ಭಾರತೀ ವಸತಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

| Published : Aug 16 2024, 12:50 AM IST

ಭಾರತೀ ವಸತಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

1857 ರಿಂದ 1947 ರವರೆಗೆ ಅನೇಕ ಮಹನೀಯರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ಜೀವ ತೆತ್ತಿದ್ದಾರೆ. ಇವರ ಸ್ಮರಣೆ ನಿತ್ಯ ನಡೆಯಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಹನುಮಂತನಗರದ ಭಾರತೀ ವಸತಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮಾಜಿ ಸೈನಿಕರಾದ ಎಂ.ಮಹದೇವು ಮತ್ತು ನಾಗರಾಜುರವರು ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಅಣ್ಣೂರು ಸಿದ್ದೇಗೌಡ ಸ್ಮಾರಕ ಕ್ರೀಡಾಂಗಣದಲ್ಲಿ ಪಥಸಂಚಲನ ನಡೆಯಿತು.

ಚಾಮರಾಜನಗರದ ಬಾಗಡಿ ಪ್ರೌಢ ಶಾಲೆ ಕನ್ನಡ ಭಾಷ ಶಿಕ್ಷಕ ಡಾ.ಮಹೇಂದ್ರ ಪಟೇಲ್ ಮಾತನಾಡಿ, 1857 ರಿಂದ 1947 ರವರೆಗೆ ಅನೇಕ ಮಹನೀಯರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ಜೀವ ತೆತ್ತಿದ್ದಾರೆ. ಇವರ ಸ್ಮರಣೆ ನಿತ್ಯ ನಡೆಯಬೇಕು ಎಂದರು.

ವಸತಿ ಶಾಲೆ ಪ್ರಾಂಶುಪಾಲ ಪುಟ್ಟಸ್ವಾಮಿ ಮಾತನಾಡಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಮೆರೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾರತೀಯ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿಗಳಾದ ಸಿದ್ದೇಗೌಡ, ಗುರುರಕ್ಷಕ ದಳದ ಘಟಕಾದಿಕಾರಿಗಳಾದ ಕೃಷ್ಣಮೂರ್ತಿ,ಬೋಧಕ ಬೋಧಕೇತರರು, ವಿದ್ಯಾರ್ಥಿಗಳು, ಅಧ್ಯಾಪಕರು ಅಧ್ಯಾಪಕೇತರು ಹಾಜರಿದ್ದರು.ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಆಚರಣೆ

ಮಳವಳ್ಳಿ:ಪಟ್ಟಣದ ತಾಲೂಕು ಕಚೇರಿ, ಪುರಸಭೆ, ತಾಪಂ, ಚೆಸ್ಕಾಂ ಸೇರಿದಂತೆ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ 78ನೇ ಸ್ವಾತಂತ್ರೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದ ನಂತರ ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಲಾಯಿತು.ತಾಲೂಕಿನ ಬಾಚನಹಳ್ಳಿಯಲ್ಲಿ ಬೌದ್ಧ ವಿಹಾರ ವತಿಯಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಬುದ್ಧ ಪ್ರತಿಭೆಗೆ ಮಾಲಾರ್ಪಣೆ ಮಾಡಿದ ನಂತರ ಧ್ವಜಾರೋಹನವನ್ನು ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ನಟರಾಜ್ ನೆರೆವೇರಿಸಲಾಯಿತು.

ಈ ವೇಳೆ ಶೆಟ್ಟಹಳ್ಳಿ ಚಂದ್ರಶೇಖರ್, ಬೆಳಕವಾಡಿ ವಿಜಯ್‌ಕುಮಾರ್, ಕಂದೇಗಾಲ ಸಿದ್ದರಾಜು, ಸತೀಶ್ ಬಿ.ಹಲಹಳ್ಳಿ, ಬೆಂಡರವಾಡಿ ಅನಂತ್, ಶ್ರೀಧರ್, ಪರಮಶಿವ, ಸಿದ್ದರಾಜು, ಅರವಿಂದ್, ಶಿವಣ್ಣ, ಸೇರಿದಂತೆ ಇತರರು ಇದ್ದರು.