ಸಾರಾಂಶ
ಕನ್ನಡಪ್ರಭ ವಾರ್ತೆ ಚಡಚಣಮನೆಯವರು ಮಲಗಿದ್ದಾಗ ಮನೆಗೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಸುಮಾರು ₹ 7.80 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ₹ 1.54 ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಶಿರನಾಳ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಗ್ರಾಮದ ಲವಾ ಶಿವಶರಣ ಎಂಬುವರ ಮನೆಯೇ ಕಳ್ಳತನವಾಗಿದೆ. ಇವರು ಇಂಡಿ ಕೆಎಸ್ಆರ್‌ಟಿಸಿ ಡಿಪೋದಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಎಂದಿನಂತೆ ಮನೆಯವರೆಲ್ಲರೂ ಊಟ ಮಾಡಿ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದರು.
ಕನ್ನಡಪ್ರಭ ವಾರ್ತೆ ಚಡಚಣ
ಮನೆಯವರು ಮಲಗಿದ್ದಾಗ ಮನೆಗೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಸುಮಾರು ₹ 7.80 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ₹ 1.54 ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಶಿರನಾಳ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಗ್ರಾಮದ ಲವಾ ಶಿವಶರಣ ಎಂಬುವರ ಮನೆಯೇ ಕಳ್ಳತನವಾಗಿದೆ. ಇವರು ಇಂಡಿ ಕೆಎಸ್ಆರ್‌ಟಿಸಿ ಡಿಪೋದಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಎಂದಿನಂತೆ ಮನೆಯವರೆಲ್ಲರೂ ಊಟ ಮಾಡಿ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದರು. ಆದನ್ನು ಗಮನಿಸಿದ್ದ ಕಳ್ಳರು ತಡೆಗೋಡೆ ದಾಟಿ, ಒಳಗೆ ನುಗ್ಗಿ ಬಾಗಿಲು ಮುರಿದಿದ್ದು, ತಿಜೋರಿಯಲ್ಲಿದ್ದ 45 ಗ್ರಾಂ ತೂಕದ ಮಂಗಳಸೂತ್ರ ಸೇರಿದಂತೆ ₹ 7.80 ಲಕ್ಷ ಮೌಲ್ಯದ ಚಿನ್ತ್ಮತ್ತು ಬೆಳ್ಳಿಯ ಆಭರಣಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ.ವಿಷಯ ತಿಳಿದು ಘಟನಾ ಸ್ಥಳಕ್ಕೆ ಕ್ರೈಂ ಹೆಚ್ಚುವರಿ ಎಸ್ಪಿ ರಾಮನಗೌಡ ಹುಟ್ಟಿ, ಡಿಎಸ್ಪಿ ಎನ್.ಜಗದೀಶ, ಸಿಪಿಐ ಸುರೇಶ ಬೆಂಡಗುಂಬಳ, ಝಳಕಿ ಪಿಎಸ್ಐ ಮಂಜುನಾಥ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರಿಂದಲೂ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.