ಅಜ್ಜಂಪುರಜೂನ್ 14ರಂದು ಚಿಕ್ಕಮಗಳೂರು ಮತ್ತು ಅಜ್ಜಂಪುರ ತಾಲೂಕು ಜಾನಪದ ಪರಿಷತ್ತು ಘಟಕಗಳಿಂದ ಅಜ್ಜಂಪುರದ ಗಡಿಹಳ್ಳಿಯಲ್ಲಿ 7ನೇ ಜಾನಪದ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.

ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಜೂನ್ 14ರಂದು ಚಿಕ್ಕಮಗಳೂರು ಮತ್ತು ಅಜ್ಜಂಪುರ ತಾಲೂಕು ಜಾನಪದ ಪರಿಷತ್ತು ಘಟಕಗಳಿಂದ ಅಜ್ಜಂಪುರದ ಗಡಿಹಳ್ಳಿಯಲ್ಲಿ 7ನೇ ಜಾನಪದ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.

ಮಾಹಿತಿ ನೀಡಿದ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜೂ. 14ರ ಭಾನುವಾರ ನಡೆಯುವ ಸಮ್ಮೇಳನ ಸರ್ವಾಧ್ಯಕ್ಷರಾಗಿ ಜಾನಪದ ಕಲಾವಿದ ತ್ಯಾಗದಕಟ್ಟೆ ಚಂದ್ರಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ. ಗೀಗಿ ಪದ, ತತ್ವಪದ ಹಾಡುಗಾರ ಹಾಗೂ ಜಾನಪದ ಕಲಾ ಪೋಷಕರಾದ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿ ಅನುಮೋದನೆಗೆ ಕಳುಹಿಸಿರುವುದು ಸೂಕ್ತ. ಅವರು ಸಾವಿರಾರು ಒಗಟು, ಗಾದೆಗಳನ್ನು ಸಂಗ್ರಹಿಸಿ ಜಾನಪದ ಸಾಹಿತ್ಯ ಸಂಸ್ಕೃತಿ ಕಲೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ರಚಿಸಿದ್ದಾರೆ. ಜಾನಪದ ಪರಿಷತ್‌ ಸಮ್ಮೇಳನ ಮತ್ತು ಯುವಜನ ಸಮ್ಮೇಳನಗಳು ಯಶಸ್ವಿಯಾಗಿ ನಡೆಯಲು ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದಾರೆ ಎಂದರು.

ಜಾನಪದ ಸಾಹಿತ್ಯ, ಸಂಸ್ಕೃತಿ, ಕಲೆ ನಶಿಸುತ್ತಿರುವ ಸಂದರ್ಭದಲ್ಲಿ ಗಡಿಹಳ್ಳಿ ಜಾನಪದ ಕಲಾಪೋಷಕ ಮಂಜಣ್ಣನ ತಂಡದ ನೇತೃತ್ವದಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಇದೇ ರೀತಿ ಜಿಲ್ಲೆಯಾದ್ಯಂತ ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ಸಮ್ಮೇಳನ ಸಾಹಿತ್ಯ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಾಕಾರ ನೀಡಬೇಕೆಂದು ಮನವಿ ಮಾಡಿದರು.

ಜಾನಪದ ಸಾಹಿತಿ ತರೀಕೆರೆ ಇಮ್ರಾನ್ ಅಹಮದ್ ಬೇಗ್ ಮಾತನಾಡಿ, ನಮ್ಮ ನಾಡಿನ ಜಾನಪದ ಕಲೆ ಜೀವಂತವಾಗಿ ಉಳಿಯಲು ಇಂದಿನ ಯುವ ಪೀಳಿಗೆ ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಯುವಕರು ಸಕ್ರಿಯವಾಗಿ ಜಾನಪದ ಸಮ್ಮೇಳನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನುಮನ ಧನದ ಸಹಕಾರ ನೀಡಬೇಕೆಂದರು.

ಪರಿಷತ್‌ ಗೌರವಾಧ್ಯಕ್ಷ ಮರಳು ಸಿದ್ದಪ್ಪ ಮಾತನಾಡಿ, ತಾಲೂಕಿನ ಎಲ್ಲ ಜಾನಪದ ಕಲಾವಿದರನ್ನು ಆಹ್ವಾನಿಸಿದ್ದು ಎಲ್ಲರೂ ಜಾನಪದ ಕಲಾ ಪ್ರದರ್ಶನಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಲು ಅವಕಾಶ ನೀಡುತ್ತಿದ್ದಾರೆ. ಸಮ್ಮೇಳನಾಧ್ಯಕ್ಷರನ್ನು ಎತ್ತಿನಗಾಡಿಯಲ್ಲಿ ಗಡಿಯ ಪ್ರಮುಖ ಬೀದಿಗಳಲ್ಲಿ, ಪೂರ್ಣ ಕುಂಭ ಸ್ವಾಗತದೊಂದಿಗೆ ಹಾಗೂ ವಿಶೇಷ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಗುವುದು ಎಂದರು.

ಜಿಲ್ಲಾ ಸಂಚಾಲಕಿ ಗಾಯತ್ರಮ್ಮ, ಸಾಹಿತಿ ದಂದೂರು ರಾಜಣ್ಣ ಮತ್ತು ತ್ಯಾಗದ ಕಟ್ಟೆ ಸಾಹಿತಿ ತಿಪ್ಪೇಶ್, ವಿಜಯ ಕುಮಾರಿ ಮಾತನಾಡಿದರು. ತಾಲೂಕು ಅಧ್ಯಕ್ಷ ಡಾ. ಮಾಳೇನಳ್ಳಿ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು.ಶಿವನಿ ಹೋಬಳಿ ಅಧ್ಯಕ್ಷ ಕಾರಹಳ್ಳಿ ಬಸಪ್ಪ ಚಿಕ್ಕನಲ್ಲೂರು ಜಯಣ್ಣ, ಕಲಾವಿದರಾದ ಜ್ಯೋತಿ, ಶಕುಂತಲಾ, ನಿವೃತ್ತ ಶಿಕ್ಷಕ ಜಯಣ್ಣ ಹಾಗೂ ಪುಷ್ಪಗಿರಿ ಮಹಿಳಾ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

19 ಎಜೆಪಿ

ಗಡೀಹಳ್ಳಿಯಲ್ಲಿ ನಡೆಯಲಿರುವ 7ನೇ ಕಜಾಪ ಸಮ್ಮೇಳನದ ಪೂರ್ವಭಾವಿ ಸಭೆಯಲ ಕಜಾಪ ಜಿಲ್ಲಾಧ್ಯಕ್ಷ ಸುರೇಶ್ ಮತ್ತಿತರರು ಇದ್ದರು.