ಗದಗ ಜಿಲ್ಲೆಯಲ್ಲಿ 8.8 ಲಕ್ಷ ಮತದಾರರು

| Published : Apr 12 2024, 01:05 AM IST

ಗದಗ ಜಿಲ್ಲೆಯಲ್ಲಿ 8.8 ಲಕ್ಷ ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಜ. 22ರಂದು ಪ್ರಕಟಗೊಂಡ ಅಂತಿಮ ಮತದಾರ ಪಟ್ಟಿಯ ಆನಂತರ ಈ ವರೆಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಗದಗ ಜಿಲ್ಲೆಯಲ್ಲಿ 8,88,816 ಮತದಾರರು ಇದ್ದಾರೆ.

ಗದಗ: ಜ. 22ರಂದು ಪ್ರಕಟಗೊಂಡ ಅಂತಿಮ ಮತದಾರ ಪಟ್ಟಿಯ ಆನಂತರ ಈ ವರೆಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಗದಗ ಜಿಲ್ಲೆಯಲ್ಲಿ 8,88,816 ಮತದಾರರು ಇದ್ದು, ಅವರಲ್ಲಿ 4,43,291 ಪುರುಷ ಮತದಾರರು ಮತ್ತು 4,45,464 ಮಹಿಳಾ ಮತದಾರರು ಇದ್ದಾರೆ. 61 ಮಂದಿ ಇತರ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 65-ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2,29,462 ಮತದಾರರು ಇದ್ದು, ಅವರಲ್ಲಿ 1,14,919 ಪುರುಷ ಮತದಾರರು ಮತ್ತು 1,14,530 ಮಹಿಳಾ ಮತದಾರರು ಇದ್ದು, 13 ಮಂದಿ ಇತರ ಮತದಾರರು ಇದ್ದಾರೆ. ಹಾಗೆಯೇ 66-ಗದಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 2,29,081 ಮಂದಿ ಮತದಾರರು ಇದ್ದು, ಅವರಲ್ಲಿ 1,12,988 ಪುರುಷ ಮತದಾರರು 1,16,075 ಮಹಿಳಾ ಮತದಾರರು ಇದ್ದಾರೆ, 18 ಮಂದಿ ಇತರೆ ಮತದಾರರು ಇದ್ದಾರೆ.

67-ರೋಣ ವಿಧಾನಸಭಾ ಕ್ಷೇತ್ರದಲ್ಲಿ 2,38,569 ಮತದಾರರು ಇದ್ದು, ಅವರಲ್ಲಿ 1,18,782 ಪುರುಷ ಮತದಾದರರು ಮತ್ತು 1,19,764 ಮಹಿಳಾ ಮತದಾರರು, 23 ಮಂದಿ ಇತರ ಮತದಾರರು ಇದ್ದಾರೆ. ಈ ವಿಧಾನಸಭಾ ಕ್ಷೇತ್ರಗಳು ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದೆ. ಹಾಗೆಯೇ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ 68-ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 1,91,704 ಮತದಾರರು ಇದ್ದು, 96,602 ಪುರುಷ ಮತದಾರರು ಮತ್ತು 95,095 ಮಹಿಳಾ ಮತದಾರರು, 7 ಇತರ ಮತದಾರರು ಇದ್ದಾರೆ.ಜಿಲ್ಲೆಯಲ್ಲಿ 1525 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 1,486 ಪುರುಷ ಮತದಾರರು ಹಾಗೂ 39 ಮಹಿಳಾ ಮತದಾರರು ಇದ್ದಾರೆ.ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 179 ಮಂದಿ ಸೇವಾ ಮತದಾರರು ಇದ್ದು, ಅವರಲ್ಲಿ 173 ಪುರುಷ ಮತದಾರರು, 6 ಮಹಿಳಾ ಮತದಾರರು ಇದ್ದಾರೆ. ಹಾಗೆಯೇ ಗದಗ ವಿಭಾನಸಭಾ ಕ್ಷೇತ್ರದಲ್ಲಿ 222 ಮಂದಿ ಸೇವಾ ಮತದಾರರು ಇದ್ದು, ಅವರಲ್ಲಿ 217 ಪುರುಷ ಮತದಾರರು, 5 ಮಂದಿ ಮಹಿಳಾ ಸೇವಾ ಮತದಾರರು ಇದ್ದಾರೆ.ರೋಣ ವಿಧಾನಸಭಾ ಕ್ಷೇತ್ರದಲ್ಲಿ 478 ಮಂದಿ ಸೇವಾ ಮತದಾರರು ಇದ್ದು, ಅವರಲ್ಲಿ 467 ಪುರುಷ ಮತದಾರರು ಹಾಗೂ 11 ಮಹಿಳಾ ಮತದಾರರು ಇದ್ದಾರೆ. ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 646 ಮಂದಿ ಸೇವಾ ಮತದಾರರು ಇದ್ದು, ಅವರಲ್ಲಿ 629 ಪುರುಷ ಮತದಾರರು 17 ಮಹಿಳಾ ಮತದಾರರು ಇದ್ದಾರೆ. ಗದಗ ಜಿಲ್ಲಾ ವ್ಯಾಪ್ತಿಯಲ್ಲಿ 26,173 ಯುವ ಮತದಾರರು ಇದ್ದು, 13,698 ಪುರುಷ ಯುವ ಮತದಾರರು ಮತ್ತು 12,474 ಯುವ ಮಹಿಳಾ ಹಾಗೂ 1 ಇತರ ಮತದಾರರು ಇದ್ದಾರೆ. ಹಾಗೆಯೇ ಗದಗ ಜಿಲ್ಲೆಯಲ್ಲಿ 11,983 ವಿಶೇಷ ಚೇತನ ಮತದಾರರು ಇದ್ದಾರೆ. ಹಾಗೆಯೇ 85 ವರ್ಷ ವಯೋಮಿತಿ ಮೀರಿದ ಹಿರಿಯ ನಾಗರಿಕರು 5,749 ಜನ ಇದ್ದಾರೆ.ಗದಗ ಜಿಲ್ಲೆಯಲ್ಲಿ ಒಟ್ಟು 961 ಮತಗಟ್ಟೆಗಳಿದ್ದು, ಈ ಪೈಕಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 251, ಗದಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 223, ರೋಣ ವಿಧಾನಸಭಾ ವ್ಯಾಪ್ತಿಯಲ್ಲಿ 267 ಹಾಗೂ ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ 220 ಮತಗಟ್ಟೆಗಳು ಬರುತ್ತವೆ.ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಖಾತರಿಪಡಿಸಿಕೊಳ್ಳುವುದು, ಮತಗಟ್ಟೆ ಬಗ್ಗೆ ಮಾಹಿತಿ ಪಡೆಯುವುದು ಇತರೆ ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು, ಮಾಹಿತಿಯನ್ನು ಪಡೆಯಲು ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಟೋಲ್ ಫ್ರೀ ಸಂಖ್ಯೆ1950ಕ್ಕೆ ಕರೆ ಮಾಡಬಹುದಾಗಿದೆ. ಹಾಗೆಯೇ ವೋಟರ್ ಸಹಾಯವಾಣಿ 24*7 ಕಾರ್ಯನಿರ್ವಹಿಸಲಾಗುತ್ತದೆ.