ಸಾರಾಂಶ
ಕೆ.ಆರ್. ನಗರ : ಪ್ರತಿ ಪಕ್ಷದವರು ಅಭಿವೃದ್ಧಿಯ ಹಣ ಗ್ಯಾರಂಟಿಗೆ ಹೋಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಆದರೆ ಗ್ಯಾರಂಟಿ ಯೋಜನೆಗೆ ಪ್ರತ್ಯೇಕವಾಗಿ 56 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಹೊಸಕೋಟೆ ಗ್ರಾಮದಿಂದ ಕೆ.ಆರ್. ನಗರ ಮಾರ್ಗದ 17 ಕಿ.ಮೀ ರಸ್ತೆಯ 34.50 ಕೋಟಿ ರು. ವೆಚ್ಚದ ರಸ್ತೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಪಕ್ಷದ ಶಾಸಕರಿಗೆ ತಲಾ 30 ಅನುದಾನ ಕೊಡಲಾಗಿದೆ, ಸುಖಾಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನನ್ನ ಜೀವನವೇ ಹೋರಾಟ ಮತ್ತು ಸಂಘರ್ಷದಿಂದ ಬಂದಿದ್ದು ಅದೆ ರೀತಿ, ಬುದ್ದ, ಬಸವರ ಕನಸುಗಳನ್ನು ನನಸ್ಸು ಮಾಡುವುದುನಮ್ಮ ಗುರಿಯಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಸಾಕಷ್ಟು ಸಿಆರ್.ಎಫ್ ನಲ್ಲಿ 6 ಕೋಟಿ ಕೊಡಲಾಗಿದೆ ಅಲ್ಲದೆ ಕ್ಷೇತ್ರಕ್ಕೆ 52 ಕೋಟಿ ಅನುದಾನ ನೀಡಲಾಗಿದ್ದು, ಎಲ್ಲ ಶಾಸಕರಿಗೂ ಕೊಟ್ಟಿದ್ದೇನೆ, ನಮ್ಮ ಸರ್ಕಾರದ ಇದೆ ಎಂದು ಶಾಸಕ ಡಿ. ರವಿಶಂಕರ್ ಅವರು ನಿಮ್ಮೂರಿಗೆ ಮೊದಲ ಆದ್ಯತೆ ನೀಡಿದ್ದಾರೆ.
ಶಾಸಕ ಡಿ. ರವಿಶಂಕರ್ ಮಾತನಾಡಿ, ವಿಧಾನಸಭಾ ಚುನಾವಣೆಗೆ ಮುಂಚೆ ಜನಾರ್ಶೀವಾದ ಯಾತ್ರೆಯ ಸಂದರ್ಭದಲ್ಲಿ ಹಳ್ಳಿಗಳಿಗೆ ಬೇಟಿ ನೀಡಿದಾಗ ಕ್ಷೇತ್ರದ ಹಲವಾರು ಗ್ರಾಮದಲ್ಲಿ ರಸ್ತೆಗಳ ಸಮಸ್ಯೆ ಹೇಳಿ ಕೊಂಡಿದ್ದರು. ಅದರಂತೆ 20 ಕೋಟಿ ರು. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿದೆ, ಅದೇ ರೀತಿ ಪುರಸಭೆ ವೃತ್ತದಿಂದ ಚೀರ್ನಹಳ್ಳಿ ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣವಾಗಲಿದೆ. ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ವಿದ್ಯುಕ್ತವಾಗಿ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಮಾ. 1ರಂದು ಸಿಎಂ ರಿಂದ ಶಂಕುಸ್ಥಾಪನೆ:
ಕೆ.ಆರ್.ನಗರ ಕ್ಷೇತ್ರಕ್ಕೆ ಮೊದಲ ಬಾರಿಗೆ ರಸ್ತೆಗಳಿಗೆ ಅನುದಾನ ಕೊಟ್ಟಿದ್ದಾರೆ, ಕಪ್ಪಡಿ ಮತ್ತು ಗಂಧನಹಳ್ಳಿ ಸಂಪರ್ಕ ಸೇತುವೆಯನ್ನು ಕಬ್ಬಿಣದ ಸೇತುವೆಯಾಗಿ 25 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಮಾ. 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ಮಾಡಲಿದ್ದಾರೆ. ಅಂದೇ ಪಟ್ಟಣದ ಪುರಸಭೆ ಬಯಲು ರಂಗಮಂದಿರಲ್ಲಿ ಬೃಹತ್ ವೇದಿಕೆಯಲ್ಕಿ ಕ್ಷೇತ್ರದ ವಿವಿಧ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಚಾಲನೇ ನೀಡಿಲಿದ್ದಾರೆ ಎಂದು ಅವರ ಪ್ರಕಟಿಸಿದರು.
ಉರಿಲಿಂಗ ಪೆದ್ದಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ಕೆಪಿಸಿಸಿ ಸದಸ್ಯರಾದ ದೊಡ್ಡಸ್ವಾಮೇಗೌಡ, ಸಿ.ಪಿ. ರಮೇಶ್, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಎಂ. ರಮೇಶ್, ವೆಂಕಟೇಶ್, ಗ್ರಾಪಂ ಅಧ್ಯಕ್ಷ ಜಗದೀಶ್, ತಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜ್, ಪುರಸಭೆ ಅಧ್ಯಕ್ಷ ಶಿವುನಾಯಕ್ ಇದ್ದರು.