ಈಗಾಗಲೇ ಗೋಕರ್ಣ, ಕುಮಟಾದಲ್ಲಿ 2ನೇ ಪ್ಲಾಟ್ ಫಾರ್ಮ್ ಮಾಡಲಾಗಿದೆ. ಭಟ್ಕಳದಲ್ಲೂ 2ನೇ ಪ್ಲಾಟ್ ಫಾರ್ಮ ವಿಸ್ತರಿಸುವ ಕೆಲಸ ಮಾಡಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಭಟ್ಕಳದಲ್ಲಿ ಎಸಿ 10.23 ಲಕ್ಷ ವೆಚ್ಚದಲ್ಲಿ ಎಸಿ ಲಾಂಜ್ ಸ್ಥಾಪಿಸಲಾಗಿದೆ.
ಭಟ್ಕಳ: ನಮ್ಮ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಕೊಂಕಣ ರೈಲ್ವೆ ಅಭಿವೃದ್ಧಿಗೆ ₹7000 ಕೋಟಿ ಅನುದಾನ ನೀಡಲು ಕ್ಯಾಬಿನೆಟ್ನಲ್ಲಿ ಮಂಜೂರು ಮಾಡಿದೆ. ಈ ಹಣ ಬಂದರೆ ಕೊಂಕಣ ರೈಲ್ವೆಯ ಮೂಲ ಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಇಲ್ಲಿನ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟಫಾರ್ಮನಲ್ಲಿ ಪ್ರಯಾಣಿಕ ಅನುಕೂಲಕ್ಕಾಗಿ ಆರಾಮದಾಯಕ ಮತ್ತು ಸುಗಮ ಪ್ರಯಾಣಕ್ಕೆ ಅನುಕೂಲವಾಗಲು ಎಸಿ ಲಾಂಜ್ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಂಕಣ ರೈಲ್ವೆ ಆಗಿ 36 ವರ್ಷ ಆಗಿದ್ದು, ಹೆಚ್ಚಿನ ಅಭಿವೃದ್ಧಿ ಕಾಣಲಿಲ್ಲ. ಈ ಮಾರ್ಗದಲ್ಲಿ ದಿನಂಪ್ರತಿ 85 ರೈಲುಗಳು ಸಂಚರಿಸುತ್ತಿವೆ. ಕರಾವಳಿ ಭಾಗದಲ್ಲಿ ಕೊಂಕಣ ರೈಲ್ವೆ ಅಭಿವೃದ್ಧಿ ಪಡಿಸಲು ನಾನು ಸಂಸದನಾದ ನಂತರ ಉಡುಪಿ, ದಕ್ಷಿಣ ಕನ್ನಡ ಸಂಸದರ ಜತೆಗೂಡಿ ರೈಲ್ವೆ ಸಚಿವರು, ಅಧಿಕಾರಿಗಳ ಜತೆ ಹಲವು ಸಲ ಬೇಡಿಕೆ ಸಲ್ಲಿಸಿದ್ದೇವೆ ಎಂದರು.ಈಗಾಗಲೇ ಗೋಕರ್ಣ, ಕುಮಟಾದಲ್ಲಿ 2ನೇ ಪ್ಲಾಟ್ ಫಾರ್ಮ್ ಮಾಡಲಾಗಿದೆ. ಭಟ್ಕಳದಲ್ಲೂ 2ನೇ ಪ್ಲಾಟ್ ಫಾರ್ಮ ವಿಸ್ತರಿಸುವ ಕೆಲಸ ಮಾಡಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಭಟ್ಕಳದಲ್ಲಿ ಎಸಿ 10.23 ಲಕ್ಷ ವೆಚ್ಚದಲ್ಲಿ ಎಸಿ ಲಾಂಜ್ ಸ್ಥಾಪಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಆಗಿದೆ. ಕೇಂದ್ರ ಸರ್ಕಾರದ ₹7000 ಕೋಟಿ ಅನುದಾನದಲ್ಲಿ ಕರಾವಳಿ ಭಾಗಕ್ಕೆ ₹300 ಕೋಟಿ ಅನುದಾನ ಸಿಗುವ ಸಾಧ್ಯತೆ ಇದ್ದು, ಇದರಲ್ಲಿ ಮುಖ್ಯವಾಗಿ ಸುರಂಗ ದುರಸ್ತಿ, ಡಬ್ಬಲ್ ಲೈನ್, ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಲಾಗುವುದು. ನಿರಂತರ ಒತ್ತಡದ ಫಲವಾಗಿ ವಂದೇ ಭಾರತ್ ರೈಲನ್ನು ನಮ್ಮ ಭಾಗಕ್ಕೆ ತರಲಾಗುತ್ತಿದೆ. ಜಿಲ್ಲೆಯಲ್ಲಿ ಕಾರವಾರ, ಗೋಕರ್ಣ, ಮುರುಡೇಶ್ವರದಲ್ಲಿ ಈ ರೈಲು ನಿಲುಗಡೆ ಆಗಲಿದೆ ಎಂದರು.
