೨೦೨೪ರಲ್ಲಿ ೭೪ ಮಂದಿ ಅಪಘಾತದಲ್ಲಿ ಸಾವು!

| Published : Jan 12 2025, 01:17 AM IST

೨೦೨೪ರಲ್ಲಿ ೭೪ ಮಂದಿ ಅಪಘಾತದಲ್ಲಿ ಸಾವು!
Share this Article
  • FB
  • TW
  • Linkdin
  • Email

ಸಾರಾಂಶ

೨೦೨೪ರ ಅವಧಿಯಲ್ಲಿ ತಾಲೂಕಿನಲ್ಲಿ ೨೦೨ ರಸ್ತೆ ಅಪಘಾತದ ಪ್ರಕರಣದಲ್ಲಿ ೭೪ ಮಂದಿ ಸಾವನ್ನಪ್ಪಿದ್ದು, ೧೨೦ಕ್ಕೂ ಹೆಚ್ಚು ಮಂದಿಗೆ ವಿವಿಧ ರೀತಿಯ ಗಾಯಾಳುಗಳಾಗಿದ್ದಾರೆ.

ರಂಗೂಪುರ ಶಿವಕುಮಾರ್

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

೨೦೨೪ರ ಅವಧಿಯಲ್ಲಿ ತಾಲೂಕಿನಲ್ಲಿ ೨೦೨ ರಸ್ತೆ ಅಪಘಾತದ ಪ್ರಕರಣದಲ್ಲಿ ೭೪ ಮಂದಿ ಸಾವನ್ನಪ್ಪಿದ್ದು, ೧೨೦ಕ್ಕೂ ಹೆಚ್ಚು ಮಂದಿಗೆ ವಿವಿಧ ರೀತಿಯ ಗಾಯಾಳುಗಳಾಗಿದ್ದಾರೆ.

ತಾಲೂಕಿನ ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತಗಳು ನಡೆದಿವೆ. ಅಂಥ ಬೀಕರ ಅಪಘಾತಗಳು ನಡೆದಿಲ್ಲ. ಕೇವಲ ೨ ಅಥವಾ ೩ ಮಂದಿ ಒಂದೆರಡು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಾಲೂಕಿನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇದ್ದರೂ ಸಾವಿನ ಸಂಖ್ಯೆ ಹೆಚ್ಚಿವೆ ಇದು ಅಘಾತಕಾರಿ ವಿಷಯವಾಗಿದೆ.

೧೩ ಲಕ್ಷಕ್ಕೂ ಹೆಚ್ಚು ದಂಡ:

ತಾಲೂಕಿನ ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಠಾಣೆಯಲ್ಲಿ ೨೦೨೪ ನೇ ಸಾಲಿನಲ್ಲಿ ೧೩೧೪೫೦೦ ಲಕ್ಷಕ್ಕೂ ಹೆಚ್ಚು ದಂಡವನ್ನು ವಿವಿಧ ಪ್ರಕರಣದಲ್ಲಿ ಪೊಲೀಸರು ವಸೂಲಿ ಮಾಡಿದ್ದಾರೆ. ಚಾಲಕ/ಮಾಲೀಕ ಕುಡಿದು ಚಾಲನೆ ಮಾಡುವ ವೇಳೆ ಹೆಚ್ಚಿನ ಕೇಸುಗಳಿಲ್ಲ. ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವಿಲ್ಲದಿರುವುದರಿಂದ ದಂಡ ಕಟ್ಟುವುದು ಹೆಚ್ಚಾಗಿದೆ. ಅತೀ ವೇಗ, ತ್ರಿಬಲ್ ರೈಡ್, ಡ್ರೈವಿಂಗ್‌ ಲೈಸನ್ಸ್ ಇಲ್ಲ, ಮೊಬೈಲ್ ಚಾಲನೆ ಹಾಗೂ ವಾಹನಗಳಿಗೆ ವಿಮೆ ಹಣ ಕಟ್ಟದಿರುವ ಕೇಸುಗಳು ಸೇರಿವೆ.

ಗುಂಡ್ಲುಪೇಟೆ, ಬೇಗೂರು ಠಾಣಾ ವ್ಯಾಪ್ತಿಯ ಮೈಸೂರು-ಊಟಿ ಹಾಗೂ ಗುಂಡ್ಲುಪೇಟೆ-ಕೇರಳ ಹೆದ್ದಾರಿ ನಾಲ್ಕು ಪಥದ ರಸ್ತೆಯಾಗುವ ತನಕ ಅಪಘಾತಗಳ ಸಂಖ್ಯೆ ಇಳಿಮುಖವಾಗುವುದಿಲ್ಲ. ನಂಜನಗೂಡು-ಗುಂಡ್ಲುಪೇಟೆ ಮಾರ್ಗ ಮೇಲುಕಾಮನಹಳ್ಳಿ ಹಾಗೂ ಮದ್ದೂರು ತನಕ ನಾಲ್ಕು ಪಥ ರಸ್ತೆಯಾದರೆ ಜನರ ಸಾವು-ನೋವುಗಳು ತಪ್ಪಲಿದೆ.

