ಸಾರಾಂಶ
ಇಂದಿನ ಯುವಕರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸುತ್ತಿದ್ದು, ಸಂತಸದ ಸಂಗತಿ,
ಕನ್ನಡಪ್ರಭ ವಾರ್ತೆ ಮೈಸೂರು
ಹಿನಕಲ್ ನ ಆಶ್ರಮ ಇಲವೆನ್ ಸ್ಟಾರ್ ಟೀಮ್ ವತಿಯಿಂದ 78ನೇ ಸ್ವಾತಂತ್ರ್ಯ ದಿನವನ್ನು ಆಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಆಚರಿಸಿತು.ಹಿಂದು ಹಿತರಕ್ಷಣಾ ಸಮಿತಿಯ ಪ್ರಮುಖ್ ಹಿನಕಲ್ ನ ಲೋಹಿತ್ ಅರಸ್ ಧ್ವಜಾರೋಹಣ ನೆರವೇರಿಸಿದರು.
78ನೇ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಭಾರತ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ದಿಯನ್ನು ಸಾಧಿಸುತ್ತಿದೆ. ಇಂದಿನ ಯುವಕರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸುತ್ತಿದ್ದು, ಸಂತಸದ ಸಂಗತಿ, ಮುಂದಿನ ದಿನಗಳಲ್ಲಿ ನಗರಮಟ್ಟದ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟಕ್ಕೆ ಹೆಚ್ಚು ವಿಸ್ತಾರ ಮಾಡಿ ಜನಜಾಗೃತಿಯನ್ನು ಎಲ್ಲ ಕ್ಷೇತ್ರದಲ್ಲಿಯೂ ಮೂಡಿಸಬೇಕು ಎಂದರು.ಆಶ್ರಮ ಇಲವೆಲ್ ಸ್ಟಾರ್ ಪದಾಧಿಕಾರಿಗಳು ಹಾಗೂ ಜಯಪುರ ಹೋಬಳಿ ವಿಕಾಸ ವೇದಿಕೆ ಅಧ್ಯಕ್ಷ ದಾರಿಪುರ ಡಿ. ಚಂದ್ರಶೇಖರ್ ಇದ್ದರು.