ರಾಮನಾಥಪುರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

| Published : Aug 16 2025, 12:00 AM IST

ಸಾರಾಂಶ

ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ರಾಷ್ಟ್ರಧ್ವಜವು ಏಕತೆ, ಸ್ವಾತಂತ್ರ, ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ರಾಷ್ಟ್ರಧ್ವಜ ವಿವಿಧ ಧರ್ಮ, ವಿವಿಧ ಪ್ರದೇಶ ಮತ್ತು ವಿವಿಧ ಸಂಸ್ಕೃತಿಗಳು ಒಂದು ಸಂಕೇತದ ಅಡಿಯಲ್ಲಿ ಒಂದಾಗಿರುವುದನ್ನು ಸೂಚಿಸುತ್ತದೆ ಎಂದು ಕೃಷ್ಣೇಗೌಡರು ತಿಳಿಸಿದರು. ಮಹನೀಯರನ್ನು ಸ್ಮರಿಸವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಗೌರವಾಧ್ಯಕ್ಷರಾದ ಎಸ್.ಟಿ. ಕೃಷ್ಣೇಗೌಡರು ತಿಳಿಸಿದರು.

ರಾಮನಾಥಪುರ: ನಮ್ಮ ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಹಿರಿಯರು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದ್ದಾರೆ. ಅಂತಹ ಮಹನೀಯರನ್ನು ಸ್ಮರಿಸವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಗೌರವಾಧ್ಯಕ್ಷರಾದ ಎಸ್.ಟಿ. ಕೃಷ್ಣೇಗೌಡರು ತಿಳಿಸಿದರು.

ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ರಾಷ್ಟ್ರಧ್ವಜವು ಏಕತೆ, ಸ್ವಾತಂತ್ರ, ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ರಾಷ್ಟ್ರಧ್ವಜ ವಿವಿಧ ಧರ್ಮ, ವಿವಿಧ ಪ್ರದೇಶ ಮತ್ತು ವಿವಿಧ ಸಂಸ್ಕೃತಿಗಳು ಒಂದು ಸಂಕೇತದ ಅಡಿಯಲ್ಲಿ ಒಂದಾಗಿರುವುದನ್ನು ಸೂಚಿಸುತ್ತದೆ ಎಂದು ಕೃಷ್ಣೇಗೌಡರು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್. ಸರ್ವಮಂಗಳ, ಎಸ್‌ಡಿಎಂಸಿ ಸಮಿತಿ ಸದಸ್ಯರಾದ ಮೈಕ್ ಮಂಜಣ್ಣ, ಗಂಗೂರು ಭರತ್, ಸಿದ್ಧರಾಜು ಮುಂತಾದವರು ಭಾಗವಹಿಸಿದ್ದರು. ರಾಮನಾಥಪುರದ ಅಂಗನವಾಡಿ ಕೇಂದ್ರ, ವಿದ್ಯಾನಿಕೇತನ ಶಾಲೆ, ಶ್ರೀ ಪಟ್ಟಾಭಿರಾಮ ಗ್ರಾಮಾಂತರ ಪೌಢಶಾಲೆ, ದಕ್ಷಿಣ ಕಾಶಿ ವಿದ್ಯಾಸಂಸ್ಥೆ, ಜೆ.ಎಸ್.ಪಿ. ಶಾಲೆ, ವೆಂಕಟೇಶ್ವರ ಪೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಗೊಳ್ಳಿ ರಾಯಣ್ಣ ಸಂಘ, ಕಾಲೇಜ್ಕ ರಕ್ಷಣಾ ವೇದಿಕೆ, ಕನಕ ಯುವಕರ ಸಂಘ, ಬಸವೇಶ್ವರ ಯುವಕ ಸಂಘ, ಆಟೋ ಮತ್ತು ಗೂಡ್ಸ್ ಮಾಲೀಕರು ಹಾಗೂ ಚಾಲಕರ ಸಂಘ ಮುಂತಾದ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಚಾರಣೆ ಅಚರಿಸಲಾಯಿತು.