ಸಾರಾಂಶ
ಚಾಮರಾಜನಗರ ಸಿದ್ದಗಂಗಾ ಕ್ಷೇತ್ರದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ೫ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಕ್ತವೃಂದದಿಂದ ವಿಶೇಷ ಪೂಜೆ, ಅನ್ನಸಂತರ್ಪಣೆ ಹಾಗೂ ಸಿದ್ದಗಂಗಾಶ್ರಿಗಳ ಕುರಿತ ಪುಸ್ತಕ ಬಿಡುಗಡೆ ಮಾಡಿ, ಉಚಿತವಾಗಿ ಹಂಚಿಕೆ ಮಾಡಲಾಯಿತು. ಉದ್ಯಾನವನದ ಮುಂಭಾಗದ ರಸ್ತೆಯಲ್ಲಿ ಶಾಮಿಯಾನ ಹಾಕಿ ಶ್ರೀ ಸಿದ್ದಗಂಗಾಶ್ರಿಗಳ ಭಾವವಿತ್ರವಿಟ್ಟು ಪೂಜೆ ಸಲ್ಲಿಸಲಾಯಿತು. ಹಿರಿಯರು ಹಾಗೂ ಮಾಜಿ ನಗರಸಭಾ ಸದಸ್ಯ ಡಾ. ಗಣೇಶ್ ದಿಕ್ಷೀತ್ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿದ್ದಗಂಗಾ ಶ್ರೀಗಳ ಕರುಣೆ ಮತ್ತು ನಿಷ್ಠೆ ಕೃತಿಯನ್ನು ಬಿಡುಗಡೆ ಮಾಡಿದರು. ಬಳಿಕ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಕ್ತವೃಂದದಿಂದ ವಿಶೇಷ ಪೂಜೆ । ಅನ್ನಸಂತರ್ಪಣೆ ಹಾಗೂ ಶ್ರೀಗಳ ಕುರಿತ ಪುಸ್ತಕ ಬಿಡುಗಡೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಸಿದ್ದಗಂಗಾ ಕ್ಷೇತ್ರದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ೫ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಕ್ತವೃಂದದಿಂದ ವಿಶೇಷ ಪೂಜೆ, ಅನ್ನಸಂತರ್ಪಣೆ ಹಾಗೂ ಸಿದ್ದಗಂಗಾಶ್ರಿಗಳ ಕುರಿತ ಪುಸ್ತಕ ಬಿಡುಗಡೆ ಮಾಡಿ, ಉಚಿತವಾಗಿ ಹಂಚಿಕೆ ಮಾಡಲಾಯಿತು.ಉದ್ಯಾನವನದ ಮುಂಭಾಗದ ರಸ್ತೆಯಲ್ಲಿ ಶಾಮಿಯಾನ ಹಾಕಿ ಶ್ರೀ ಸಿದ್ದಗಂಗಾಶ್ರಿಗಳ ಭಾವವಿತ್ರವಿಟ್ಟು ಪೂಜೆ ಸಲ್ಲಿಸಲಾಯಿತು. ಹಿರಿಯರು ಹಾಗೂ ಮಾಜಿ ನಗರಸಭಾ ಸದಸ್ಯ ಡಾ. ಗಣೇಶ್ ದಿಕ್ಷೀತ್ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿದ್ದಗಂಗಾ ಶ್ರೀಗಳ ಕರುಣೆ ಮತ್ತು ನಿಷ್ಠೆ ಕೃತಿಯನ್ನು ಬಿಡುಗಡೆ ಮಾಡಿದರು. ಬಳಿಕ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಸಿದ್ದಗಂಗಾ ಶ್ರೀಗಳ ಭಕ್ತರ ಬಳಗದ ಸೆಸ್ಕಾಂ ಸಹಾಯಕ ಎಂಜಿನಿಯರ್ ಪ್ರವೀಣ್ ಶ್ರೀಗಳ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ನಡೆದಾಡುವ ದೇವರು, ಅಭಿನವ ಬಸವಣ್ಣ ಎಂದೇ ಖ್ಯಾತರಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳು ಲಿಂಗೈಕ್ಯರಾಗಿ ಇಂದಿಗೆ ಐದು ವರ್ಷಗಳ ಕಳೆದವು. ಶ್ರೀಗಳು 111 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ, ಜನ ಮಾನಸದಲ್ಲಿ ಉಳಿಯುವ ಜೊತೆಗೆ ವಿಶ್ವಕ್ಕೆ ಮಾದರಿಯಾದ ದಾಸೋಹವನ್ನು ನೀಡಿದರು. ಮಹಾನ್ ತಪಸ್ವಿ ಶಕ್ತಿಯನ್ನು ಹೊಂದಿದ್ದ ಶ್ರೀಗಳ ದರ್ಶನಾಶೀರ್ವಾದ ಪಡೆದ ನಾವೆಲ್ಲರು ಪುಣ್ಯವಂತರು. ಇಂದು ಎಲ್ಲ ಕಡೆ ಶ್ರೀಗಳ ಸ್ಮರಣೆ ಮಾಡುವ ಜೊತೆಗೆ ದಾಸೋಹ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇಲ್ಲಿ ಭಾಗಿಯಾಗಿರುವುದು ನಮ್ಮೆಲ್ಲರ ಪುಣ್ಯ. ಅದೇ ಅವರ ಜೀವನಾಧರಿತ ಕೃತಿಗಳನ್ನು ಓದುವ ಮೂಲಕ ಅವರ ಸೇವೆಯನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸ ವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕೃತಿಯನ್ನು ಬಿಡುಗಡೆಗೊಳಿಸಿ, ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್ ಅವರು ಮಾತನಾಡಿ, ತುಮಕೂರು ಸಿದ್ದಗಂಗಾ ಕ್ಷೇತ್ರದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳು ಮಹಾನ್ ಸಾಧಕರು, ಅನ್ನ ದಾಸೋಹ, ಜ್ಞಾನ ದಾಸೋಹವನ್ನು ನೀಡುವ ಮೂಲಕ ಜಗತ್ತಿಗೆ ಪರಿಚಿತರಾದವರು. ಇವರ ಕಾಯಕ ತಪಸ್ಸು ನಮ್ಮೆಲ್ಲರಿಗೂ ದಾರಿ ದೀಪವಾಗಿದೆ. ಅವರನ್ನು ಮಾತನಾಡಿಸುವ ಮತ್ತು ಅವರ ಪಕ್ಕ ಕುಳಿತು ದರ್ಶನಾರ್ಶೀವಾದ ಪಡೆದುಕೊಳ್ಳುವ ಪುಣ್ಯ ನಮ್ಮದಾಗಿತ್ತು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಶಿವಣ್ಣ, ಬಳಗದ ಚೇತನ್, ನಾಗೇಂದ್ರ, ಮನು, ಸಂಜು, ಯೋಗಿ, ಕೋಕುಲ ಮೊದಲಾದವರು ಇದ್ದರು.