-ಎಸ್.ಪರಶಿವಮೂರ್ತಿ, ಪಿಐ, ಗುಂಡ್ಲುಪೇಟೆ

ʼವಾಹನ ಮಾಲೀಕರು ಹಾಗೂ ಚಾಲಕರು ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಿದರೂ ನಿಯಮ ಪಾಲಿಸುತ್ತಿಲ್ಲ. ಮೈಸೂರು-ಊಟಿ, ಕೇರಳ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಳವಾಗಿದೆ. ರಸ್ತೆ ಅಗಲೀಕರಣವಾಗಬೇಕು. ಟ್ರಾಫಿಕ್‌ ಹೆಚ್ಚಳದ ಸಮಯದಲ್ಲಿ ಬೈಕ್‌ ಸವಾರರ ಪ್ರಾಣ ಹೋಗುತ್ತಿದೆ. ಆ ಸಮಯದಲ್ಲಿ ಎಚ್ಚರವಹಿಸಬೇಕು.

-ವನರಾಜು ವಿ.ಸಿ, ಸಿಪಿಐ, ಬೇಗೂರು ಠಾಣೆ

ಪೊಲೀಸರು ಸಂಚಾರ ನಿಯಮ ಉಲ್ಲಂಘನೆಗಳ ಬಗ್ಗೆ ದಂಡ ಹಾಕುತ್ತಾರೆ. ದಂಡ ಹಾಕುವ ಜೊತೆಗೆ ಹೆದ್ದಾರಿಯಲ್ಲಿನ ಸಿಎಲ್‌ ೭ ಹೆಸರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಬೇಗೂರಿಂದ ಹಿರೀಕಾಟಿ ಗಡಿ ತನಕ ಕ್ರಷರ್‌ನ ಸಂಪರ್ಕ ರಸ್ತೆ ಹಾಗೂ ಟಿಪ್ಪರ್‌ ಹೊದಿಕೆ ಇಲ್ಲದೆ ಬರುವ ಧೂಳು ನಿಲ್ಲಿಸಬೇಕು. ಈ ಕೆಲಸ ಮಾಡಿದರೆ ಅಪಘಾತ ಕಡಿಮೆಯಾಗಲಿದೆ.ರಾಜು,ಬೈಕ್‌ ಸವಾರ,ಗುಂಡ್ಲುಪೇಟೆಸವಾರಿಗೆ ಕನ್ನಡಪ್ರಭ ಕೆಲ ಟಿಪ್ಸ್

ದೀಪವು ನಿನ್ನದೆ, ಗಾಳಿಯು ನಿನ್ನದೇ ಆರದಿರಲು ಬೆಳಕು… ಎನ್ನುವ ಬದಲಾಗಿ ಕಾರು (ವಾಹನ) ನಿನ್ನದೆ, ಇಂಧನ (ಪೆಟ್ರೋಲ್) ನಿನ್ನದೆ, ಬದುಕು ನಿನ್ನದೆ ಎಂದು ಮೊದಲು ವಾಹನಗಳ ಏರಿ ಓಡಿಸಬೇಕು. ವಾಹನ ಕೈಗೆ ಸಿಕ್ಕಿತು ಎನ್ನವ ಭರದಲ್ಲಿ ವೇಗದ ಇತಿ, ಮಿತಿಯ ಜೊತೆಗೆ ವೇಗದ ಪರಿಜ್ಞಾನ ಅರಿಯಬೇಕಿದೆ ಹಾಗೂ ನಮ್ಮ ಮನೆಯಲ್ಲಿ ನಮಗಾಗಿ ಕಾಯುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನವಿಲ್ಲದೆ ಇದ್ದರೆ ಅಪಘಾತಕ್ಕೆ ಕಾರಣವಾಗಲಿದೆ.

ಸಮಯಪ್ರಜ್ಞೆ, ನಿಯಮ ಪಾಲನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಆಗಾಗ್ಗೆ ಪೊಲೀಸರು ನಡೆಸುತ್ತಿದ್ದರೂ ಅಪಘಾತಗಳು ನಡೆಯುತ್ತಲೇ ಇವೆ. ಜನರಿಗೆ ಪೊಲೀಸರು ಮತ್ತಷ್ಟು ಜಾಗೃತಿ ಮೂಡಿಸಬೇಕು.