ಬಿಜಾಪುರ ಸೈನಿಕ ಶಾಲೆಯ 61ನೇ ಸಂಸ್ಥಾಪನಾ ದಿನ

| Published : Sep 18 2024, 01:59 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಸೈನಿಕ ಶಾಲೆಯ 61ನೇ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯತು.ಬೆಂಗಳೂರಿನ ಎವಿಎಸ್ಎಂ, ವಿಎಂ, ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಹೆಡ್ ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ ಏರ್ ಮಾರ್ಷಲ್ ನಾಗೇಶ್ ಕಪೂರ್ ಮಾತನಾಡಿ, ಉತ್ತಮ ಶಿಕ್ಷಣವು ಬಲವಾದ ಅಡಿಪಾಯವನ್ನು ಒದಗಿಸುತ್ತದೆ. ಈ ಆಧುನಿಕ ಮತ್ತು ಸ್ಪರ್ಧಾತ್ಮಕ ಪ್ರಪಂಚದ ಸವಾಲುಗಳನ್ನು ಎದುರಿಸಲು ಕೌಶಲ್ಯಗಳು ಅವಶ್ಯಕವಾಗಿವೆ. ಅವು ನಿಮ್ಮನ್ನು ಸದೃಢ ಗೊಳಿಸುತ್ತವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಸೈನಿಕ ಶಾಲೆಯ 61ನೇ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯತು.ಬೆಂಗಳೂರಿನ ಎವಿಎಸ್ಎಂ, ವಿಎಂ, ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಹೆಡ್ ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ ಏರ್ ಮಾರ್ಷಲ್ ನಾಗೇಶ್ ಕಪೂರ್ ಮಾತನಾಡಿ, ಉತ್ತಮ ಶಿಕ್ಷಣವು ಬಲವಾದ ಅಡಿಪಾಯವನ್ನು ಒದಗಿಸುತ್ತದೆ. ಈ ಆಧುನಿಕ ಮತ್ತು ಸ್ಪರ್ಧಾತ್ಮಕ ಪ್ರಪಂಚದ ಸವಾಲುಗಳನ್ನು ಎದುರಿಸಲು ಕೌಶಲ್ಯಗಳು ಅವಶ್ಯಕವಾಗಿವೆ. ಅವು ನಿಮ್ಮನ್ನು ಸದೃಢ ಗೊಳಿಸುತ್ತವೆ ಎಂದು ಹೇಳಿದರು.

ಆರು ದಶಕಗಳ ಕಾಲದ ಈ ಶಾಲೆಯ ಅದ್ಭುತ ಪಯಣವನ್ನು ಶ್ಲಾಂಘಿಸಿದ ಅವರು, ಈ ಅವಧಿಯಲ್ಲಿ ಶಾಲೆಯು ಹಲವಾರು ಸಾಧನೆಗಳನ್ನು ಮಾಡಿದೆ.ಅದರ ನಿರಂತರ ಪರಿಶ್ರಮದಿಂದ ಶಾಲೆಯ ಕೀರ್ತಿ ಅಜರಾಮರವಾಗಿರುವಂತೆ ಕಾರ್ಯ ಸಾಧನೆ ಮಾಡಿದೆ ಎಂದರು.

ಈ ಮಹತ್ವದ ಸಂದರ್ಭದಲ್ಲಿ ಸೃಜನ್ ಹೆಸರಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಚಟುವಟಿಕೆಗಳನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಕೆಡೆಟ್‌ಗಳು ನೃತ್ಯ, ಹಾಡು, ನೃತ್ಯರೂಪಕ, ಕಿರುನಾಟಕ, ಮತ್ತು ಪ್ಯಾಂಟೊಮೈಮ್ ನಂತಹ ವಿವಿಧ ರೂಪಕಗಳನ್ನು ಪ್ರದರ್ಶಿಸಿದರು.

ಏರ್ ಫೋರ್ಸ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷೆ ವಂದನಾ ಕಪೂರ್, ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಭಿಷ್ಟ್ , ಉಪ-ಪ್ರಾಚಾರ್ಯೆ ಕಮಾಂಡರ್ ಮೀನಾ ಕುಮಾರಿ, ಹಿರಿಯ ಮಾಸ್ಟರ್ ಪಿ.ಎಂ.ಶೆಟ್ಟಿ, ಸೈನಿಕ ಶಾಲೆಯ ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿ, ಶಾಲೆಯ ಎನ್.ಸಿ.ಸಿ. ಸಿಬ್ಬಂದಿ, ಕೆಡೆಟ್ ಗಳು, ಪಾಲಕರು ಉಪಸ್ಥಿತರಿದ್ದರು.