ಸಾರಾಂಶ
- ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ ಚಾಲನೆ: ಜಸ್ಟಿನ್ ಡಿಸೌಜ ಮಾಹಿತಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆಯನ್ನು ಡಿ.25ರಿಂದ ನಾಲ್ಕು ದಿನಗಳ ಕಾಲ ನಗರದ ಶ್ರೀ ಸಿದ್ದಲಿಂಗೇಶ್ವರ ನಗರದ ಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥೆ ಡಾ. ಜಸ್ಟಿನ್ ಡಿಸೌಜ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.25ರಂದು ಸಂಜೆ 5.30ಕ್ಕೆ ಸಿದ್ದಗಂಗಾ ಪ್ರತಿಭಾ ಪುರಸ್ಕಾರ- ಎಸ್ಸೆಸ್ಸಲ್ಸಿ, ಸಿಬಿಎಸ್‌ಇ-2024, ಎಂಎಸ್‌ಎಸ್ ಕ್ವಿಝ್ 2024 ಬಹುಮಾನ ವಿತರಣೆ ಹಾಗೂ ಶಿಕ್ಷಣ ಶಿಲ್ಪಿ ಡಾ. ಎಂಎಸ್ಎಸ್ ಪ್ರಶಸ್ತಿ- 2024 ಪ್ರದಾನ, ಸಾಂಸ್ಕೃತಿಕ ಸಮಾರಂಭಕ್ಕೆ ಸಿದ್ಧಗಂಗಾ ಶಾಲೆ ಸಿಬಿಎಸ್‌ಇ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಮನೋವೈದ್ಯ, ಲೇಖಕ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ ಚಾಲನೆ ನೀಡುವರು ಎಂದರು.
ಶಿಕ್ಷಣ ತಜ್ಞ ಕೆ.ಇಮಾಂ ಅವರಿಗೆ ಎಂಎಸ್ಎಸ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಲೆ ದೈಹಿಕ ಶಿಕ್ಷಕ ಎಚ್.ಎಂ.ರಘು, ಸಹಶಿಕ್ಷಕ ಎಂ.ಎಸ್.ಮಹೇಶ, ಸಿದ್ದಗಂಗಾ ಕಾಂಪೋಜಿಟ್ ಶಾಲೆಯ ಎಂ.ಪುಟ್ಟಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಸ್ಥೆಯ ಜಸ್ಟಿನ್ ಡಿಸೌಜ ಗೌರವ ಉಪಸ್ಥಿತರಿರುತ್ತಾರೆ. ಎಂಎಸ್ಎಸ್ ಕ್ರೀಡಾ ಪ್ರಶಸ್ತಿಯನ್ನು ವರ್ಷದ ಉತ್ತಮ (ಪ್ರೌಢಶಾಲಾ) ವಿದ್ಯಾರ್ಥಿಯಾಗಿ ಎಂ.ಕೆ.ಅಭಿಷೇಕ್, ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿ ಕೆ.ಪಿ. ಯಶಸ್ವಿನಿಗೆ ಪ್ರದಾನ ಮಾಡಲಾಗುವುದು ಎಂದರು.ಉತ್ತಮ ಬಾಲನಟಿ ಪ್ರಶಸ್ತಿ ಪಡೆದ 5ನೇ ತರಗತಿ ವಿದ್ಯಾರ್ಥಿನಿ ಗೌಳಿ ಮತ್ತು ಬಘೀರ ಖ್ಯಾತಿಯ ಕುಮಾರಿ ನಮನಗೆ ಸನ್ಮಾನವಿದೆ. ಜೊತೆಗೆ ವೈವಿಧ್ಯಮಯ, ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಗುವುದು. ಸಂಜೆ 5ರಿಂದ 5.30ರವರೆಗೆ ನಿಹಾರಿಕಾ ಮತ್ತು ತಂಡದಿಂದ ಸುಗಮ ಸಂಗೀತ ನಡೆಯಲಿದ್ದು, ಮುಖ್ಯಶಿಕ್ಷಕಿ ಕೆ.ಎಸ್.ರೇಖಾರಾಣಿ ಕಾರ್ಯಕ್ರಮ ನಡೆಸಿಕೊಡುವರು ಎಂದು ಮಾಹಿತಿ ನೀಡಿದರು.
