ಸಾರಾಂಶ
ಬಲ್ಲಮಾವಟ್ಟಿ ನಂ. 362ನೇ ಸಹಕಾರ ದವಸ ಭಂಡಾರ ವತಿಯಿಂದ 79ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬಲ್ಲಮಾವಟ್ಟಿ ನಂ -362 ನೇ ಸಹಕಾರ ದವಸ ಭಂಡಾರ ವತಿಯಿಂದ 79ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.ದವಸ ಭಂಡಾರದ ಆವರಣದಲ್ಲಿ ಆಯೋಜಿಸಿದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಾಜಿ ಸೈನಿಕರು ನೆರವಂಡ ಭೀಮಯ್ಯ ನೆರವೇರಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿದರು.ಸಹಕಾರ ದವಸ ಭಂಡಾರ ಅಧ್ಯಕ್ಷರು ಕೋಟೆರ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರು ಅಪ್ಪಚೆಟ್ಟೋಳಂಡ ಜೋಯಪ್ಪ ನಿರ್ದೇಶಕರಾಗಿರುವ ಮೂವೆರಾ ಪೆಮ್ಮಯ್ಯ, ಚೀಯಂಡಿ ದಿನೇಶ್ , ಬೊಟ್ಟೋಳಂಡ ಜಾನಕ್ಕಿ , ಮಲೇರ ದೇವಕ್ಕಿ , ಕಾರ್ಯದರ್ಶಿ ಹೊಸೋಕ್ಲು ಶ್ರೀಕಾಂತ್ , ಸಿಬ್ಬಂದಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು, ಕಾರ್ಯದರ್ಶಿ, ಮಾಜಿ ಸೈನಿಕರರು, ಅಂಗನವಾಡಿ ಕಾರ್ಯಕರ್ತರು, ಸ್ಥಳೀಯರು ಹಾಜರಿದ್ದರುಮಾಜಿ ಸೈನಿಕರು ನೆರವಂಡ ಭೀಮಯ್ಯ, ಅಲತಂಡ ದೇವಯ್ಯ, ಅಧ್ಯಕ್ಷರು ಕೋಟೆರ ಸುಬ್ಬಯ್ಯ, ಉಪಾಧ್ಯಕ್ಷರು ಅಪ್ಪಚ್ಚಟ್ಟೋಲಂಡ ಜೋಯಪ್ಪ ನಿರ್ದೇಶಕರು -ಮೂವೆರಾ ಪೆಮ್ಮಯ್ಯ ಚೀಯಂಡಿ ದಿನೇಶ್ ಬೊಟ್ಟೋಳಂದ ಜಾನಕ್ಕಿ ಮಲೇರ ದೇವಕ್ಕಿ, ಕಾರ್ಯದರ್ಶಿ ಹೊಸೋಕ್ಲು ಶ್ರೀಕಾಂತ್ ಧ್ವಜಾರೋಹಣ ನೆರವೇರಿಸಿದರು.