ಸಾರಾಂಶ
ಸ್ಕೂಟರ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ಅಡ್ಡಕಟ್ಟಿ ಹಲ್ಲೆ ಮಾಡಿ ೬.೧೮ ಲಕ್ಷ ರು., ಹಣ ದರೋಡೆ ಮಾಡಿರುವ ಘಟನೆ ಪಟ್ಟಣದ ಕಿಬ್ಬೆಟ್ಟ ಗ್ರಾಮದ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಪಟ್ಟಣ ಖಾಸಗಿ ಬಸ್ ನಿಲ್ದಾಣ ಸಮೀಪದ ಮಳಿಗೆಯ ಹೋಲ್ ಸೇಲ್ ಅಂಗಡಿಯ ಮಾಲಿಕ ಕೆ.ಎಂ.ನೇಮಿರಾಜ್ ಹಣ ಕಳೆದುಕೊಂಡವರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸ್ಕೂಟರ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ಅಡ್ಡಕಟ್ಟಿ ಹಲ್ಲೆ ಮಾಡಿ ೬.೧೮ ಲಕ್ಷ ರು., ಹಣ ದರೋಡೆ ಮಾಡಿರುವ ಘಟನೆ ಪಟ್ಟಣದ ಕಿಬ್ಬೆಟ್ಟ ಗ್ರಾಮದ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಪಟ್ಟಣ ಖಾಸಗಿ ಬಸ್ ನಿಲ್ದಾಣ ಸಮೀಪದ ಮಳಿಗೆಯ ಹೋಲ್ ಸೇಲ್ ಅಂಗಡಿಯ ಮಾಲಿಕ ಕೆ.ಎಂ.ನೇಮಿರಾಜ್ ಹಣ ಕಳೆದುಕೊಂಡವರು.
ಸೋಮವಾರ ರಾತ್ರಿ ಪತ್ನಿ ಆಶಾ ಅವರೊಂದಿಗೆ ಅಂಗಡಿಯ ಕೆಲಸ ಮುಗಿಸಿ, ವ್ಯಾಪಾರದ ಹಣವನ್ನು ಸ್ಕೂಟರ್‌ನಲ್ಲಿ ಇಟ್ಟುಕೊಂಡು ಕಿಬ್ಬೆಟ್ಟ ಗ್ರಾಮದ ಮನೆಗೆ ತೆರಳುತ್ತಿದ್ದ ಸಂದರ್ಭ, ಸಾಕ್ಷಿ ಕನ್ವೆನ್ಷನ್ ಹಾಲ್ ಸಮೀಪ ಕಾರು ಮತ್ತು ಬೈಕ್‌ನಲ್ಲಿ ಬಂದ ಐವರು ಆಗಂತುಕರು ಸ್ಕೂಟರ್ ಅಡ್ಡಗಟ್ಟಿ, ಆಶಾ ಅವರನ್ನು ತಳ್ಳಿ, ತಲೆಗೆ ಸ್ಟೀಲ್ ಪ್ಲಾಸ್ಕ್‌ನಿಂದ ಹಲ್ಲೆ ಮಾಡಿ, ನೇಮಿರಾಜ್ ಮುಖಕ್ಕೆ ಖಾರದ ಪುಡಿ ಎರಚಿ, ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ.ಸೋಮವಾರ ರಾತ್ರಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ನೇಮಿರಾಜ್ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಇನ್‌ಸ್ಪೆಕ್ಟರ್ ಮುದ್ದು ಮಹಾದೇವ್ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಸ್.ಪಿ.ರಾಮರಾಜನ್, ಡಿವೈಎಸ್‌ಪಿ ಗಂಗಾಧರಪ್ಪ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮಳೆ ಗಾಳಿಯಿಂದ ವಿದ್ಯುತ್ ಇಲ್ಲದ ಸಮಯದಲ್ಲಿ ಕಳ್ಳರು ಕೈಚಳಕ ತೋರಿಸುತ್ತಿದ್ದು, ಕಳ್ಳತನ ಪ್ರಕರಣಗಳೂ ನಡೆಯುತ್ತಿವೆ