ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಮೂಡಲಗಿ ಕುರುಹಿನಶೆಟ್ಟಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು 2023-24ನೇ ಆರ್ಥಿಕ ವರ್ಷದಲ್ಲಿ ₹74.93 ಕೋಟಿ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಬಸಪ್ಪ ಚಿ. ಮುಗಳಖೋಡ ಹೇಳಿದರು.ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ 29ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿಯು 14 ಶಾಖೆಗಳನ್ನು ಹೊಂದಿದ್ದು,
ಬರುವ ದಿನಗಳಲ್ಲಿ ಇನ್ನೂ ಐದು ಶಾಖೆ ಪ್ರಾರಂಭಿಸಲಾಗುವುದು. ತುಕ್ಕಾನಟ್ಟಿ, ರಾಮದುರ್ಗ ಮತ್ತು ತೇರದಾಳ ಶಾಖೆಗಳು ಸ್ವಂತ ಕಟ್ಟಡ ಹೊಂದಿವೆ. ಪ್ರತಿ ವರ್ಷ ಅಡಿಟ್‌ದಲ್ಲಿ ’ಅ’ ಶ್ರೇಣಿ ಪಡೆದು ಗ್ರಾಹಕರ ವಿಶ್ವಾಸವನ್ನು ಕಾಯ್ದುಕೊಂಡು ಬಂದಿದೆ ಎಂದು ಹೇಳಿದರು.ಸೊಸೈಟಿಯು ಸದ್ಯ ₹3.90 ಕೋಟಿ ಷೇರು ಬಂಡವಾಳ, ₹230. 85 ಕೋಟಿ ಠೇವು ಸಂಗ್ರಹಿಸಿ ಒಟ್ಟು ₹269.40 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸೊಸೈಟಿಯು ಕೃಷಿ, ವಾಹನ, ಮಾಧ್ಯಮಾವಧಿ, ಠೇವುಗಳ ಮೇಲೆ, ನಗದು ಪತ್ತಿನ , ಬಂಗಾರ, ಕಟ್ಟಡ, ವೇತನ ಆಧಾರಿತ ಹಾಗೂ ನೇಕಾರರ ಸಾಲ ಸೇರಿದಂತೆ ವಿವಿಧ ಕ್ಷೇತ್ರಗಳ ಗ್ರಾಹಕರಿಗೆ ಒಟ್ಟು ₹162.41 ಕೋಟಿ ಸಾಲ ನೀಡಿದೆ ಎಂದು ಹೇಳಿದರು.
ಗೋಕಾಕದ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಸೊಸೈಟಿಯಿಂದ ಒಂದೇ ಸೂರಿನಲ್ಲಿ ಗ್ರಾಹಕರಿಗೆ ಬೇಕಾಗುವ ಎಲ್ಲ ಅಗತ್ಯ ವಸ್ತುಗಳು ಸಿಗುವ ಮಳಿಗೆ ತೆರೆಯಬೇಕು, ಹೊರರಾಜ್ಯಗಳಲ್ಲೂ ಕಾರ್ಯಕ್ಷೇತ್ರ ವಿಸ್ತಿರಿಸುವ ಗುರಿ ಹೊಂದಬೇಕು ಎಂದರು.ರಾಮದುರ್ಗ ಶಾಖಾ ಸಲಹಾ ಸಮಿತಿ ಸದಸ್ಯ ಶಂಕ್ರಯ್ಯ ಹಿರೇಮಠ ಮಾತನಾಡಿದರು. ಸೊಸೈಟಿಯ ಪ್ರಧಾನ ಕಾರ್ಯದರ್ಶಿ ರಮೇಶ ವಂಟಗೂಡಿ ಪ್ರಾಸ್ತಾವಿಕ ಮಾತನಾಡಿದರು.
ವಿವಿಧ ಇಲಾಖೆಗಳಲ್ಲಿ ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.ಸೊಸೈಟಿ ಉಪಾಧ್ಯಕ್ಷ ಲಕ್ಷ್ಮಪ್ಪ ಪೂಜೇರಿ, ನಿರ್ದೇಶಕರಾದ ಸುಭಾಷ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಗೊಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಶಾಂತವ್ವ ಬೊರಗಲ್, ಮಾಹಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ ಹಾಗೂ ವಿವಿಧ ಶಾಖಾ ಸಲಹಾ ಸಮಿತಿಯ ದಶರಥ ಹುಲಕುಂದ, ಇಬ್ರಾಹೀಂ ಖೇಮಲಾಪೂರ, ಬಸವರಾಜ ಬಟಕುರ್ಕಿ, ಲಲಿತಾ ಹೊಸೂರ, ಸರವರಖಾನ ಇನಾಮದಾರ, ಸಂಜಯ ವಸ್ತ್ರದ, ಶಂಕ್ರಯ್ಯ ಹಿರೇಮಠ, ಪ್ರಶಾಂತ ಬದನಿಕಾಯಿ, ಮಲ್ಲಿಕಾರ್ಜುನ ಚಟ್ಟಿ, ಮಲ್ಲಕಾರ್ಜುನ ಲೋಕನ್ನವರ, ಕುತಬುದ್ದಿನ ದಬಾಡಿ, ಬಸವರಾಜ ಕಾಜಗಾರ, ವೆಂಕಾಜಿನಾಯ್ಕ ಪಾಟೀಲ, ವೀರಣಗೌಡ ಪಾಟೀಲ ಮತ್ತಿತರು ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಕಾಂತ ಕೊಡತೆ ನಿರೂಪಿಸಿದರು ಪ್ರಮೋದ್ ಯಲಬ್ಬುರ್ಗಮಠ ವಂದಿಸಿದರು.