ಕೊಂಕಣ ರೈಲ್ವೆ ಕ್ಷೇತ್ರೀಯ ಪ್ರಬಂಧಕಿ ಆಶಾ ಶೆಟ್ಟಿ ಮಾತನಾಡಿ, ರೈಲ್ವೆ ನಿಲ್ದಾಣಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಹಲವು ಕೆಲಸಗಳನ್ನು ಮಾಡಲಾಗಿದೆ. ಕೆಲವು ಕಡೆ 2ನೇ ಪ್ಲಾಟ್ ಫಾರ್ಮ್ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಲಾಗಿದೆ. ಭಟ್ಕಳ ಮತ್ತು ಕಾರವಾರದಲ್ಲಿ ಎಸಿ ಲಾಂಜ್ ಸ್ಥಾಪಿಸಲಾಗಿದೆ. ಇದರ ಪ್ರಯೋಜನವನ್ನು ಪ್ರಯಾಣಿಕರು ಪಡೆಯಬೇಕೆಂದರು.ಡಿಸಿಎಂ ಗೋವಾದ ಪ್ರಬಂಧಕ ದಿಲೀಪ್ ಭಟ್ಟ, ಕಾರವಾರದ ಸಿಇ ವಿಜಯಕುಮಾರ, ಡಿವಿಸನಲ್ ಎಂಜಿನಿಯರ್ ಗಜಾನನ ಬಂಟ, ಕಮರ್ಷಿಯಲ್ ಮೆನೆಜರ್ ಮೀನಾ ಮುಂತಾದವರಿದ್ದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಸ್ವಾಗತಿಸಿದರು. ಸುಶೀಲಾ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಮುಖಂಡರು, ಸಾರ್ವಜನಿಕರಿದ್ದರು. ದೀಪಾವಳಿಗೆ ಸರ್ಕಾರದಿಂದ ಬೆಲೆ ಏರಿಕೆ ಬರೆ
ಭಟ್ಕಳ: ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆಗಿದೆ. ದೀಪಾವಳಿ ಹಬ್ಬಕ್ಕೆ ಸರ್ಕಾರ ಹಾಲು, ಬಸ್ ದರ ಏರಿಕೆ ಮಾಡಿ ಜನರಿಗೆ ಬರೆ ಎಳೆದಿದೆ ಎಂದು ಸಂಸದ ವಿಶ್ವೇಶ್ವರ ಹೆಗಡ ಕಾಗೇರಿ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿ ಆಗಿರುವುದರಿಂದ ಬಿಜೆಪಿಯವರು ಪ್ರತಿಭಟನೆ ನಡೆಸಿ ಸಾರ್ವಜನಿಕರಿಂದ ಭಿಕ್ಷೆ ಎತ್ತಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತು. ಆದರೆ ಸಾರ್ವಜನಿಕರು ಕಾಂಗ್ರೆಸ್ ಸರ್ಕಾರ ಭಿಕ್ಷೆ ಹಣವನ್ನೂ ಭ್ರಷ್ಟಾಚಾರ ಮಾಡಬಹುದೆಂಬ ಕಾರಣದಿಂದ ಕೊಡಲಿಲ್ಲ ಎಂದರು.ಎಸ್ಐಆರ್ ಸರಿಯಾಗಿ ಮಾಡಲಾಗಿದೆ. ಎಸ್ಐ ರ್ ಮೂಲಕ ಚುನಾವಣೆ ಆಯೋಗ ಅರ್ಹ ಮತದಾರರನ್ನು ಗುರುತಿಸಿದೆ. ಕಾಂಗ್ರೆಸ್, ಸಿಜೆಪಿ, ಕಮ್ಯುನಿಸ್ಟರು ಒಂದಾಗಿದ್ದು, ಮೊದಲು ಇಡಿ ಬಗ್ಗೆ ದೂರಿದರು. ಈಗ ವೋಟ್ ಚೋರಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಚುನಾವಣೆ ಆಯೋಗ ಸುಪ್ರೀಂ ಕೋರ್ಟಿಗೆ ಎಲ್ಲ ಮಾಹಿತಿ ನೀಡಿದೆ. ರಾಹುಲ್ ಗಾಂಧಿ ಸುಪ್ರೀಂ ಕೋರ್ಟಿಗೆ ಮೆರವಣೆ ಒಯ್ದಿರುವುದು ನಾಚಿಕೆಗೇಡಿನ ಸಂಗತಿ. ಇವಿಎಂ ಮಷಿನ್ ಮೂಲಕ ಗೆಲುವು ಸಾಧಿಸಿದ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡುತ್ತಾರಾ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಪ್ರಮುಖರಾದ ಗೋವಿಂದ ನಾಯ್ಕ, ಈಶ್ವರ ನಾಯ್ಕ, ಖೇದಾರ ಕೊಲ್ಲೆ, ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಶ್ರೀನಿವಾಸ ನಾಯ್ಕ ಮುಂತಾದವರಿದ್ದರು.