ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 123ರಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ, ರಾಜ್ಯ ಸರ್ಕಾರವು ದಾವಣಗೆರೆ ಜಿಲ್ಲೆಯ ಆರೂ ತಾಲೂಕು ಪಂಚಾಯಿತಿಗಳಿಗೆ ಮೀಸಲಾತಿ ನಿಗದಿಪಡಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
- ರಾಜ್ಯ ಸರ್ಕಾರ ಆದೇಶ । ಬರೋಬ್ಬರಿ ದಶಕದ ನಂತರ ಸ್ಥಳೀಯ ಮುಖಂಡರು, ಕಾರ್ಯಕರ್ತರಲ್ಲಿ ಮೂಡಿದ ರಣೋತ್ಸಾಹ
- - - ಕನ್ನಡಪ್ರಭ ವಾರ್ತೆ ದಾವಣಗೆರೆಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 123ರಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ, ರಾಜ್ಯ ಸರ್ಕಾರವು ದಾವಣಗೆರೆ ಜಿಲ್ಲೆಯ ಆರೂ ತಾಲೂಕು ಪಂಚಾಯಿತಿಗಳಿಗೆ ಮೀಸಲಾತಿ ನಿಗದಿಪಡಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆರೂ ತಾಪಂಗಳ ಒಟ್ಟು 98 ಸ್ಥಾನಗಳ ಪೈಕಿ 51 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಒಟ್ಟು ಸ್ಥಾನಗಳ ಪೈಕಿ ಅನುಸೂಚಿತ ಜಾತಿಗೆ 22 (12 ಮಹಿಳಾ ಮೀಸಲು), ಅನುಸೂಚಿತ ಪಂಗಡಕ್ಕೆ 14 (9), ಹಿಂದುಳಿದ ವರ್ಗ ಅ ವರ್ಗಕ್ಕೆ 10(7), ಹಿಂದುಳಿದ ವರ್ಗ ಬ ವರ್ಗಕ್ಕೆ 3 (1) ಸ್ಥಾನ, ಸಾಮಾನ್ಯ ವರ್ಗಕ್ಕೆ 51 (23) ಸ್ಥಾನಗಳು ಮೀಸಲಾಗಿದೆ.ನ್ಯಾಮತಿ ತಾಪಂ 9 ಸ್ಥಾನಗಳಲ್ಲಿ 5 ಮಹಿಳೆಯರಿಗೆ ಮೀಸಲಾಗಿದೆ. ಈ ಪೈಕಿ ಅನುಸೂಚಿತ ಜಾತಿಗೆ 2 (1 ಮಹಿಳೆ), ಅನುಸೂಚಿತ ಪಂಗಡಕ್ಕೆ 1 (1), ಹಿಂದುಳಿದ ವರ್ಗ ಅ 0(0), ಹಿಂದುಳಿದ ವರ್ಗ ಬ 5(2), ಸಾಮಾನ್ಯ ವರ್ಗಕ್ಕೆ 5(2) ಸ್ಥಾನ ಮೀಸಲಾಗಿದೆ. ಹೊನ್ನಾಳಿ ತಾಪಂನ ಒಟ್ಟು 13 ಸ್ಥಾನಗಳಲ್ಲಿ 7 ಸ್ಥಾನ ಮಹಿಳೆಗೆ ಮೀಸಲಾಗಿದ್ದು, ಅನುಸೂಚಿತ ಜಾತಿಗೆ 3(2), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ ಅ ಕ್ಕೆ 2(1), ಹಿಂದುಳಿದ ವರ್ಗ ಬ ಕ್ಕೆ 7(3), ಸಾಮಾನ್ಯ ವರ್ಗಕ್ಕೆ 7(3) ಸ್ಥಾನಗಳು ಮೀಸಲಾಗಿದೆ.
ಹರಿಹರ ತಾಪಂ ಒಟ್ಟು 15 ಸ್ಥಾನಗಳಲ್ಲಿ 8 ಮಹಿಳೆಗೆ ಮೀಸಲಾಗಿದೆ. ಈ ಪೈಕಿ ಅನುಸೂಚಿತ ಜಾತಿಗೆ 2(1), ಅನುಸೂಚಿತ ಪಂಗಡಕ್ಕೆ 2(1), ಹಿಂದುಳಿದ ವರ್ಗ ಅ ಕ್ಕೆ 2(1), ಹಿಂದುಳಿದ ವರ್ಗ ಬ ಕ್ಕೆ 1(1), ಸಾಮಾನ್ಯ ವರ್ಗಕ್ಕೆ 8(4) ಸ್ಥಾನ ಮೀಸಲಾಗಿದೆ. ಜಗಳೂರು ತಾಪಂ ಒಟ್ಟು 16 ಸ್ಥಾನಗಳಲ್ಲಿ 8 ಸ್ಥಾನ ಮಹಿಳೆಗೆ ಮೀಸಲಾಗಿದ್ದು, ಈ ಪೈಕಿ ಅನುಸೂಚಿತ ಜಾತಿಗೆ 4(2), ಅನುಸೂಚಿತ ಪಂಗಡಕ್ಕೆ 4(2), ಹಿಂದುಳಿದ ವರ್ಗ ಅ ಕ್ಕೆ 0(0), ಹಿಂದುಳಿದ ವರ್ಗ ಬ ಕ್ಕೆ 0(0), ಸಾಮಾನ್ಯ ವರ್ಗಕ್ಕೆ 8(4) ಸ್ಥಾನಗಳು ಮೀಸಲಾಗಿದೆ.