ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸೇವಾದಳಗಳ ವತಿಯಿಂದ ನಗರದ ಗಾಂಧಿ ಚೌಕದ ಬಳಿ ಭಾನುವಾರ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸೇವಾದಳಗಳ ವತಿಯಿಂದ ನಗರದ ಗಾಂಧಿ ಚೌಕದ ಬಳಿ ಭಾನುವಾರ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಸಂವಿಧಾನ ರಕ್ಷಣಾ ಕಾರ್ಯಕ್ರಮ ಸಮಿತಿಯ ಜಿಲ್ಲಾ ಉಸ್ತುವಾರಿ ದೀಪಕ್ ಪೆರ್ಮುದೆ ಅವರು ಧ್ವಜಾರೋಹಣ ನೆರವೇರಿಸಿ, ಸಂವಿಧಾನದ ಮೌಲ್ಯಗಳನ್ನು ಇಲ್ಲವಾಗಿಸುವ ಶಕ್ತಿಗಳನ್ನು ಎದುರಿಸಿ ಸಂವಿಧಾನವನ್ನು ರಕ್ಷಿಸುವ ಸಂಕಲ್ಪ ಮಾಡೋಣ ಎಂದರು.ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ಮಾತನಾಡುತ್ತಾ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಸಂವಿಧಾನ ರಚನೆ ಆದ ಮೇಲೆ ಎಲ್ಲಾ ವರ್ಗದವರಿಗೂ ಅವಕಾಶಗಳು ಸಿಗುವಂತಾಗಿದೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ಆದರೆ ಸಂವಿಧಾನದ ಎಲ್ಲಾ ಮೌಲ್ಯಗಳನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸುತ್ತಿದೆ. ಬಿಜೆಪಿಯ ನಾಯಕರಿಂದ ಸಂವಿಧಾನವನ್ನು ಹೀಯಾಳಿಸುವ ಕೆಲಸ ಇತ್ತೀಚೆಗೆ ನಡೆಯುತ್ತಿದೆ ಹಾಗಾಗಿ ಸಂವಿಧಾನದ ರಕ್ಷಣೆಗಾಗಿ ನಾವೆಲ್ಲಾ ಹೋರಾಡಬೇಕಾಗಿದೆ ಎಂದರು.ಕೆಪಿಸಿಸಿ ಉಪಾಧ್ಯಕ್ಷರಾದ ಎಂ.ಎ.ಗಪೂರ್, ಮುಖಂಡರಾದ ಭುಜಂಗ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಪುತ್ರನ್, ಹರೀಶ್ ಕಿಣಿ, ಭಾಸ್ಕರ ರಾವ್ ಕಿದಿಯೂರು, ಪ್ರಖ್ಯಾತ ಶೆಟ್ಟಿ, ಸದಾಶಿವ ಕಟ್ಟೆಗುಡ್ಡೆ, ಜ್ಯೋತಿ ಹೆಬ್ಬಾರ್, ಮೀನಾಕ್ಷಿ ಮಾಧವ ಬನ್ನಂಜೆ, ಸತೀಶ್ ಕೊಡವೂರು, ಉದ್ಯಾವರ ನಾಗೇಶ್ ಕುಮಾರ್, ಜಯಕುಮಾರ್, ಮಾಧವ ಬನ್ನಂಜೆ, ಇಸ್ಮಾಯಿಲ್ ಅತ್ರಾಡಿ, ಚಂದ್ರಿಕಾ ಶೆಟ್ಟಿ, ಮಹೇಶ್ ಸುವರ್ಣ, ಲಕ್ಮೀಶ ಶೆಟ್ಟಿ, ರಘಪತಿ ಬಲ್ಲಾಳ್, ಸೇವಾದಳದ ಮುಖ್ಯಸ್ಥರಾದ ಕಿಶೋರ್ ಕುಮಾರ್ ಎರ್ಮಾಳ್, ಶರತ್ ನಾಯ್ಕ, ಜಗನ್ನಾಥ ಪೂಜಾರಿ, ಪ್ರದೀಪ್ ನಾಯಕ್ ಉಪಸ್ಥಿತರಿದ್ದರು.