62 ಗ್ರಾಮಗಳು ತಾಲೂಕಿಗೆ ಸೇರ್ಪಡೆಗೆ ಒತ್ತಾಯಿಸಿ ಹುಲಸೂರ ಬಂದ್‌

| Published : Mar 25 2025, 12:47 AM IST

ಸಾರಾಂಶ

ಬಸವಕಲ್ಯಾಣ ಜಿಲ್ಲಾ ರಚನಾ ಹೋರಾಟ ಸಮತಿಯಿಂದ ಸೋಮವಾರ ಹುಲಸೂರ ಬಂದ್‌ ಆಚರಿಸಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ ಭಾಲ್ಕಿ ತಾಲೂಕಿನ ಸಾಯಗಾಂವ ವೃತ್ತದ ಗ್ರಾಮಗಳು ಹುಲಸೂರ ತಾಲೂಕಿಗೆ ಸೇರ್ಪಡೆಯಾಗದ ಕಾರಣ ಈ ಹಳ್ಳಿಗಳ ಸೇರ್ಪಡೆ ಹಾಗೂ ಬಸವಕಲ್ಯಾಣ ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಬಸವಕಲ್ಯಾಣ ಜಿಲ್ಲಾ ರಚನಾ ಹೋರಾಟ ಸಮೀತಿಯಿಂದ ಸೋಮವಾರ ಹುಲಸೂರ ಬಂದ ಆಚರಿಸಲಾಯಿತು.ಬಂದ ಸಂದರ್ಭದಲ್ಲಿ ತಾಲೂಕು ಕೇಂದ್ರದ ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿದವು ಈ ನಿಮಿತ್ಯವಾಗಿ ಭವಾನಿ ಮಂದಿರದಿಂದ ತಹಸೀಲ ಕಛೇರಿ ವರೆಗೆ ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಯಿತು.ಹುಲಸೂರ ತಾಲೂಕು ರಚನೆಯಾದರು ಸಹ ಅದಕ್ಕೆ ಸೇರಬೇಕಾದ ಹಳ್ಳಿಗಳು ಸೇರಲಿಲ್ಲ ಈ ಕುರಿತು ಹಲವಾರು ಸಲ ಪ್ರತಿಭಟನೆಗಳು ನಡೆದರು ಸರ್ಕಾರ ಆದೇಶಿಸಿದರು ಅದು ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೋರಾಟ ಸಮೀತಿಯ ಸಂಚಾಲಕರಾದ ಎಂ.ಜಿ ರಾಜೋಳೆ, ಮಾಜಿ ಜಿ.ಪಂ ಅಧ್ಯಕ್ಷ ಅನೀಲ ಭೂಸಾರೆ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಮಾ.ಜಿ ಜಿಪಂ ಸದಸ್ಯ ಸುಧೀರ ಕಾಡಾದಿ, ಸಂಜು ಸುಗರೆ, ಪ್ರವೀಣ ಕಾಡಾದಿ, ಆಕಾಶ ಖಂಡಾಳೆ ಮುಂತಾದವರು ಈ ಪ್ರತಿಭಟನಾ ಮೇರವಣಿಗೆಯಲ್ಲಿ ಭಾಗವಹಿಸಿದರು.ನಂತರ ನಡೆದ ಧರಣಿ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.ಈ ಸಂಧರ್ಭದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ ಈ ತಾಲೂಕಿಗೆ ಸೇರಬೇಕಾದ ಗ್ರಾಮಗಳು ಶೀಘ್ರವೆ ಸೇರಿಸಬೇಕು ಇಲ್ಲವಾದರೆ ಈ ಕುರಿತು ಇನ್ನು ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ವಿಧಾನ ಪರಿಷತ ಸದಸ್ಯ ಎಂ.ಜಿ ಮೂಳೆ, ಮಾಜಿ ಜಿ.ಪಂ ಅಧ್ಯಕ್ಷ ಅನೀಲ ಭೂಸಾರೆ ಮಾತನಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಹೋರಾಟ ಸಮೀತಿಯ ಸಂಚಾಲಕ ಎಂ.ಜಿ ರಾಜೊಳೆ ಮಾತನಾಡಿ, ಸರ್ಕಾರ ಈಗಾಗಲೇ ಆದೇಶ ಮಾಡಿದರು ಸಾಯಗಾಂವ ವೃತ್ತದ ಗ್ರಾಮಗಳು ಹುಲಸೂರ ತಾಲೂಕಿಗೆ ವರ್ಗಾವಣೆ ಮಾಡಲು ವಿಳಂಬ ಧೋರಣೆ ಖಂಡನೀಯವಾಗಿದೆ ಮತ್ತು ಉಪವಿಭಾಗವಾದ ಬಸವಕಲ್ಯಾಣ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಹೆಚ್ಚುವರಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ ಶೀಘ್ರವೆ ಒಂದು ವಾರದ ಒಳಗಾಗಿ ಮೀನಿವಿಧಾನಸೌಧ ಅಡಿಗಲ್ಲು ಮಾಡಲಾಗುವುದು ಅಲ್ಲದೇ ಭಾಲ್ಕಿ ತಾಲೂಕಿನ ಸಾಯಗಾಂವ ಸರ್ಕಲ ಹಳ್ಳಿಗಳನ್ನು ಸರ್ಕಾರದ ಆದೇಶದಂತೆ ಹುಲಸೂರ ತಾಲೂಕಿಗೆ ವರ್ಗಾಯಿಸಲಾಗುವುದು ಎಂಬ ಆಶ್ವಾಸನೆ ನೀಡಿದರು. ಅಶ್ವಾಸನೆ ಹಿನ್ನಲೆಯಲ್ಲಿ ಹೋರಾಟಗಾರ ಎಂ.ಜಿ ರಾಜೋಳೆ ಆತ್ಮಹತ್ಯೆ ವಿಷಯ ಕೂಡ ಹಿಂಪಡೆದರು.ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸಿ ಬೀಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಹುಮನಾಬಾದ ಡಿವೈಎಸ್‌ಪಿ ಜೆ.ಎಸ್ ನ್ಯಾಮೆಗೌಡರ, ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ ಜೈನ, ಸಿಪಿಐ ಅಲಿಸಾಬ, ತಹಸಿಲ್ದಾರ ಶಿವಾನಂದ ಮೇತ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಎಂ.ಜಿ.ರಾಜೋಳೆರಿಂದ ಆತ್ಮಹತ್ಯೆಯ ಎಚ್ಚರಿಕೆ:

ಹುಲಸೂರು: ಭಾಲ್ಕಿ ತಾಲೂಕಿನ ಕೆಲ ಗ್ರಾಮಗಳು ಹುಲಸೂರು ತಾಲೂಕಿಗೆ ಸೇರ್ಪಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಸವಕಲ್ಯಾಣ ಜಿಲ್ಲಾ ರಚನಾ ಹೋರಾಟ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಹುಲಸೂರ ಬಂದ್‌ ಯಶಸ್ವಿಯಾಯಿತು.

ಈ ಮಧ್ಯೆ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ ಅವರು ಮಧ್ಯಾಹ್ನ 3.30ರವರೆಗೆ ರಾಜ್ಯ ಸರ್ಕಾರ ಸ್ಪಂದಿಸದೆ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಅದರಂತೆ ಸರ್ಕಾರದ ಪರವಾಗಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಹುಲಸೂರಿಗೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ ನಂತರ ರಾಜೋಳೆ ಅವರು ತಮ್ಮ ಎಚ್ಚರಿಕೆ ಹಿಂಪಡೆದರು.