ಪೋಸ್ಟರ್ ಪ್ರೆಸೆಂಟೇಶನ್ ಮತ್ತು ರೀಲ್ಸ್ ಮೇಕಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಅರಣ್ಯ ವಲಯದ ವತಿಯಿಂದ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಅರಣ್ಯದ ಬಗ್ಗೆ ಮಾಹಿತಿ ನೀಡುವ ಪಾಡ್‌ಕಾಸ್ಟ್ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

72ನೇ ವನ್ಯಜೀವಿ ಸಪ್ತಾಹ ಅಂಗವಾಗಿ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ಎಸ್‌ಟಿಜಿ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ವತಿಯಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ 500ಕ್ಕೂ ಹೆಚ್ಚು ಸೀಡ್ ಬಾಲ್ (ಬೀಜದ ಉಂಡೆ) ಬಿತ್ತನೆ ಮಾಡಿದರು.

ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಪರಿಸರ ಸಂರಕ್ಷಣಾ ಘಟಕ, ಸಸ್ಯಶಾಸ್ತ್ರ ವಿಭಾಗ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ, ಐಐಸಿ ಮತ್ತು ಪಾಂಡವಪುರ ಅರಣ್ಯ ವಲಯ ಸಹಯೋಗದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 3:30ರವರೆಗೆ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಅರಣ್ಯ ನರ್ಸರಿ ಬಗ್ಗೆ ಮಾಹಿತಿ ಹಾಗೂ ಅರಿವು ಮೂಡಿಸಲಾಯಿತು.

ನಂತರ ಕಾಲೇಜಿನ ಎವಿ ರೂಂನಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆ ಮತ್ತು ಅರಣ್ಯದ ಅವಶ್ಯಕತೆ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು.

ನಂತರ ಪೋಸ್ಟರ್ ಪ್ರೆಸೆಂಟೇಶನ್ ಮತ್ತು ರೀಲ್ಸ್ ಮೇಕಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಅರಣ್ಯ ವಲಯದ ವತಿಯಿಂದ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಅರಣ್ಯದ ಬಗ್ಗೆ ಮಾಹಿತಿ ನೀಡುವ ಪಾಡ್‌ಕಾಸ್ಟ್ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಲಾಯಿತು.

ಮಂಡ್ಯ ಟೆರಿಟೋರಿಯಲ್ ವಿಭಾಗದ ಡಿಸಿಎಫ್ ಡಿ.ರಘು ಮಾತನಾಡಿ, ಪರಿಸರ, ಅರಣ್ಯ, ಪ್ರಾಣಿ ಸಂರಕ್ಷಣೆಯ ಮಹತ್ವ ಹಾಗೂ ಪರಿಸರ- ಅರಣ್ಯ - ಪ್ರಾಣಿ - ಮಾನವರ ಸಮತೋಲನ ಜೀವನ ಎಷ್ಟು ಮುಖ್ಯ ಎಂಬುದರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಎಸ್ ಟಿಜಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಅವರು ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿ, ಅರಣ್ಯ ಸಂರಕ್ಷಣೆಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್. ಪುಟ್ಟರಾಜು ಹಾಗೂ ಕಾರ್ಯದರ್ಶಿ ಸಿ.ಪಿ.ಶಿವರಾಜು ಅವರಿಗೆ ಧನ್ಯವಾದ ಅರ್ಪಿಸಿದರು. ನಂತರ ಆರ್ ಎಫ್ ಓ ಡಿ.ಎಂ.ವಿನೋದ್ ಕುಮಾರ್ ಪಿಪಿಟಿ ಪ್ರೆಸೆಂಟೇಶನ್ ಮೂಲಕ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಎಷ್ಠು ಮುಖ್ಯ ಮತ್ತು ಅವಿಭಾಜ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಇದೇ ವೇಳೆ ವಿದ್ಯಾರ್ಥಿಗಳು ಅರಣ್ಯ ಮತ್ತು ಅರಣ್ಯ ಜೀವಿಗಳ ಸಂರಕ್ಷಣೆ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನ್ಯಾಕ್ ಘಟಕದ ಸಂಯೋಜಕ ಎಚ್.ಚರಣ್‌ರಾಜ್, ಎನ್‌ಎಸ್‌ಎಸ್ ಘಟಕದ ಸಂಯೋಜಕ ಡಾ.ವಿ.ಶ್ರೀಧರ್ ಹಾಗೂ ಅರಣ್ಯ ಇಲಾಖೆಯ ಧಮೇಂದ್ರ, ಪ್ರಶಾಂತ್, ಸೋಮು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.