ಸಸಿಹಿತ್ಲು: ಮೇ 31ರಿಂದ 5ನೇ ರಾಷ್ಟ್ರೀಯ ಸರ್ಫಿಂಗ್‌

| Published : May 22 2024, 12:59 AM IST

ಸಸಿಹಿತ್ಲು: ಮೇ 31ರಿಂದ 5ನೇ ರಾಷ್ಟ್ರೀಯ ಸರ್ಫಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷರ ವಿಭಾಗ, ಮಹಿಳೆಯರ ವಿಭಾಗ, 16ರ ಕೆಳ ಹರೆಯದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ 2024ನೇ ಸಾಲಿನ ಎರಡನೇ ಹಾಗೂ 5ನೇ ಇಂಡಿಯನ್‌ ಓಪನ್‌ ಸರ್ಫಿಂಗ್‌ ಸ್ಪರ್ಧೆ ಮೇ 31ರಿಂದ ಜೂ.2ರ ವರೆಗೆ ಜರಗಲಿದೆಯೆಂದು ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅರುಣ್‌ ವಾಸು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸರ್ಫಿಂಗ್‌ ಅಸೋಸಿಯೇಶನ್‌ ಮಾನ್ಯತೆ ಪಡೆದ ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಮಂತ್ರ ಸರ್ಫಿಂಗ್‌ ಕ್ಲಬ್‌ ನ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಳೆದ ಮಾರ್ಚ್‌ನಲ್ಲಿ ಕೇರಳದ ವರ್ಕಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಇಂಡಿಯನ್‌ ಓಪನ್‌ ಸರ್ಫೀಂಗ್‌ ಸ್ಪರ್ಧೆ ನಡೆದಿದ್ದು ಈ ವರ್ಷದ ಎರಡನೇ ಸ್ಪರ್ಧೆಯು ಸಸಿಹತ್ಲುವಿನಲ್ಲಿ ನಡೆಯಲಿದೆ. ಪುರುಷರ ವಿಭಾಗ, ಮಹಿಳೆಯರ ವಿಭಾಗ, 16ರ ಕೆಳ ಹರೆಯದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಕೇರಳದಲ್ಲಿ ನಡೆದ ಸ್ಪರ್ಧೆಯ ಪುರುಷರ ವಿಭಾಗದ ಚಾಂಫಿಯನ್‌ ರಮೇಶ್‌ ಬುದಿಹಾಲ್‌, ಮಹಿಳೆಯರ ವಿಭಾಗದ ಚಾಂಪಿಯನ್‌ ಕಮಲಿ ಪಿ.,16 ರ ಕೆಳ ಹರೆಯದ ವಿಭಾಗದ ಚಾಂಪಿಯನ್‌ ಕಿಶೋರ್‌ ಕುಮಾರ್‌ ಹಾಗೂ ದೇಶದ ಟಾಪ್‌ ಕ್ಲಾಸ್‌ ಸರ್ಫಿಂಗ್‌ ಪಟುಗಳಾದ ಹರೀಶ್‌ ಎಂ., ಶ್ರೀಕಾಂತ್‌ ಡಿ., ಮಣಿಕಂದನ್‌ ಎಂ., ಕಮಲಿ ಮೂರ್ತಿ, ಶ್ಶ್ರಿಷ್ತಿ ಸೆಲ್ವಮ್‌, ಸಂಧ್ಯಾ ಅರುಣ್‌ ಮತ್ತಿತರ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.