ಸಾರಾಂಶ
ನಾವು ಭಾರತದಲ್ಲಿ ಇಷ್ಟು ಸುಂದರವಾಗಿ ಬದುಕು ನಡೆಸಲು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ಕೊಡುಗೆ ಬಹಳ ಅಪಾರವಾಗಿದೆ
ಕನ್ನಡಪ್ರಭ ವಾರ್ತೆ ರಾವಂದೂರು
ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನ ಮಾಡಿದ ಮಹನೀಯರನ್ನು ನೆನೆದು ಅವರನ್ನು ಸ್ಮರಿಸುವ ದಿನವಾಗಿದೆ ಎಂದು ಉಪ ತಹಸೀಲ್ದಾರ್ ಕೆ. ಶುಭಾ ಹೇಳಿದರು.ಗ್ರಾಮದ ನಾಡಕಚೇರಿಯಲ್ಲಿ 78ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಾವು ಭಾರತದಲ್ಲಿ ಇಷ್ಟು ಸುಂದರವಾಗಿ ಬದುಕು ನಡೆಸಲು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ಕೊಡುಗೆ ಬಹಳ ಅಪಾರವಾಗಿದೆ ಹಾಗೂ ಡಾ. ಅಂಬೇಡ್ಕರ್ ಅವರ ಸಂವಿಧಾನವು ಸಹ ಬಹಳ ಮುಖ್ಯವಾಗಿದೆ ಎಂದರು.ನಿವೃತ್ತ ಯೋಧ, ಗ್ರಾಮ ಲೆಕ್ಕಾಧಿಕಾರಿ ಯಲ್ಲಪ್ಪ ಮಾತನಾಡಿದರು.
ರಾವಂದೂರಿನ ವಿವಿದೆಡೆ ಸ್ವಾತಂತ್ರ್ಯೋತ್ಸವ: ಗ್ರಾಪಂನಲ್ಲಿ ಗ್ರಾಪಂ ಅಧ್ಯಕ್ಷೆ ಸುಜಾತ ವಾಸು ಧ್ವಜಾರೋಹಣ ನೆರವೇರಿಸಿದರು.ಕರ್ನಾಟಕ ಪಬ್ಲಿಕ್ ಶಾಲೆ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಪ್ರಭಾರಿ ಪ್ರಾಂಶುಪಾಲ ಲಕ್ಷ್ಮೀಕಾಂತ್ ಧ್ವಜಾರೋಹಣ ನೆರವೇರಿಸಿದರು .
ಕರ್ನಾಟಕ ಪಬ್ಲಿಕ್ ಶಾಲೆ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಗ್ರಾಪಂ ಅಧ್ಯಕ್ಷ ಸುಜಾತ ವಾಸು ಧ್ವಜಾರೋಹಣ ನೆರವೇರಿಸಿದರು .ಆಟೋ ಚಾಲಕರ ಸಂಘ , ಮಾನಸ ಸೇವಾ ಸಾಂಸ್ಕೃತಿಕ ಸಂಸ್ಥೆ, ಮುರುಗರಾಜೇಂದ್ರ ವಿದ್ಯಾಸಂಸ್ಥೆ , ಶ್ರೀ ಯೋಗಿ ನಾರಾಯಣ ಯತೀಂದ್ರರ ವಿದ್ಯಾಸಂಸ್ಥೆ ಹಾಗೂ ವಿವಿದಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವತಂತ್ರಕ್ಕಾಗಿ ತಮ್ಮ ಪ್ರಾಣ ಬಲಿದಾನ ಮಾಡಿದ ಮಹನೀಯರುಗಳ ವೇಷಧಾರಿಗಳಾಗಿ ಆ ಊರಿನ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.ಕರ್ನಾಟಕ ಪಬ್ಲಿಕ್ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಆರ್.ವಿ. ವಿಶ್ವನಾಥ್ , ಉಪ ಪ್ರಾಂಶುಪಾಲ ಸುರೇಶ್ , ಮುಖ್ಯೋಪಾಧ್ಯಾಯನಿ ಲಿಲ್ಲಿ ಮೇರಿ , ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲೇಶ್, ಆರ್.ಐ ಶ್ರೀಧರ್ , ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಇದ್ದರು.