ಎರಡು ದಿನಗಳಲ್ಲಿ 6 ಡೆಂಘೀ ಪ್ರಕರಣಗಳು ಪತ್ತೆ: ರೋಗಿಗಳಿಗೆ ಸೂಕ್ತ ಚಿಕಿತ್ಸೆ

| Published : Jul 12 2024, 01:39 AM IST

ಎರಡು ದಿನಗಳಲ್ಲಿ 6 ಡೆಂಘೀ ಪ್ರಕರಣಗಳು ಪತ್ತೆ: ರೋಗಿಗಳಿಗೆ ಸೂಕ್ತ ಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ತಾಲೂಕು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕೆ.ಎಂ.ದೊಡ್ಡಿ ಎರಡು. ಸಿ.ಎ.ಕೆರೆ ಹೋಬಳಿಯ ಗುರುದೇವರಹಳ್ಳಿಯಲ್ಲಿ ಎರಡು. ಕೊಪ್ಪ ಹಾಗೂ ಕೆ. ಹೊನ್ನಲಗೆರೆ ಗ್ರಾಮಗಳಲ್ಲಿ ತಲಾ ಒಂದು ಡೆಂಘೀ ಜ್ವರದ ಪ್ರಕರಣಗಳು ಕಂಡುಬಂದಿದೆ. ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ತಪಾಸಣೆ ನಡೆಸಿಸೂಕ್ತ ಚಿಕಿತ್ಸೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ಆರು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಆಯಾ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ತಪಾಸಣೆ ನಡೆಸಿಸೂಕ್ತ ಚಿಕಿತ್ಸೆ ನೀಡಲಾಗಿದೆ.

ತಾಲೂಕು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕೆ.ಎಂ.ದೊಡ್ಡಿ ಎರಡು. ಸಿ.ಎ.ಕೆರೆ ಹೋಬಳಿಯ ಗುರುದೇವರಹಳ್ಳಿಯಲ್ಲಿ ಎರಡು. ಕೊಪ್ಪ ಹಾಗೂ ಕೆ. ಹೊನ್ನಲಗೆರೆ ಗ್ರಾಮಗಳಲ್ಲಿ ತಲಾ ಒಂದು ಡೆಂಘೀ ಜ್ವರದ ಪ್ರಕರಣಗಳು ಕಂಡುಬಂದಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿ ಡಾ.ಬೆಟ್ಟಸ್ವಾಮಿಗೌಡ, ತಾಲೂಕು ಆರೋಗ್ಯ ಅಧಿಕಾರಿ ಡಾ. ರವೀಂದ್ರ ಬಿ.ಗೌಡ ಸೇರಿದಂತೆ ಇಲಾಖೆ ಸಿಬ್ಬಂದಿ ಡೆಂಘೀ ಜ್ವರದ ಪ್ರಕರಣಗಳು ಕಂಡುಬಂದಿರುವ ಗ್ರಾಮಗಳ ಮನೆಮನೆಗಳಿಗೆ ಭೇಟಿ ನೀಡಿ ಲಾರ್ವ ಸಮೀಕ್ಷೆ ನಡೆಸಿದ್ದಾರೆ.

ಅಲ್ಲದೇ, ನೀರಿನ ಮಾದರಿಗಳನ್ನು ಸಂಗ್ರಹಿಸಿ ಜಿಲ್ಲಾ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಡೆಂಘೀ ಮಾರಕ ರೋಗಗಳು ಬರುವ ಮುನ್ನ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಪ್ರಕರಣಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯಾಧಿಕಾರಿಗಳು ಮನವಿ ಮಾಡಿದರು.

ಈ ವೇಳೆ ಆರೋಗ್ಯ ಶಿಕ್ಷಣಾಧಿಕಾರಿ ತಮ್ಮೇಗೌಡ, ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ಡೆಂಘೀ ಜಾಗೃತಿ ವಿದ್ಯಾರ್ಥಿಗಳಿಗೆ ಅರಿವು

ಶ್ರೀರಂಗಪಟ್ಟಣ: ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ಡೆಂಘೀ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಸುರೇಶ್, ಸಹ ಶಿಕ್ಷಕರಾದ ರೇಣುಕಾದೇವಿ, ಭಾಸ್ಕರ್, ಗೋವಿಂದಯ್ಯ, ಶ್ರೀಕಾಂತ್, ಅಂಜಲಿ, ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ವೇತಲತಾ, ಸಿಎಚ್‌ಓ ರೂಪ, ಆಶಾ ಕಾರ್ಯಕರ್ತೆಯರಾದ ಕಲ್ಪನಾ, ಗೀತಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.