ಸಾರಾಂಶ
ದೇಶಾಭಿಮಾನವನ್ನು ಮೆರೆಯಬೇಕೆಂದು ಹಾಗೂ ಯುವಕರು ದೇಶದ ಅಭಿವೃದ್ಧಿ ಮತ್ತು ಸಹಕಾರಕ್ಕೆ ಪಣ ತೊಟ್ಟು ದೇಶವನ್ನು ಮುನ್ನೆಡೆಸುವಲ್ಲಿ ಸಹಕಾರ ನೀಡಬೇಕೆಂದು
ಫೋಟೋ-16ಎಂವೈಎಸ್ 95
ಕನ್ನಡಪ್ರಭ ವಾರ್ತೆ ಮೈಸೂರುನಗರದ ಹಿನಕಲ್ ನಲ್ಲಿರುವ ವಾತ್ಸಲ್ಯ ಸೇವಾ ಫೌಂಡೇಶನ್ ನಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಯಿತು. ಸಂಸ್ಥಾಪಕ ಅಧ್ಯಕ್ಷ ಎ.ಸಿ. ರವಿಕುಮಾರ್ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ನಮೆಲ್ಲರಿಗೂ ರಾಷ್ಟ್ರೀಯ ಹಬ್ಬ. ಇದನ್ನು ತಪ್ಪದೇ ಆಚರಿಸಿ, ದೇಶಾಭಿಮಾನವನ್ನು ಮೆರೆಯಬೇಕೆಂದು ಹಾಗೂ ಯುವಕರು ದೇಶದ ಅಭಿವೃದ್ಧಿ ಮತ್ತು ಸಹಕಾರಕ್ಕೆ ಪಣ ತೊಟ್ಟು ದೇಶವನ್ನು ಮುನ್ನೆಡೆಸುವಲ್ಲಿ ಸಹಕಾರ ನೀಡಬೇಕೆಂದು ತಿಳಿಸಿದರು.
ಸಿಬ್ಬಂದಿಗಳಾದ ಶಶಿಕಲಾ, ಅನುಪಮಾ, ಗೌರವ ಕಾರ್ಯದರ್ಶಿ ನಾಗರತ್ನ ಹಾಗೂ ಆಶ್ರಮದ ಹಿರಿಯ ಜೀವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.