ಸಾಲೇಶ್ವರ ಸಂಘಕ್ಕೆ ₹56.15 ಲಕ್ಷ ಲಾಭ

| Published : Sep 23 2024, 01:16 AM IST

ಸಾಲೇಶ್ವರ ಸಂಘಕ್ಕೆ ₹56.15 ಲಕ್ಷ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ ಸರ್ವ ಸದಸ್ಯರ ಹಾಗೂ ಆಡಳಿತ ಮಂಡಳಿಯ ಪರಸ್ಪರ ಸಹಕಾರದಿಂದ 2023-24ನೇ ಸಾಲಿನಲ್ಲಿ ಸಂಘ ಅಭಿವೃದ್ಧಿಯ ಪಥದಲ್ಲಿದ್ದು ₹56,15,054-34 ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಶೇಖಾ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಂಘದ ಸರ್ವ ಸದಸ್ಯರ ಹಾಗೂ ಆಡಳಿತ ಮಂಡಳಿಯ ಪರಸ್ಪರ ಸಹಕಾರದಿಂದ 2023-24ನೇ ಸಾಲಿನಲ್ಲಿ ಸಂಘ ಅಭಿವೃದ್ಧಿಯ ಪಥದಲ್ಲಿದ್ದು ₹56,15,054-34 ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಶೇಖಾ ಹೇಳಿದರು.

ಇಲ್ಲಿನ ಶ್ರೀ ಸಾಲೇಶ್ವರ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 20ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು 2013ರಲ್ಲಿ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಹಕಾರಿ ಸಂಘವೆಂದು ಪ್ರಶಸ್ತಿ ಪಡೆದಿದ್ದು ನಮ್ಮ ಸದಸ್ಯರ, ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿಯವರ ಅವಿರತ ಪ್ರಯತ್ನವೇ ಕಾರಣವಾಗಿದೆ. ವರದಿಯ ವರ್ಷದ ಆರಂಭದಲ್ಲಿ ₹1,59,32,100 ಶೇರು ಬಂಡವಾಳ ಇದ್ದದ್ದು ವರ್ಷದ ಕೊನೆಗೆ ಅದು ₹2,01,30,400 ಶೇರು ಬಂಡವಾಳ ಆಗಿದೆ. ವರ್ಷದ ಆರಂಭದಲ್ಲಿ ₹3,76,05,348-26 ಗಳ ರಿಜರ್ವ್‌ ಫಂಡ್ ಮತ್ತು ಇತರ ನಿಧಿಗಳು ಇದ್ದು, ಪ್ರಸ್ತುತ ಅವಧಿಗೆ ₹4,22,55,788-34 ಆಗಿರುತ್ತದೆ. ಮಾರ್ಚ್‌ 2023ಕ್ಕೆ ಇದ್ದ ದುಡಿಯುವ ಬಂಡವಾಳ ₹48,45,25,224-26, ಮಾರ್ಚ್‌ 2024ಕ್ಕೆ ಅದು ₹48,67,72,598 ರಷ್ಟಾಗಿದೆ. ಸಂಘ ₹56,15,054-34 ನಿವ್ವಳ ಲಾಭಗಳಿಸಿದ್ದು, ಇದಕ್ಕೆ ಎಲ್ಲ ಸದಸ್ಯರ ಸಹಕಾರವೇ ಕಾರಣ. ಹೀಗಾಗಿ ಸೇರುದಾರರಿಗೆ ಪ್ರತಿಶತ 12 ರಷ್ಟು ಡಿವಿಡೆಂಡ್ ಕೊಡುವುದಾಗಿ ಘೋಷಣೆ ಮಾಡಿದರು. ಗ್ರಾಹಕರ ಅನುಕೂಲಕ್ಕಾಗಿ ಮೊಬೈಲ್ ಆಫ್‌ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಸಂಘದೊಂದಿಗೆ ಸರ್ವ ಸದಸ್ಯರು ಸಹಕಾರದಿಂದ ವ್ಯವಹರಿಸಿ ಸಂಘದ ಬೆಳವಣಿಗೆಗೆ ಕಾರಣರಾಗಬೇಕು. ಸಂಘವೂ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸೌಲತ್ತುಗಳನ್ನು ಒದಗಿಸಲು ಚಿಂತನೆ ಮಾಡುತ್ತಿದೆ. ಬಾಗಲಕೋಟೆ, ಹುಬ್ಬಳ್ಳಿ ಮತ್ತು ಲಕ್ಷ್ಮೇಶ್ವರದಲ್ಲಿ ಸಂಘ ಶಾಖೆಗಳನ್ನು ನಡೆಸುತ್ತಿದ್ದೂ, ಇಲ್ಲಿಯೂ ಪ್ರಗತಿ ಕಂಡು ಬಂದಿದೆ ಎಂದರು. ಸಭೆಯಲ್ಲಿ ಗುರುಸಿದ್ದೇಶ್ವರ ಮಠದ ಬಸವರಾ ಶ್ರೀಗಳು, ಗುರುಬಸವ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಸಂಗನಬಸಪ್ಪ ಚಿಂದಿ, ನಿರ್ದೇಶಕರಾದ ದೊಡ್ಡಬಸಪ್ಪ ಉಂಕಿ, ಗಂಗಾಧರ ಮದ್ದಾನಿ, ಬಸವರಾಜ ತೊಗರಿ, ಮಂಜುನಾಥ ರಾಜನಾಳ, ಪ್ರಕಾಶ ವಾಳದವುಂಕಿ, ಗಂಗಾಧರ ಮದ್ದಾನಿ, ಶ್ರೀಕಾಂತ ಭಾವಿ, ಭ್ಯಾಗ್ಯಾ ಉದ್ನೂರ, ನಾಗವೇಣಿ ಬಂಕಾಪೂರ ಹಾಗೂ ಮಾಜಿ ಅಧ್ಯಕ್ಷ ಚಂದ್ರಶೇಖರ ತಾಂಡೂರ ಇದ್ದರು.ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಸನ್ಮಾನಿಸಲಾಯಿತು. ಪ್ರಧಾನ ವ್ಯವಸ್ಥಾಪಕ ಆರ್.ಎನ್.ಜಿಡಗಿ ಠರಾವುಗಳನ್ನು ಓದಿ ಸರ್ವ ಸದಸ್ಯರ ಒಪ್ಪಿಗೆ ಪಡೆದರು.