ಬಜಾಜ್ ಫೈನಾನ್ಸ್ ಹೆಸರಲ್ಲಿ 70 ಸಾವಿರ ವಂಚನೆ

| Published : Oct 09 2023, 12:45 AM IST

ಸಾರಾಂಶ

ದಾಬಸ್‌ಪೇಟೆ: ವ್ಯಕ್ತಿಯೊಬ್ಬರಿಗೆ ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಕರೆಮಾಡಿ ಆತನಿಂದ 69,950 ರು. ಹಣ ಪೋನ್‌ ಪೇ ಮೂಲಕ ಹಾಕಿಸಿಕೊಂಡು ಪಂಗನಾಮ ಹಾಕಿರುವ ಘಟನೆಯೊಂದು ನಡೆದಿದೆ.
ದಾಬಸ್‌ಪೇಟೆ: ವ್ಯಕ್ತಿಯೊಬ್ಬರಿಗೆ ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಕರೆಮಾಡಿ ಆತನಿಂದ 69,950 ರು. ಹಣ ಪೋನ್‌ ಪೇ ಮೂಲಕ ಹಾಕಿಸಿಕೊಂಡು ಪಂಗನಾಮ ಹಾಕಿರುವ ಘಟನೆಯೊಂದು ನಡೆದಿದೆ. ಸೋಂಪುರ ಹೋಬಳಿಯ ಬರಗೇನಹಳ್ಳಿ ರಂಗನಾಥ್ ವಂಚನೆಗೊಳಗಾದವರು. ಕಳೆದ ಸೆ.23ರಂದು ರಂಗನಾಥ್ ಎನ್ನುವವರಿಗೆ 7379424633 ನಂಬರ್‌ನಿಂದ ಕರೆ ಮಾಡಿ ನಾವು ಬಜಾಜ್ ಫೈನಾನ್ಸ್ ಕಂಪನಿಯಿಂದ ಮಾತನಾಡುತ್ತಿದ್ದು, ನಿಮಗೆ ಶೇ. 4 ಬಡ್ಡಿಯಂತೆ 3 ಲಕ್ಷ ಹಣ ಲೋನ್‌ ಕೊಡುತ್ತೇವೆ. ನೀವು ತಿಂಗಳಿಗೆ 8,857 ರು. ಕಟ್ಟಿಕೊಂಡು ಹೋಗಬೇಕೆಂದು ಹೇಳಿದ್ದಾರೆ. ಅದಕ್ಕೆ ಇವರು ಒಪ್ಪಿಕೊಂಡಿದ್ದು ನಂತರ ಪ್ರೊಸೆಸಿಂಗ್ ಚಾರ್ಜ್ 2,250 ರು. ಕಟ್ಟಬೇಕೆಂದು ಹೇಳಿದ್ದು ನಂತರ ಅವರು 8291260360 ಗೆ ಫೋನ್ ಪೇ ಮಾಡುವಂತೆ ತಿಳಿಸಿದ್ದಾರೆ. ನಂತರ ಕರೆ ಮಾಡಿ ಇನ್ಸೂರೆನ್ಸ್ ಚಾರ್ಜ್ 11,200 ಹಣ ಪೇ ಮಾಡಬೇಕೆಂದು ಹೇಳಿದ್ದಾರೆ. ಇವರು ಹಣ ಕಳಿಸಿದ ನಂತರ ಇವರ ವಾಟ್ಸ್ ಅಪ್‌ಗೆ ಆತನ ಬಜಾಜ್ ಫೈನಾನ್ಸ್ ಐಡಿಕಾರ್ಡ್, ಆಧಾರ್‌ಕಾರ್ಡ್, ಪಾನ್‌ಕಾರ್ಡ್ ಮತ್ತು ಕೆನರಾ ಬ್ಯಾಂಕ್ ಅಕೌಂಟ್ ನಂಬರ್ ಹಾಗೂ ಐಎಫ್‌ಎಸ್‌ಸಿ ಕೋಡ್‌ ಕಳುಹಿಸಿ, ನಿಮ್ಮ ಲೋನ್ ಪ್ರೊಸೆಸಿಂಗ್‌ನಲ್ಲಿದೆ ಎಂದಿದ್ದಾರೆ. ನಂತರ ಕರೆ ಮಾಡಿ ಜಿಎಸ್‌ಟಿ ಚಾರ್ಜ್ ಅಂತೇಳಿ 25,500 ಹಣ ಎನ್‌ಓಸಿ ಚಾರ್ಜ್ ಗಣ 35,200 ಹಣ ಕಟ್ಟಬೇಕು. ಇಲ್ಲವಾದರೆ ಲೋನ್ ಆಗುವುದಿಲ್ಲವೆಂದು ಹೇಳಿದಾಗ ಇವರು 25000 ಹಾಗೂ 6000 ರು. ಕಳುಹಿಸಿ ಇಷ್ಟೇ ಇರುವುದು ಅಂತ ಹೇಳಿದ್ದಾರೆ. ನಂತರ ಮರುದಿನ ಪುನಃ ಫೋನ್ ಮಾಡಿ ನಿಮ್ಮ ಲೋನ್ ಆರ್.ಬಿ.ಐನಲ್ಲಿ, ಹೋಲ್ಡ್‌ ಆಗಿದೆ. 29,500 ರು ಕಟ್ಟಿದರೆ ಮಾತ್ರ ಲೋನ್ ಆಗುತ್ತೆ. ಇಲ್ಲವಾದರೆ ಲೋನ್ ಆಗೋದಿಲ್ಲವೆಂದು ಹೇಳಿದ್ದಾರೆ. ನನ್ನ ಹತ್ತಿರ ಯಾವುದೇ ಹಣವಿಲ್ಲವೆಂದು ಹೇಳಿದ ಮೇಲೆ ಆತ ಫೋನೆ ಮಾಡಿಲ್ಲ. ನಂತರ ಬಜಾಜ್ ಪೈನಾನ್ಸ್ ಕಚೇರಿಯಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದಿದೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.