ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸುಂಟಿಕೊಪ್ಪ ಹೋಬಳಿ ಘಟಕ ಸಹಯೋಗದೊಂದಿಗೆ ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸ್ನೇಹಿತರ ಬಳಗ ಇದರ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲಾ ರಕ್ತ ನಿಧಿ ಘಟಕ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸುಂಟಿಕೊಪ್ಪದ ಏಳನೆಯ ಹೊಸಕೋಟೆ ದೀಪ್ತಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಮಡಿಕೇರಿ : ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸುಂಟಿಕೊಪ್ಪ ಹೋಬಳಿ ಘಟಕ ಸಹಯೋಗದೊಂದಿಗೆ ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸ್ನೇಹಿತರ ಬಳಗ ಇದರ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲಾ ರಕ್ತ ನಿಧಿ ಘಟಕ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸುಂಟಿಕೊಪ್ಪದ ಏಳನೆಯ ಹೊಸಕೋಟೆ ದೀಪ್ತಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಅವರು ‘ಕರವೇ ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ತುರ್ತು ಸಂದರ್ಭದಲ್ಲಿ ಮತ್ತೊಬ್ಬರ ಜೀವ ಉಳಿಸುವ ಕಾರುಣ್ಯ ಕೆಲಸವನ್ನು ರಕ್ತದಾನ ಶಿಬಿರಗಳ ಮೂಲಕ ಮಾಡುತ್ತಿದೆ ಎಂದರು.ಜಿಲ್ಲಾ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಕರುಂಬಯ್ಯ ಮಾತನಾಡಿ ‘ರಕ್ತದಾನ ಮಾಡಲು ಯಾರು ಕೂಡ ಭಯಪಡುವ ಅವಶ್ಯಕತೆ ಇಲ್ಲ. ನಿಮ್ಮ ಒಂದು ರಕ್ತದಾನದಿಂದ ಬೇರೆ ಮೂರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಈಗಾಗಲೇ ಜಿಲ್ಲೆಯಲ್ಲಿ ಮಾಸಿಕ 500 ರಿಂದ 600 ಯೂನಿಟ್ ರಕ್ತ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಬೇಕಾಗಿದ್ದು ಇದನ್ನು ಹೊಂದಿಸುವ ಕಾರ್ಯಕ್ರಮಗಳು ಸಮಾಜದಲ್ಲಿ ನಡೆಯಬೇಕಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಟೆಸ್ಸಿ ಮ್ಯಾನುವೆಲ್ ಹಾಗೂ ಕುಶಾಲನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ರಕ್ತದಾನದ ಮಹತ್ವದ ಕುರಿತು ಮಾತನಾದರು.ರಾಷ್ಟ್ರಕ್ಕಾಗಿ ಗಡಿಯಲ್ಲಿ ದೇಶವನ್ನು ಕಾಯುವ ಯೋಧರ ನೆನಪಿನಲ್ಲಿ ಸ್ಥಳೀಯ ನಿವಾಸಿ ನಿವೃತ್ತ ಸೇನಾನಿ ಶಿವನ್ ಮತ್ತು ಸಮಾಜಮುಖಿ ಕಾರ್ಯಕ್ರಮವನ್ನು ಮಾಡಿರುವ ಸಾಧಕರನ್ನು, ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ಸಾಧನೆಗಳನ್ನು ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಶಿಬಿರದಲ್ಲಿ 40 ಜನ ರಕ್ತದಾನ ಮಾಡಿದರು. ನಿಜಾಂ ಉಸ್ತಾದ್ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು ಹಾಗೂ ಗೃಹ ರಕ್ಷತಿ ಲವಿ ಅವರು 16ನೇ ರಕ್ತದಾನ ಮಾಡಿ ಮಹಿಳೆಯರಿಗೆ ಮಾದರಿಯಾಗಿದ್ದು ವಿಶೇಷ.
