ಸಾರಾಂಶ
ರಾಜಧಾನಿ ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಕ್ಯಾಂಪಸ್ ಬುಧವಾರ (ನ.6) ವಿಶ್ವದಾಖಲೆಯ 600 ಫಾರ್ಮುಲಾ ಫೆಸ್ಟ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಮೂರರಿಂದ ಹತ್ತು ವರ್ಷದೊಳಗಿನ ಸುಮಾರು 10 ಸಾವಿರ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಅನಾವರಣಗೊಳ್ಳಲಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಕ್ಯಾಂಪಸ್ ಬುಧವಾರ (ನ.6) ವಿಶ್ವದಾಖಲೆಯ 600 ಫಾರ್ಮುಲಾ ಫೆಸ್ಟ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಮೂರರಿಂದ ಹತ್ತು ವರ್ಷದೊಳಗಿನ ಸುಮಾರು 10 ಸಾವಿರ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಅನಾವರಣಗೊಳ್ಳಲಿವೆ.ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಶ್ರೀಚೈತನ್ಯ ಟೆಕ್ನೋ ಶಾಲೆಯು ಇಂತಹದ್ದೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸುವ ಜೊತೆಗೆ ಈ ಸ್ಪರ್ಧೆಯಲ್ಲಿ ತಮ್ಮ ಶಾಲೆಯ ಮಕ್ಕಳೂ ಅಪ್ರತಿಮ ಸಾಧನೆ ತೋರುವ ಮೂಲಕ ಇತಿಹಾಸ ಪುಟದಲ್ಲಿ ತಮ್ಮದೇ ಆದ ಮೈಲಿಗಲ್ಲು ಸೃಷ್ಟಿಸಲು 100 ದಿನಗಳ ಉತ್ತಮ ತರಬೇತಿಯೊಂದಿಗೆ ಸಜ್ಜುಗೊಳಿಸಿದೆ. 10 ರಾಜ್ಯಗಳ 120 ಶಾಲೆಗಳಿಂದ ಬರುತ್ತಿರುವ ಮೂರರಿಂದ ಹತ್ತು ವರ್ಷದೊಳಗಿನ ಸುಮಾರು 10 ಸಾವಿರ ಮಕ್ಕಳು ತಮ್ಮಲ್ಲಿನ ಅಪ್ರತಿಮ ಸಾಧನೆ ಮತ್ತು ನವೀನ ಆಲೋಚನೆಗಳನ್ನು ಅನಾವರಣಗೊಳಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಸೂಪರ್ ಹ್ಯಾಟ್ರಿಕ್ ಜಾಗತಿಕ ದಾಖಲೆಯ ಪ್ರಯತ್ನ ಇದಾಗಿದೆ. ಡಾ। ಬಿ.ಎಸ್.ರಾವ್ ಸ್ಥಾಪಿತ ಶ್ರೀಚೈತನ್ಯ ಶಾಲೆಯಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಚಾರ. ನಮ್ಮ ಶಾಲೆಯ ಮಕ್ಕಳ ಪ್ರತಿಭೆ ಇಡೀ ಜಗತ್ತಿಗೆ ಪ್ರಜ್ವಲಿಸಲಿಸುವಂತಾಗಲಿ ಸಂಸ್ಥೆಯ ಅಧ್ಯಕ್ಷರಾದ ಸೀಮಾ ಬೋಪಣ್ಣ ಮತ್ತು ಸಿಇಒ ಸುನೀಲ್ ಕುಮಾರ್ ಆಶಯ ವ್ಯಕ್ತಪಡಿಸಿದ್ದಾರೆ.