ಸಾರಾಂಶ
2023ರಲ್ಲಿ ಮಾಹೆಯ 19 ಸಂಶೋಧಕರು, 2024ರಲ್ಲಿ 37 ಸಂಶೋಧಕರು ಈ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈ ಸಂಶೋಧಕರು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಮತ್ತು ಜಾಗತಿಕ ಸಂಶೋಧನಾ ಆದ್ಯತೆಗಳಿಗೆ ನೀಡಿದ ಕೊಡುಗೆಗಳ ಮಾನದಂಡವನ್ನಾಧರಿಸಿ ಈ ಸ್ಥಾನ-ಮಾನವನ್ನು ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ 64 ಮಂದಿ ಸಂಶೋಧಕರು/ಪ್ರಾಧ್ಯಾಪಕರು ಸ್ಯಾನ್‌ಫೋರ್ಡ್ ವಿವಿ ಪ್ರಟಿಸಿರುವ ವಿಶ್ವದ ಟಾಪ್ 2 ಪರ್ಸಂಟೈಲ್ ಸಂಶೋಧಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.2023ರಲ್ಲಿ ಮಾಹೆಯ 19 ಸಂಶೋಧಕರು, 2024ರಲ್ಲಿ 37 ಸಂಶೋಧಕರು ಈ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈ ಸಂಶೋಧಕರು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಮತ್ತು ಜಾಗತಿಕ ಸಂಶೋಧನಾ ಆದ್ಯತೆಗಳಿಗೆ ನೀಡಿದ ಕೊಡುಗೆಗಳ ಮಾನದಂಡವನ್ನಾಧರಿಸಿ ಈ ಸ್ಥಾನ-ಮಾನವನ್ನು ನೀಡಲಾಗಿದೆ. ಇದು ಮಾಹೆಯಲ್ಲಿ ಹೆಚ್ಚುತ್ತಿರುವ ಸಂಶೋಧನಾ ಪ್ರಕ್ರಿಯೆಗಳು ಮತ್ತು ವೈವಿಧ್ಯಮಯ ವಿಭಾಗಗಳಲ್ಲಿ ಜ್ಞಾನವನ್ನು ಅರ್ಜಿಸುವ ಬದ್ಧತೆಯನ್ನು ಬಿಂಬಿಸುತ್ತಿದೆ ಎಂದು ಮಾಹೆ ಹೇಳಿದೆ.ಈ ಬಗ್ಗೆ ಮಾಹಿತಿ ನೀಡಿದ ಮಾಹೆಯ ಕುಲಪತಿ ಲೆ.ಜ. ಡಾ. ಎಂ.ಡಿ.ವೆಂಕಟೇಶ್, ಈ ಮೈಲಿಗಲ್ಲು ಜಾಗತಿಕ ಮಟ್ಟದಲ್ಲಿ ನಮ್ಮ ಅಧ್ಯಾಪಕರ ಸಮರ್ಪಣೆ ಮತ್ತು ವಿದ್ವತ್ಪೂರ್ಣ ಕೊಡುಗೆಗಳನ್ನು ತೋರಿಸುತ್ತದೆ. ಕೇವಲ 3 ವರ್ಷಗಳಲ್ಲಿ ಸಂಶೋಧಕರ ಸಂಖ್ಯೆಯು 19 ರಿಂದ 62ಕ್ಕೇರಿರುವುದು ಮಾಹೆಯ ಸಂಶೋಧನಾ ಸಂಸ್ಕೃತಿಯನ್ನು ಬೆಳೆಸುವ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ ಮತ್ತು ಮುಂದಿನ ಪೀಳಿಗೆಯ ಸಂಶೋಧಕರಿಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.ಮಾಹೆಯ ಹಿರಿಯ ಸಂಶೋಧನಾ ನಿರ್ದೇಶಕ ರವಿರಾಜ ಎನ್.ಎಸ್., ಪಟ್ಟಿಯಲ್ಲಿ ಸ್ಥಾನ ಪಡೆದಿರುವ 62 ಸಂಶೋಧಕರನ್ನು ಅಭಿನಂದಿಸಿದ್ದಾರೆ ಮತ್ತು ಈ ಮಾನ್ಯತೆಯು ಮಾಹೆಯ ಸಂಶೋಧನೆಯಲ್ಲಿ ಜಾಗತಿಕ ನಾಯಕತ್ವವನ್ನು ದೃಢಪಡಿಸಿದೆ. ಮಾಹೆಯ ಜಾಗತಿಕ ಸವಾಲುಗಳನ್ನು ಎದುರಿಸುವ ಮತ್ತು ಸಮಾಜದ ಮೇಲೆ ಸಕರಾತ್ಮಕ ಪರಿಣಾಮವನ್ನು ಬೀರುವ ಜ್ಞಾನದ ಪರಿಧಿಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.