ಶಾಶ್ವತ ಸೇವಾ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

| Published : Dec 02 2024, 01:18 AM IST

ಸಾರಾಂಶ

ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಪುಣ್ಯದ ಕೆಲಸ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಆಲನಹಳ್ಳಿಯಲ್ಲಿರುವ ಶಾಶ್ವತ ಸೇವಾ ಶಾಲೆಯಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಆಯಿಮಾತಾಜೀ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ, ಬರಹಗಾರ ಶಿ. ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದ ರಾಜ್ಯದ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಆಯಿ ಮಾತಾಜೀ ಪ್ರತಿಭಾ ಪುರಸ್ಕಾರವನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಪುಣ್ಯದ ಕೆಲಸ ಎಂದು ಶ್ಲಾಘಿಸಿದರು.

ವಿವಿಧ ಜಿಲ್ಲೆಗಳ ಜಿ.ಕೆ. ಚಿನ್ಮಯ್, ಚಿನ್ಮಯಿ ಶ್ರೀಪಾದ್ ಹೆಗಡೆ, ದರ್ಶನ್ ಸುಬ್ರಾಯ್ ಭಟ್, ಡಿ.ಎಂ. ಹರ್ಷಿತಾ, ಕೆ.ಎಂ. ಶ್ರೀರಾಮ್, ಡಿ.ಎಸ್. ಧನ್ವಿ, ಎಸ್. ಜಾಹ್ನವಿ, ಶಾಶ್ವತ ಶಾಲೆ ವಿದ್ಯಾರ್ಥಿಗಳಾದ ರಕ್ಷಿತಾ, ನಂದಿನಿ, ಸೋನು ಸೀರ್ವಿ, ತನು ಗುಪ್ತಾ ಅವರಿಗೆ ರಾಜ್ಯ ಮಟ್ಟದ ಆಯಿಮಾತಾಜೀ ನಗದು ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಇದೇ ವೇಳೆ ಶಾಲೆಯ ಕನ್ನಡ ಶಿಕ್ಷಕ ರಮೇಶ್ ತಾಯೂರು ಮತ್ತು ದೈಹಿಕ ಶಿಕ್ಷಕ ಪ್ರದೀಪ್ ಕುಮಾರ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ಚೌಧರಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕವಿ ಗೋವಿಂದಸ್ವಾಮಿ ಗುಂಡಾಪುರ, ಬಿಇಒ, ಬಿಆರ್ ಸಿ ಡಿ.ಎನ್. ಗೀತಾ, ಎಂ. ಚಂದ್ರಶೇಖರ್, ಬಿಆರ್ ಪಿ ಸುನೀಲ್, ಸಿಆರ್ ಪಿ ಸತೀಶ್, ಬಿ. ರೇಖಾ, ಮಹೇಶ್ ಚೋರನಹಳ್ಳಿ, ಶೋಭಾ ಮಧು, ಸುರೇಶ್, ಮುಖ್ಯಶಿಕ್ಷಕಿ ಎಚ್.ಪಿ. ಪವಿತ್ರಾ, ಸಹ ಮುಖ್ಯ ಶಿಕ್ಷಕ ರಮೇಶ್ ಇದ್ದರು.