ಡಿ.26ರ ಸಂಜೆ 5.30ಕ್ಕೆ ಸಂಸ್ಥೆ ಕಾರ್ಯದರ್ಶಿ ಡಿ.ಎಸ್. ಹೇಮಂತ್ ಅಧ್ಯಕ್ಷತೆಯಲ್ಲಿ ಉಡುಪಿ ವೈದ್ಯ ಸಾಹಿತಿ, ಮನಃಶಾಸ್ತ್ರಜ್ಞ ಡಾ.ವಿರೂಪಾಕ್ಷ ದೇವರಮನೆ ದ್ವಿತೀಯ ಪಿಯುಸಿ-2024 ಸಿದ್ಧಗಂಗಾ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸುವರು. ಕಾಲೇಜಿನ ಬೋಧಕರಾದ ಜಯಣ್ಣ ಬಿ.ಇಟಗಿ, ಸದಾಶಿವ ವಿ. ಹೊಳ್ಳ, ಡಾ. ಕೆ.ರಾಮದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕೆ.ಎಸ್. ರೇಖಾರಾಣಿ ಕಾರ್ಯಕ್ರಮ ನಡೆಸಿಕೊಡುವರು. 2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 400 ಮಕ್ಕಳಲ್ಲಿ 132 ವಿದ್ಯಾರ್ಥಿಗಳನ್ನು ಸಿದ್ಧಗಂಗಾ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ತರಗತಿಗಳ ಮಕ್ಕಳಿಂದ ನಡೆಯಲಿದೆ ಎಂದು ವಿವರಿಸಿದರು.ಡಿ.27ರ ಸಂಜೆ 5.30ಕ್ಕೆ ಸಿದ್ಧಗಂಗಾಪಿಯು ಕಾಲೇಜಿನ ಹಿರಿಯ ಬೋಧಕ ಶೇಖ್ ನಫೀಜ್ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒ ಡಾ.ಸುರೇಶ ಬಿ. ಇಟ್ನಾಳ್ ದ್ವಿತೀಯ ಪಿಯಸಿ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸಂಭ್ರಮ ಸಮಾರಂಭ ಉದ್ಘಾಟಿಸುವರು. ಬೋಧಕರಾದ ಕೆ.ಸಿ.ಶೃತಿ, ಡಿ.ಜಿ.ವಿಜಯಕುಮಾರ, ಸುಮಕಾಂತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದ್ವಿತೀಯ ಪಿಯುಸಿ ಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಅನಂತರ ವಿ.ಜಾಹ್ನವಿ ಮತ್ತು ತಂಡದಿಂದ ಸುಗಮ ಸಂಗೀತ, ವಿವಿಧ ತರಗತಿ ಮಕ್ಕಳಿಂದ ಸುಂದರ ನೃತ್ಯಗಳ ಪ್ರದರ್ಶನವಿರುತ್ತದೆ. ಕೆ.ಎಸ್.ರೇಖಾರಾಣಿ ಕಾರ್ಯಕ್ರಮ ನಡೆಸಿಕೊಡುವರು ಎಂದು ಹೇಳಿದರು.
28ರಂದು ಸಂಜೆ 5.30ಕ್ಕೆ ಪಿಯು ಮಕ್ಕಳಿಗೆ ಸಿದ್ಧಗಂಗಾ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸಂಭ್ರಮವು ಕಾಲೇಜು ಪ್ರಾಚಾರ್ಯರಾದ ವಾಣಿಶ್ರೀ ಅಧ್ಯಕ್ಷತೆಯಲ್ಲಿ ಸಂಸ್ಥೆ ನಿರ್ದೇಶಕ, ಎಂಎಸ್‌ಎಸ್ ಸೂಪರ್ ಬ್ರೈನ್ ಸೆಂಟರ್ ಅಧ್ಯಕ್ಷ ಡಾ.ಡಿ.ಎಸ್.ಜಯಂತ್ ಉದ್ಘಾಟಿಸುವರು. ಕಾಲೇಜಿನ ಬೋಧಕರಾದ ಆರ್.ಎಸ್.ಗಣೇಶ ಪ್ರಸಾದ್, ಎಂ.ಗೋಪಿನಾಥ, ಎಸ್.ರಾಮು, ಯು.ಡಿ. ಲಕ್ಷ್ಮೀನಾರಾಯಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು. 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ನಾಲ್ಕೂ ದಿನ ಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೌಜ ಗೌರವ ಉಪಸ್ಥಿತರಿರುತ್ತಾರೆ. ಸಿ.ಶುಭಾ ಮತ್ತು ತಂಡದಿಂದ ಸುಗಮ ಸಂಗೀತವಿದ್ದು, ಕೆ.ಎಸ್.ರೇಖಾರಾಣಿ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎಂದು ಜಸ್ಟಿನ್ ಡಿಸೌಜ ಮಾಹಿತಿ ನೀಡಿದರು.ಸಂಸ್ಥೆ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಮಾತನಾಡಿ, ಸಂಸ್ಥೆಯ ದ್ವಿತೀಯ ಪಿಯುಸಿ ಮಕ್ಕಳಿಗೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಾಲ್ಕು ದಿನ ಇರಲಿವೆ. 55ನೇ ವಾರ್ಷಿಕ ಸಂಭ್ರಮ ಹಿನ್ನೆಲೆ ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ. ಭರತನಾಟ್ಯ, ಜನಪದ, ದೇಶಭಕ್ತಿ, ಪರಿಸರ, ಪ್ರಕೃತಿ, ಭಕ್ತಿಗೀತೆ, ಭಾವಗೀತೆ, ಸಾಮಾಜಿಕ ಜಾಗೃತಿ, ಯೋಗ ಹೀಗೆ ಹಲವಾರು ವಿಷಯಗಳನ್ನು ಒಳಗೊಂಡಂತೆ 4 ದಿನ ನೂರಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧರಾಗಿದ್ದಾರೆ ಎಂದರು.
ಸಂಸ್ಥೆ ಕಾರ್ಯದರ್ಶಿ ಡಿ.ಎಸ್. ಹೇಮಂತ್, ಪ್ರಾಚಾರ್ಯರಾದ ವಾಣಿಶ್ರೀ, ಸಿಬಿಎಸ್ಇ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್, ಪ್ರೌಢಶಾಲೆ ಮುಖ್ಯಶಿಕ್ಷಕಿ ಕೆ.ಎಸ್.ರೇಖಾರಾಣಿ, ರಾಮ್ ಮನೋಹರ್ ಇತರರು ಇದ್ದರು.- - - -24ಕೆಡಿವಿಜಿ5:
ದಾವಣಗೆರೆಯಲ್ಲಿ ಮಂಗಳವಾರ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.