ಸಾರಾಂಶ
ತುಳಸಿಗೇರಿ ಹನಮಪ್ಪನ ಹುಂಡಿಯಲ್ಲಿ ೬.೬೫ ಲಕ್ಷ ಸಂಗ್ರಹ
ಕಲಾದಗಿ: ತುಳಸಿಗೇರಿಯ ಶ್ರೀಮಾರುತೇಶ್ವರ ದೇವಾಲಯದ ನಾಲ್ಕು ಹುಂಡಿಯಲ್ಲಿ ಒಟ್ಟು ೬,೦೧,೭೬೫ ಸಂಗ್ರಹವಾಗಿದೆ.ಬಾಗಲಕೊಟೆ ತಹಸೀಲ್ದಾರ್ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗಳು ಅಮರೇಶ ಪಮ್ಮಾರ ಅವರ ನೇತೃತ್ವದಲ್ಲಿ ಹುಂಡಿ ಹಣ ಏಣಿಕೆ ನಡೆಯಿತು. ಕಂದಾಯ ಇಲಾಖಾ ಅಧಿಕಾರಿಗಳು ಹಾಗೂ ತುಳಸಿಗೇರಿಯಲ್ಲಿನ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಅಧಿಕಾರಿ ಹಾಗೂ ಸಿಬ್ಬಂದಿ ಸಹಯೋಗದಲ್ಲಿ ಹುಂಡಿ ಹಣ ಏಣಿಕೆ ಮಾಡಲಾಯಿತು. ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಡಿ.ಐ.ನೀಲುಗಲ್ಲ, ಉಪತಹಸೀಲ್ದಾರ್ ಎಸ್.ಬಿ.ಇಟಗಿ, ಕಲಾದಗಿ ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ತುಳಸಿಗೇರಿ ಗ್ರಾಮ ಆಡಳಿತಾಧಿಕಾರಿ ರವಿಕುಮಾರ ಕುಲ್ಲೊಳ್ಳಿ, ರವಿ ಚೆಲವಾದಿ, ಸಂತೋಷ ತೇಲಿ, ಶ್ರೀಕಾಂತ ಪಾಟೀಲ, ಸಂಜುಕುಮಾರ ಕೊಳ್ಳಿ, ಎಸ್.ಬಿ.ಸೊನ್ನದ, ಎಸ್.ಜಿ.ಕೋರಿ, ಪಿ.ಎಸ್.ಪೇಟಕರ ಇನ್ನಿತರರು ಇದ್ದರು.
----೧೪ಕೆಎಲ್‌ಡಿಜಿ-೧