ಸಾರಾಂಶ
ಕೆಜಿಎಫ್ ನಗರಕ್ಕೆ ಆಗಮಿಸುವ ಅತಿ ಗಣ್ಯ ವಕ್ತಿಗಳು ಹಾಗೂ ಕೈಗಾರಿಕೆ ಸ್ಥಾಪನೆ ಮಾಡಲು ಬರುವ ಉದ್ಯಮಿಗಳು ತಂಗಲು ಸುಸಜ್ಜಿತವಾದ ವಸತಿ ಗೃಹಗಳನ್ನು ೫ ಎಕರೆ ಜಾಗದಲ್ಲಿ ೧೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು, ಇದರಿಂದ ಗಣ್ಯರು ಉದ್ಯಮಿಗಳು ನಗರದಲ್ಲಿ ತಂಗಲು ಅನುಕೂಲವಾಗಲಿದೆ
ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ತಾಲೂಕಿನ ಸಮಗ್ರ ರಸ್ತೆಗಳ ಅಭಿವೃದ್ದಿಗೆ ೬೦ ಕೋಟಿ ರು.ಗಳ ಅನುದಾನ ಪ್ರಸ್ತಾವನೆಗೆ ಅನುಮೋದನೆ ದೊರೆತ್ತಿದ್ದು, ಕೆಜಿಎಫ್ ಸುತ್ತಮುತ್ತ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಮತ್ತು ಕೈಗಾರಿಕಾ ಟೌನ್‌ಶಿಪ್ ನಿರ್ಮಾಣವಾಗಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.
ನಗರದ ಲೋಕೊಪಯೋಗಿ ಇಲಾಖೆಯ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ ಎಸ್‌ಹೆಚ್‌ಡಿಪಿ ಯೋಜನೆಯಡಿಯಲ್ಲಿ ೨೫ ಕೋಟಿ ರೂ.ಗಳ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದರು.ರಸ್ತೆಯ ಅಗಲೀಕರಣಕ್ಕೆ ಹಣ
ಕೆಜಿಎಫ್‌ನ ರಾಜ್‌ಕುಮಾರ್ ರಸ್ತೆ, ಪಾರಂಡಹಳ್ಳಿಯಿಂದ-ರಾಜಪೇಟೆ ರಸ್ತೆಯ ಅಗಲೀಕರಣಕ್ಕೆ ೧೨ ಕೋಟಿ ರೂ.ಗಳ ಅನುಮೋದನೆ ದೊರಕಿದೆ, ಗೀತಾ ರಸ್ತೆ ಡಾಂಬರೀಕರಣಕ್ಕೆ ೯೫ ಲಕ್ಷ, ಕೋಲಾರ-ವಿಕೋಟೆ ರಸ್ತೆಗೆ ೪ ಕೋಟಿ, ಪೈವ್ ಲೈಟ್ಸ್ ವೃತದಿಂದ ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನವರೆಗೆ ೧ ಕೋಟಿ, ಆಶೋಕ ನಗರದ ಜೋಡಿ ರಸ್ತೆಯ ರಸ್ತೆ, ಸೂರಜ್‌ಮಲ್ ವೃತ್ತ, ಸೂರಜ್‌ಮಲ್ ವೃತ್ತದಿಂದ ಪೋಸ್ಟ್‌ಅಫಸ್‌ವರೆಗೂ ೪ ಕೋಟಿ ರೂ.ಗಳ ರಸ್ತೆಗಳ ಅಭಿವೃದ್ದಿಗೆ ಅನುಮೋದನೆ ದೊರೆತಿರುವುದಾಗಿ ತಿಳಿಸಿದರು.ಅತ್ಯಾಧುನಿಕ ವಸತಿ ಗೃಹನಗರಕ್ಕೆ ಆಗಮಿಸುವ ಅತಿ ಗಣ್ಯ ವಕ್ತಿಗಳು ಹಾಗೂ ಕೈಗಾರಿಕೆ ಸ್ಥಾಪನೆ ಮಾಡಲು ಬರುವ ಉದ್ಯಮಿಗಳು ತಂಗಲು ಸುಸಜ್ಜಿತವಾದ ವಸತಿ ಗೃಹಗಳನ್ನು ೫ ಎಕರೆ ಜಾಗದಲ್ಲಿ ೧೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು, ಇದರಿಂದ ಗಣ್ಯರು ಉದ್ಯಮಿಗಳು ನಗರದಲ್ಲಿ ತಂಗಲು ಅನುಕೂಲವಾಗಲಿದೆ ಎಂದರು.ಸರ್ಕಾರಿ ಕಾಲೇಜಿಗೆ ಅನುದಾನ
ಕೆಜಿಎಫ್‌ನ ಸರಕಾರಿ ಪದವಿ ಕಾಲೇಜಿಗೆ ೩.೮೧ ಕೋಟಿ ರೂ.ಗಳ ಅನುದಾನ ಬಿಡುಗಡೆಗೊಂಡಿದ್ದು, ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ಅನುದಾನ ಬಳಸಲಾಗುವುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಇ ಕೆ.ಎಲ್‌ರಾಮಮೂರ್ತಿ, ಎಇಇ ರಾಜರಾಶೇಖರ್‌ಬಾಬು, ಇ.ಒ ಸೆಲ್ವಮಣಿ, ಭಾನುಪ್ರಕಾಶ್, ಸೋಮಶೇಖರ್, ಗುತ್ತಿಗೆದಾರಾದ ವೆಂಕಟರಾಮಗೌಡ, ಕೆ.ಎ.ಮುರಳಿ, ಎ.ಚನ್ನಾರೆಡ್ಡಿ, ಹರಿಕೃಷ್ಣ, ಶಿವಾನಂದ ರೆಡ್ಡಿ, ಚೆಂಗಾರೆಡ್ಡಿ ಇದ್ದರು.