾಯಾಲಯದಲ್ಲಿ 105 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಾಧೀಶ ಅಬ್ದುಲ್‌ ಖಾದರ ತಿಳಿಸಿದರು.

ಕುಂದಗೋಳ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮೆಗಾ ಲೋಕ್ ಅದಾಲತ್‌ನಲ್ಲಿ 549 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಲಯದ ಗೌರವ ನ್ಯಾಯಾಧೀಶ ಅಬ್ದುಲ್‌ ಖಾದರ ತಿಳಿಸಿದರು.

ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರಿಯ ಲೋಕ್ ಅದಾಲತ್‌ನಲ್ಲಿ ಮಾತನಾಡಿ, ಹಿರಿಯ ದಿವಾಣಿ ನ್ಯಾಯಾಲಯದಲ್ಲಿ 459 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದರೆ, ಕಿರಿಯ ದಿವಾಣಿ ನ್ಯಾಯಾಲಯದಲ್ಲಿ 105 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್‌ ಪ್ರಕರಣ- 2, ಮೋಟಾರ ಅಪಘಾತ ಪ್ರಕರಣ- 1, ವೈವಾಹಿಕ ಪ್ರಕರಣಗಳು- 1, ಆಸ್ತಿ ಪ್ರಕರಣ- 15, ಇಸಿಎ ಪ್ರಕರಣ- 1, ಲಘು ಪ್ರಕರಣ- 438 ಹೀಗೆ ಒಟ್ಟು 549 ಪ್ರಕರಣಗಳು ಇತ್ಯರ್ಥವಾದವು ಎಂದರು.

ಕಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಗಾಯತ್ರಿ ಮಾತನಾಡಿ, ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್‌ ಪ್ರಕರಣ- 4, ಮೋಟಾರ ಅಪಘಾತ ಪ್ರಕರಣ- 8, ಆಸ್ತಿ ಪ್ರಕರಣ- 38, ಇತರೆ ಅಮಲು ಜಾರಿ ಪ್ರಕರಣ- 1, ಲಘು ಪ್ರಕರಣಗಳು 50 ಹೀಗೆ ಒಟ್ಟು 105 ಪ್ರಕರಣ ಇತ್ಯರ್ಥವಾದವು. ಯಲಿವಾಳ ಗ್ರಾಮದ ‌ರೇವಣಸಿದ್ದಪ್ಪ ಸೋಮಲಿಂಗಪ್ಪ ಹೂಗಾರ ಹಾಗೂ ಪ್ರೀತಿ ರೇವಣಸಿದ್ದಪ್ಪ ಹೂಗಾರ ಎಂಬ ದಂಪತಿಗೆ ಒಂದು ಗಂಡು ಮಗು ಇದೆ. ಈ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆದರೆ ಇಬ್ಬರ ಮನವೋಲಿಸಿ ಒಂದಾಗಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ವಕೀಲ ಸಂಘದ ಅಧ್ಯಕ್ಷ ಬಿ.ಪಿ. ಪಾಟೀಲ, ಕಾರ್ಯದರ್ಶಿ ವೈ.ಬಿ. ಬೀಳೆಬಾಳ, ಸದಸ್ಯರಾದ ಅಶೋಕ ಕ್ಯಾರಕಟ್ಟಿ, ಪಿ.ಎಸ್. ಪಾಟೀಲ, ವಿ.ಎಲ್. ಹಡಪದ, ಎಂ.ಬಿ. ಬೂದಿಹಾಳ, ಎಸ್.ಎಂ. ಬೋವಿ, ವೈ.ಎಫ್. ಸಂಶಿ, ಬಿ. ಆರ್. ನಾಗಣ್ಣವರ, ಎಫ್.ಎ.ತಿರಕ್ಕಮ್ಮನವರ ಮತ್ತಿತರರು ಇದ್ದರು.

ಫೋಟೋ: 8ಎಚ್‌ಯುಬಿ7: ವಿಚ್ಛೇದನಕ್ಕೆ ಅರ್ಜಿ ಹಾಕಿದ ದಂಪತಿಯನ್ನು ಒಂದಾಗಿಸಲಾಯಿತು.

ಟೋ: ಕೆ ಎನ್ ಡಿ 01ಪಟ್ಟಣದ ಜೆ ಎಮ್ ಎಪ್ ಸಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ಯಲಿವಾಳ ಗ್ರಾಮದ ದಂಪತಿಗಳ ವ್ಯಾಜ್ಯ ಇತ್ಯರ್ಥ ಪಡಿಸಿ ದಂಪತಿಗಳು ಸಹ ಭಾಳ್ವೆಯಿಂದ ಇರಲು ಗೌರವ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿ ಯವರು ಅನೂಕೂಲ ಮಾಡಿಕೊಟ್ಟರು.