ಸಾರಾಂಶ
ವಿವಿಧ ಗ್ರಾಮಗಳಲ್ಲಿ ಹಲವು ಕಾರಣಗಳಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎರಡು ಕಡೆಯ ಕಕ್ಷಿದಾರರುಗಳಿಗೆ ಲೋಕಾ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ತಿಳಿವಳಿಕೆ ನೀಡಿ ಎರಡು ಕಡೆಯವರಿಂದ ಮುಚ್ಚಳಿಕೆ ಬರೆಸಿ ಈ ಪ್ರಕರಣಗಳ ಎರಡು ಬದಿಯ ಕಕ್ಷಿದಾರರ ವಕೀಲರ ಸಮ್ಮುಖದಲ್ಲಿ ನ್ಯಾಯಾಧೀಶರು ಇತ್ಯರ್ಥ ಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಒಟ್ಟು 5 ನ್ಯಾಯಾಲಯಗಳಲ್ಲಿದ್ದ ಹಲವು ಪ್ರಕರಣಗಳನ್ನು ನ್ಯಾಯಾಧೀಶರು ರಾಷ್ಟ್ರಿಯ ಲೋಕಾ ಅದಾಲತ್ ಮೂಲಕ 8058 ಪ್ರಕರಣಗಳಲ್ಲಿ ಒಟ್ಟು 7420 ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.ಈ ಹಿಂದೆ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 403 ಪ್ರಕರಣಗಳು, ಪ್ರಸ್ತುತ ಇದ್ದ 7017 ವ್ಯಾಜ್ಯ ಪೂರ್ವದ ಪ್ರಕರಣಗಳಲ್ಲಿ ಒಟ್ಟು 7420 ಪ್ರಕರಣಗಳನ್ನು ಇತ್ಯರ್ಥ ಪಡಿಸಿಪಡಿಸಲಾಗಿದೆ.
ವಿವಿಧ ಗ್ರಾಮಗಳಲ್ಲಿ ಹಲವು ಕಾರಣಗಳಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎರಡು ಕಡೆಯ ಕಕ್ಷಿದಾರರುಗಳಿಗೆ ಲೋಕಾ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ತಿಳಿವಳಿಕೆ ನೀಡಿ ಎರಡು ಕಡೆಯವರಿಂದ ಮುಚ್ಚಳಿಕೆ ಬರೆಸಿ ಈ ಪ್ರಕರಣಗಳ ಎರಡು ಬದಿಯ ಕಕ್ಷಿದಾರರ ವಕೀಲರ ಸಮ್ಮುಖದಲ್ಲಿ ನ್ಯಾಯಾಧೀಶರು ಇತ್ಯರ್ಥ ಪಡಿಸಿದ್ದಾರೆ.ಕ್ಷುಲ್ಲಕ ಕಾರಣಗಳ ಸಣ್ಣ ಸಣ್ಣ ಪ್ರಕರಣಗಳಾಗಿವೆ. ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದ ಫಲಾನುಭವಿಗಳು, ಅಘಾತ ಪ್ರಕರಣ, ಸಿವಿಲ್ ವ್ಯಾಜ್ಯಗಳು, ಚಕ್ ಬೌನ್ಸ್ ಪ್ರಕರಣ ಸೇರಿದಂತೆ ಇತರ ಪ್ರಕರಣಗಳನ್ನು ಬ್ಯಾಂಕಿಗೆ ಕಟ್ಟಬೇಕಿದ್ದ ಸಾಲದ ಹಣವನ್ನು ಕಡಿಮೆ ದರದಲ್ಲಿ ಫಲಾನುಭವಿಗಳಿಗೆ ಹೊರೆಯಾಗದಂತೆ ನ್ಯಾಯಾಧೀಶರ ಮೂಲಕ ಬ್ಯಾಂಕ್‌ಗಳಿಗೆ ಮರು ಪಾವತಿ ಮಾಡಿಸಿ ಪ್ರಕರಣಗಳನ್ನು ನ್ಯಾಯಾಧಿಶರು ಇತ್ಯರ್ಥ ಪಡಿಸಿದ್ದಾರೆ.
3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಗೋಪಾಲಕೃಷ್ಣ ರೈ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಡಿ.ರೂಪ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್ .ಮಹದೇವಪ್ಪ, ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶ ಹರೀಶ ಕುಮಾರ್, ಅಪರ ಕಿರಿಯ ಸಿವಿಲ್ ನ್ಯಾಯಾಧೀಶ ಬಿ.ಆರ್ .ಹನುಮಂತರಾಯಪ್ಪ ಅವರು ಲೋಕಾ ಅದಾಲತ್ ನಡೆಸಿ 5 ನ್ಯಾಯಾಲಯಗಳಿಂದ 7420 ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು.ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಪವನ್‌ಗೌಡ, ಉಪಾಧ್ಯಕ್ಷ ಮಂಜುನಾಥ್ ಸೇರಿದಂತೆ ಹಿರಿಯ ವಕೀಲರುಗಳು ಭಾಗವಹಿಸಿದ್ದರು.