ಬಾಳೆಹೊನ್ನೂರು, ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಳೆದ ಒಂದೆರಡು ವರ್ಷಗಳಲ್ಲಿ ₹60 ಕೋಟಿಗೂ ಅಧಿಕ ಅನುದಾನ ವ್ಯಯಿಸ ಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಜೈ ಮಾತೃಭೂಮಿ ಆಟೋ ಚಾಲಕರ ಸಂಘ್ ಕನ್ನಡ ರಾಜ್ಯೋತ್ಸವದಲ್ಲಿ ಟಿ.ಡಿ.ರಾಜೇಗೌಡ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಳೆದ ಒಂದೆರಡು ವರ್ಷಗಳಲ್ಲಿ ₹60 ಕೋಟಿಗೂ ಅಧಿಕ ಅನುದಾನ ವ್ಯಯಿಸ ಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಜೈ ಮಾತೃಭೂಮಿ ಆಟೋ ಚಾಲಕರ ಸಂಘ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪಟ್ಟಣದ ಬಸ್ ನಿಲ್ದಾಣದ ಅಭಿವೃದ್ಧಿಗೆ ₹3 ಕೋಟಿಗೂ ಹೆಚ್ಚು ಅನುದಾನ ನೀಡಿದ್ದು ಸುಸಜ್ಜಿತವಾಗಿಸಲಾಗಿದೆ. ಬಾಳೆಹೊನ್ನೂರು-ಮಾಗುಂಡಿ ರಸ್ತೆ ಅಭಿವೃದ್ಧಿಗೆ, ವಸ್ತಾರೆ-ಶೃಂಗೇರಿ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ. ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಗುಂಡಿ ಮುಚ್ಚಲಾಗುವುದು.ಗುಂಡಿ ಮುಚ್ಚುವ ಕಾರ್ಯ ಎಲ್ಲಾದರೂ ಗುಣಮಟ್ಟದಲ್ಲಿ ಇಲ್ಲದಿದ್ದರೆ ಕೂಡಲೇ ಸಾರ್ವಜನಿಕರು ಅದನ್ನು ನನ್ನ ಗಮನಕ್ಕೆ ತರಬೇಕು. ಮಾರ್ಚ್ ವೇಳೆಗೆ ಅಗತ್ಯವಿರುವಲ್ಲಿ ಮರು ಡಾಂಬರೀಕರಣ ಮಾಡಲಾಗಿದೆ. ಇನ್ನೂ ಹಲವು ರಸ್ತೆಗಳ ಅಭಿವೃದ್ಧಿ ಯೋಜನೆ ನಮ್ಮ ಮುಂದಿದೆ ಎಂದರು.ಆಟೋ ಚಾಲಕರು ಶ್ರಮಿಕರಾಗಿದ್ದು, ಕನ್ನಡ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಕನ್ನಡಿಗರು ಸುಸಂಸ್ಕೃತರಾಗಿದ್ದು, ಯಾವುದೇ ಭಾಷಿಕರನ್ನು ಪ್ರೀತಿಸುವ ಮನಃಸ್ಥಿತಿ ಹೊಂದಿರುತ್ತಾರೆ. ಅನ್ಯ ರಾಜ್ಯದವರು ಕನ್ನಡ ನೆಲ, ಜಲವನ್ನು ಉಪಯೋಗಿಸಿಕೊಂಡು ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಅಂಗಡಿ ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಲು ಆದ್ಯತೆ ನೀಡಬೇಕು. ಕನ್ನಡ ನಾಮಫಲಕಕ್ಕೆ ಆದ್ಯತೆ ನೀಡದಿದ್ದರೆ ಆಟೋ ಚಾಲಕರು, ಹೋರಾಟಗಾರರು ಈ ಬಗ್ಗೆ ಗಮನಹರಿಸಬೇಕು ಎಂದರು.
