ಸಾರಾಂಶ
ಭಾರತೀಯ ಪ್ರಜೆಗಳಾಗಿ ನಾವು ಸಮಾನತೆ, ಶಿಕ್ಷಣ, ಆರೋಗ್ಯ, ಸ್ತ್ರೀಯರ ಹಕ್ಕು, ಮೂಲಭೂತ ಹಕ್ಕು ಪಡೆದು ಜೀವಿಸಲು ಸಹೋದರತ್ವ, ಏಕತೆ, ಭಾತೃತ್ವ ನಮ್ಮ ಸಂವಿಧಾನದ ಪ್ರಮುಖ ಮೌಲ್ಯಗಳು. ಅದನ್ನು ನಾವೆಲ್ಲರೂ ಪಾಲಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸಿಗ್ಮಾ ಆಸ್ಪತ್ರೆಯಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಜ್ಞಾನಪ್ರಕಾಶ್ಮಾತನಾಡಿ, ಇಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ದಿನ. ಭಾರತೀಯ ಪ್ರಜೆಗಳಾಗಿ ನಾವು ಸಮಾನತೆ, ಶಿಕ್ಷಣ, ಆರೋಗ್ಯ, ಸ್ತ್ರೀಯರ ಹಕ್ಕು, ಮೂಲಭೂತ ಹಕ್ಕು ಪಡೆದು ಜೀವಿಸಲು ಸಹೋದರತ್ವ, ಏಕತೆ, ಭಾತೃತ್ವ ನಮ್ಮ ಸಂವಿಧಾನದ ಪ್ರಮುಖ ಮೌಲ್ಯಗಳು. ಅದನ್ನು ನಾವೆಲ್ಲರೂ ಪಾಲಿಸಬೇಕು. ಇದು ನಮ್ಮ ಹಕ್ಕು ಮತ್ತು ನಮ್ಮ ಹೊಣೆ ಎಂದರು.ಬಳಿಕ ಮಾತನಾಡಿದ ಆಸ್ಪತ್ರೆಯ ಕಿಡ್ನಿ ಕಸಿ ತಜ್ಞ ಡಾ.ಕೆ.ಎಂ. ಮಾದಪ್ಪ, ಈ ದೇಶದ ಪ್ರತಿಯೊಬ್ಬರೂ ಗೌರವಿಸಬೇಕಾದ ಐತಿಹಾಸಿಕ ದಿನವಿದು. ಸಂವಿಧಾನ ಜಾರಿಗೆ ಬಂದ ದಿನ. 448 ಅಧ್ಯಯ ಹೊಂದಿರುವ ಪ್ರಪಂಚದಲ್ಲೇ ಅತ್ಯುತ್ತಮ ಸಂವಿಧಾನ ನಮ್ಮದಾಗಿದೆ. ಸಂವಿಧಾನದ ಆದರ್ಶಗಳನ್ನು ನಾವು ಪಾಲಿಸುವುದು ಕರ್ತವ್ಯ. ಪ್ರತಿ ವರ್ಷ ನಮ್ಮ ಆಸ್ಪತ್ರೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು. ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಮಂಜುನಾಥ್, ವ್ಯವಸ್ಥಾಪಕಿ ಭ್ರಮರಾಂಭ, ಡಾ. ಮಮತಾ, ಆಸ್ಪತ್ರೆ ವೈದ್ಯರು, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಇದ್ದರು.