ದಾವಣಗೆರೆ ತಾಪಂ ಒಟ್ಟು 21 ಸ್ಥಾನಗಳಲ್ಲಿ 11 ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದು, ಅನುಸೂಚಿತ ಜಾತಿಗೆ 5(3), ಅನುಸೂಚಿತ ಪಂಗಡಕ್ಕೆ 3(2), ಹಿಂದುಳಿದ ವರ್ಗ ಅ ಕ್ಕೆ 2(1), ಹಿಂದುಳಿದ ವರ್ಗ ಬ ಕ್ಕೆ 0(0), ಸಾಮಾನ್ಯ ವರ್ಗಕ್ಕೆ 11(5) ಸ್ಥಾನಗಳು, ಚನ್ನಗಿರಿ ತಾಪಂ ಒಟ್ಟು 24 ಸ್ಥಾನಗಳಲ್ಲಿ 12 ಸ್ಥಾನ ಮಹಿಳೆಯರಿಗೆ ಮೀಸಲಿದ್ದು, ಈ ಪೈಕಿ ಅನುಸೂಚಿತ ಜಾತಿಗೆ 6(3), ಅನುಸೂಚಿತ ಪಂಗಡಕ್ಕೆ 3(2), ಹಿಂದುಳಿದ ವರ್ಗ ಅ ಕ್ಕೆ 2(1), ಹಿಂದುಳಿದ ವರ್ಗ ಬ ಕ್ಕೆ 1(1), ಸಾಮಾನ್ಯ ವರ್ಗಕ್ಕೆ 51(23) ಸ್ಥಾನಗಳು ಮೀಸಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
- - -(ಬಾಕ್ಸ್)
* ಫೆಬ್ರುವರಿ 2016ರಲ್ಲಿ ಆಗಿತ್ತು ತಾಪಂ ಚುನಾವಣೆಕಳೆದ ನಾಲ್ಕೈದು ವರ್ಷಗಳಿಂದಲೂ ತಾಪಂ ಮೀಸಲಾತಿ ಘೋಷಣೆಯಾಗದೆ ನನೆಗುದಿಗೆ ಬಿದ್ದಿದ್ದು, ಚುನಾವಣೆ ಕಾರ್ಯಕರ್ತರು ಪಕ್ಷಾತೀತವಾಗಿ ನಿರಾಸೆಗೊಂಡಿದ್ದರು. ಅಧಿಕಾರಿಗಳ ಕೈಯಲ್ಲಿದ್ದ ಆಡಳಿತದಿಂದ ಸ್ಥಳೀಯ ಆಡಳಿತವು ವಿಕೇಂದ್ರೀಕರಣವೆಂಬ ಅರ್ಥ ಕಳೆದುಕೊಂಡಿತ್ತು. ಸ್ಥಳೀಯ ನಾಯಕರು, ಕಾರ್ಯಕರ್ತರಿಗೆ ಅಧಿಕಾರ ಇರಲಿಲ್ಲ. ಸ್ಥಳೀಯ ಮೂಲ ಸೌಕರ್ಯ, ಕೆಲಸ, ಕಾರ್ಯಗಳಿಗೂ ಶಾಸಕರು, ಸಚಿವರನ್ನು ಅಥವಾ ಆಯಾ ಕ್ಷೇತ್ರದ ಸಂಸದರನ್ನು ಭೇಟಿ ಮಾಡಬೇಕಾಗುತ್ತಿತ್ತು.
ಇದೀಗ ಮೀಸಲಾತಿ ಘೋಷಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ರಾಜಕೀಯ ಗರಿಗೆದರುತ್ತಿದ್ದು, ಹಳ್ಳಿ ರಾಜಕೀಯ ಶುರುವಾಗಲಿದೆ. ಮೀಸಲಾತಿ ಆಧರಿಸಿ, ಟಿಕೆಟ್ ಪಡೆಯುವ ಪ್ರಯತ್ನಗಳು, ಯಾವ ಕ್ಷೇತ್ರ ಸೂಕ್ತವೆಂಬ ಲೆಕ್ಕಾಚಾರದಲ್ಲೂ ಜನರು ಬುಧವಾರ ರಾತ್ರಿಯಿಂದಲೇ ಶುರು ಮಾಡಿಕೊಂಡಿದ್ದಾರೆ. ಫೆಬ್ರವರಿ 2016ರಲ್ಲಿ ತಾಪಂ ಚುನಾವಣೆಯಾಗಿತ್ತು, 2021ರಲ್ಲಿಯೇ ಮತ್ತೆ ಚುನಾವಣೆ ಆಗಬೇಕಾಗಿತ್ತು. ಆದರೆ, ಮೀಸಲಾತಿ ಗೊಂದಲದ ಕಾರಣಕ್ಕೆ ತಡವಾಗಿದ್ದರಿಂದ ಸಾಕಷ್ಟು ಗ್ರಾಮೀಣ ಮುಖಂಡರು, ಸ್ಥಳೀಯ ಮುಖಂಡರು ಭ್ರಮನಿರಸನರಾಗಿದ್ದರು. ಕಡೆಗೂ ಸರ್ಕಾರ ಮೀಸಲಾತಿ ಘೋಷಿಸಿದ್ದರಿಂದ ಸ್ಥಳೀಯ ಮುಖಂಡರಲ್ಲೂ ಉತ್ಸಾಹ ಮೂಡಿದಂತಾಗಿದೆ. ಇನ್ನು ಜಿಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಪಾಲಿಕೆಯ ಮೀಸಲಾತಿಯತ್ತ ಎಲ್ಲರ ಗಮನ ಹರಿದಿದೆ.- - -
(ಸಾಂದರ್ಭಿಕ ಚಿತ್ರ)