ಉದ್ಯಮಿ ವಿಶ್ವನಾಥ್ ಗದ್ದೇಮನೆ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಐತಿಹಾಸಿಕ ದೇವಾಲಯ, ಪ್ರವಾಸಿ ತಾಣಗಳು ಇದ್ದರೂ ಸಹ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ. ಆಟೋ ಚಾಲಕರಿಗೆ ಪ್ರವಾಸಿಗರ ಬಾಡಿಗೆ ಹೆಚ್ಚಾಗಿ ದೊರೆ ಯುತ್ತಿಲ್ಲ. ಪ್ರವಾಸೋದ್ಯಮದಲ್ಲಿ ಶೃಂಗೇರಿ ಕ್ಷೇತ್ರ ಮಾದರಿಯಾಗಿಸಬೇಕಿದೆ.ಕ್ಷೇತ್ರದಲ್ಲಿ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಇಲ್ಲವಾಗಿದ್ದು, ಹೊರ ಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ. ಗುಣ ಮಟ್ಟದ ಆರೋಗ್ಯ ಸೇವೆ ಇಲ್ಲಿ ಲಭಿಸುತ್ತಿಲ್ಲ. ಇಂತಹ ಉದ್ಯಮ ಇದ್ದರೆ ಆಟೋದವರಿಗೆ ಹೆಚ್ಚಾಗಿ ಬಾಡಿಗೆ ಲಭ್ಯವಾಗಲಿದೆ ಎಂದರು.ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮಾತನಾಡಿ, ಕನ್ನಡದ ಇತಿಹಾಸ ನಮ್ಮ ಮಕ್ಕಳ ಮನಸ್ಸಿನಲ್ಲಿ ಉಳಿಯ ಬೇಕಿದೆ. ಕನ್ನಡ ಎಂದರೆ ಅದು ಆತ್ಮಾಭಿಮಾನ, ಸ್ವಾಭಿಮಾನ, ಗರ್ವವಾಗಿದೆ. ಆಟೋದವರಿಂದ ಕನ್ನಡದ ಉಳಿವು ಹೆಚ್ಚಾಗಿದೆ. ಕನ್ನಡಿಗರು ಸ್ವಾಭಿಮಾನಿಗಳಾಗಿದ್ದು, ದುರಭಿಮಾನಿಗಳಲ್ಲ. ನಮ್ಮ ಭಾಷೆಯ ಮಹತ್ವ ನಾವು ಪರ ಊರಿಗೆ ತೆರಳಿದಾಗ ತಿಳಿಯುತ್ತದೆ. ಕನ್ನಡ ನಮ್ಮ ಜೀವನಾಧಾರ, ಜೀವನಾಡಿ, ಪರಿಕ್ರಮವಾಗಿದೆ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಅವರಿಗೆ ಆಟೋ ಸಾಧಕ ರತ್ನ ಪ್ರಶಸ್ತಿ, ರಮೇಶ್ ಯಾದವ್ ಅವರಿಗೆ ಆಟೋ ರತ್ನ ಪ್ರಶಸ್ತಿ ಹಾಗೂ ಪ್ರವೀಣ್‌ನಾಯ್ಕ್ ಅವರಿಗೆ ಆಟೋ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಆಟೋ ಸಂಘದ ಅಧ್ಯಕ್ಷ ಎಸ್.ಸಂದೇಶ್, ಪ್ರಮುಖರಾದ ಎಂ.ಎಸ್.ಅರುಣೇಶ್, ಟಿ.ಎಂ.ನಾಗೇಶ್, ಕೆ.ಆರ್.ದೀಪಕ್ ಕೊಳಲೆ, ಎಚ್.ಗೋಪಾಲ್, ಸಿ.ಎಂ.ದ್ವಿಜಯ್, ನುಗ್ಗಿ ಜಗದೀಶ್, ಗಿರೀಶ್ ಕಾರ್‌ಗದ್ದೆ, ಗೇರುಬೈಲ್ ನಟರಾಜ್, ಕಾಫಿ ಗಿರೀಶ್, ಜಗದೀಶ್ ಅರಳೀಕೊಪ್ಪ, ಸುನೀಲ್ ಪ್ರಭು, ಮಧುಸೂದನ್, ರಾಜೇಶ್ ಮತ್ತಿತರರು ಇದ್ದರು. ೩೦ಬಿಹೆಚ್‌ಆರ್ ೩:ಬಾಳೆಹೊನ್ನೂರಿನ ಆಟೋ ಚಾಲಕರ ಸಂಘ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರವಿಚಂದ್ರ, ರಮೇಶ್ ಯಾದವ್, ಪ್ರವೀಣ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.