ಕರವೇ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷರಾದ ಪವನ್ ಪಾಂಡುರಂಗ, ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಸಂಸ್ಥಾಪಕರಾದ ಸಮೀರ್, ಮಡಿಕೇರಿ ಸ್ನೇಹಿತರ ಬಳಗ ಹಾಗೂ ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ವಿನು, ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಮಹಿಳಾ ವಿಭಾಗದ ಲವಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಉಪಾಧ್ಯಕ್ಷ ಮುಸ್ತಫ, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೂ ಹಾಗೂ ಮಾಜಿ ಅಧ್ಯಕ್ಷ ಅಬ್ಬಾಸ್, ಕಲ್ಲುಕೋರೆ ಶ್ರೀ ಭದ್ರಕಾಳಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಕೆ ಸಿ ಸಂತೋಷ್, ಧರ್ಮಸ್ಥಳ ಸಂಘದ ಒಕ್ಕೂಟ ಅಧ್ಯಕ್ಷೆ ನಿರ್ಮಲಾ ಪ್ರಕಾಶ್, ಜಿಲ್ಲಾ ಯುವ ಘಟಕ ಅಧ್ಯಕ್ಷ ವಸಂತ್ ಆಚಾರ್ಯ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಜೋಸ್, ಮಾಜಿ ಉಪಾಧ್ಯಕ್ಷರಾದ ಎಪಿ ರಮೇಶ್, ಕರವೇ ಮಹಿಳಾ ಜಿಲ್ಲಾಧ್ಯಕ್ಷೆ (ಪ್ರವೀಣ್ ಶೆಟ್ಟಿ ಬಣ) ಸಂಧ್ಯಾ ಗಣೇಶ್, ಕರವೇ ಮಡಿಕೇರಿ ವಿಧಾನಸಭಾ ಅಧ್ಯಕ್ಷ ಆನಂದ್ ಕನ್ನಡಿಗ, ಕುಶಾಲನಗರ ತಾಲೂಕು ಅಧ್ಯಕ್ಷ ಆಸಿಫ್, ಮಹಿಳಾ ತಾಲೂಕು ಅಧ್ಯಕ್ಷರಾದ ಶಶಿಕಲಾ, ಸುಂಟಿಕೊಪ್ಪ ಹೋಬಳಿ ಕರವೇ ಗೌರವ ಅಧ್ಯಕ್ಷ ಮುರುಗೇಶ್, ಕೆದಕಲ್ ಗ್ರಾಮ ಘಟಕದ ಅಧ್ಯಕ್ಷ ಸಮೀರ್, ಕರವೇ ಸುಂಟಿಕೊಪ್ಪ ನಗರಾಧ್ಯಕ್ಷ ಪ್ರತಾಪ್ ಪೂಜಾರಿ, ಕುಶಾಲನಗರ ನಗರಾಧ್ಯಕ್ಷ ಡಿಆರ್ ಯೋಗೇಶ್, ಸಮಾಜ ಸೇವಕ ವಿಕ್ರಂ, ಉದ್ಯಮಿ ಫಾರೂಕ್ ದುಬೈ, ಸಂಘಟನೆಯ ಮಹಿಳಾ ಮುಖಂಡರಾದ ಕವಿತಾ, ಸಂಧ್ಯಾ, ನವ್ಯಾ, ಚಂದ್ರಾವತಿ ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಪ್ರಮುಖರಾದ ಆಸಿಫ್ , ಅಬಾಸ್ , ಪ್ರವೀಣ್ , ಮನ್ಸೂರ್, ದಿಲನ್ ದೇವಯ್ಯ, ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.ಸಂಘಟನೆಯ ಗೌರವ ಸಲಹೆಗಾರ ರವಿಚಂದ್ರ ಪಿ ಎ ಸ್ವಾಗತಿಸಿ, ಜಿಲ್ಲಾ ಕಾರ್ಯಧ್ಯಕ್ಷ ರವೀಶ್ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯೊಂದಿಗೆ ದುಡಿಯುತ್ತಿರುವ ವಿವಿಧ ಘಟಕಗಳ ಮಹಿಳಾ ಮುಖಂಡರಿಗೆ ಮತ್ತು ಸಂಘಟಕರಿಗೆ ಸಂಘಟನೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಜಿಲ್ಲಾ ರಕ್ತ ನಿಧಿ ಘಟಕದ ವೈದ್ಯರಾದ ಡಾ.ಮನೋಜ್ ಕುಮಾರ್, ಡಾ.ಮಂಜುನಾಥ್, ಡಾ.ಪೂರ್ಣಿಮಾ, ಡಾ.ಕಾರ್ತಿಕ್ ಹಾಗೂ ಸಿಬ್ಬಂದಿ ವರ್ಗದವರು ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹರೀಶ್, ಅಶ್ವಿತ್ ಪೂಜಾರಿ, ಶ್ರೀಧರ, ಶ್ರೀನಿವಾಸ, ನರೇಶ್ ನಾಣಯ್ಯ, ಹೇಮಂತ್, ಗಣೇಶ್, ಶರವಣ, ದೀಪು ಚಂದ್ರ ಪೂಜಾರಿ ಮೊದಲಾದವರು ಸಹಕರಿಸಿದರು.