ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಕೇಂಬ್ರಿಡ್ಜ್ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ನಿವೃತ್ತ ಮಾಜಿ ಯೋಧ ಮಣಿಗೆರೆ ಚಿಕ್ಕಣ್ಣ ಧ್ವಜಾರೋಹಣ ನೆರವೇರಿಸಿದರು. ಶಾಲೆ ಮುಖ್ಯಾಡಳಿತಾಧಿಕಾರಿ ನಾಗರತ್ನ ಬಲ್ಲೇಗೌಡ, ಟ್ರಸ್ಟಿ ಎ.ಬಿ.ದಿವ್ಯತೇಜ್ ಮಾತನಾಡಿದರು. ಶಾಲೆ ಸಂಸ್ಥಾಪಕ ಅಧ್ಯಕ್ಷ ಎ.ಟಿ.ಬಲ್ಲೇಗೌಡ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಇನ್ಸ್‌ಪೆಕ್ಟರ್ ಆನಂದ್, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎನ್.ಸಿ.ರಾಜು, ಚಿಕ್ಕಣ್ಣರನ್ನು ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳ ಅಣಕು ಸಂಸದರ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದಗ್ರಹಣ ಹಾಗೂ ಪ್ರಮಾಣ ವಚನ ಮಾಡಲಾಯಿತು.
ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳನ್ನು ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದೇಶ ಪ್ರೇಮಿ ಭಗತ್‌ಸಿಂಗ್ ಅವರ ಬಗ್ಗೆ ಕ್ರಾಂತಿಕಿಡಿಗಳು ಎಂಬ ಕಿರುನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.ಟ್ರಸ್ಟಿ ಎಂ.ಶಾಶ್ವತದಿವ್ಯತೇಜ್, ಮುಖ್ಯಶಿಕ್ಷಕಿ ಆಯಷ, ಪರಿಸರ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್, ಶಿಕ್ಷಕರಾದ ದಿನೇಶ್, ವಿಶ್ವ, ಸಿದ್ದರಾಮು, ಕರುಣಾಮೂರ್ತಿ, ನವೀನ್‌ಕುಮಾರ್, ದಿವ್ಯ, ಕೆ.ದಿವ್ಯಾ, ರಾಣಿ, ಪುಷ್ಪ, ಆಶಾ, ನೇತ್ರಾವತಿ, ವಿಶಾಲಾಕ್ಷ್ಮಿ, ವಿಮಲ, ನಿರ್ಮಲ, ಗೌರಮ್ಮ, ಗೌತಮಿ, ಮಾಯಣ್ಣ ಸೇರಿದಂತೆ ಹಲವರಿದ್ದರು.
ಪತ್ರಕರ್ತರ ಸಂಘದಲ್ಲಿ ಧ್ವಜಾರೋಹಣಶ್ರೀರಂಗಪಟ್ಟಣ:
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪುರಸಭಾ ಸದಸ್ಯ ಕೃಷ್ಣಪ್ಪ ದ್ವಜಾರೋಹಣ ನೆರವೇರಿಸಿದರು.ಪುರಸಭಾ ಸದಸ್ಯರಾದ ಎಸ್.ಪ್ರಕಾಶ್, ಗಂಜಾಂ ಶಿವು, ಶ್ರೀನಿವಾಸ್, ನರಸಿಂಹೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ ಶ್ರೀನಿವಾಸ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕುಮಾರ್, ಪ್ರಧಾನ ಕಾರ್ಯದರ್ಶಿ ಎಲ್.ವಿ.ನವೀನ್ ಕುಮಾರ್, ಖಜಾಂಚಿ ಪ್ರಕಾಶ್, ಸಂಘದ ಪದಾಧಿಕಾರಿಗಳಾದ ಗಂಜಾಂ ಮಂಜು, ಸೋಮಶೇಖರ್, ಕಷ್ಣಮೂರ್ತಿ, ಅಲ್ಲಾಪಟ್ಟಣ ಸತೀಶ್, ಲೋಕೇಶ್, ಭರತ್‌ಕುಮಾರ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.;Resize=(128,128))
;Resize=(128,128))