ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಯಾದಗಿರಿ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಯಾದಗಿರಿ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.ಜಿಲ್ಲಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಆಯುಕ್ತರು, ತಹಸೀಲ್ದಾರರ ಕಚೇರಿಗಳು ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಈ ಪಟ್ಟಿಯನ್ನು ಲಭ್ಯಗೊಳಿಸಲಾಗಿದೆ. ಸಾರ್ವಜನಿಕರು ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ (ceokarnataka.kar.nic.in) ಅಥವಾ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ವೆಬ್ಸೈಟ್ (yadgir.nic.in) ಮೂಲಕವೂ ಪರಿಶೀಲಿಸಬಹುದು.
ಕ್ಷೇತ್ರವಾರು ಮತದಾರರ ಸಂಖ್ಯೆಯ ವಿವರ ನ.1ರ ಅನ್ವಯ ಪ್ರಕಟಿಸಲಾಗಿದೆ. ಶೋರಾಪುರದಲ್ಲಿ 325 ಮತಗಟ್ಟೆಗಳಿದ್ದು, 1,25,978 ಪುರುಷರು, | 1,23,174 ಮಹಿಳೆಯರು ಹಾಗೂ 21 ತೃತೀಯ ಲಿಂಗಿಗಳ ಸಹಿತ ಒಟ್ಟು 2,49,173 ಮತದಾರರಿದ್ದಾರೆ. ಶಹಾಪುರದಲ್ಲಿ 275 ಮತಗಟ್ಟೆಗಳ 1,05,581 ಪುರುಷರು, 1,04,202 ಮಹಿಳೆಯರು ಹಾಗೂ 16 ತೃತೀಯ ಲಿಂಗಿಗಳ ಸಹಿತ ಒಟ್ಟು 2,09,799 ಮತದಾರರಿದ್ದಾರೆ. ಯಾದಗಿರಿ 273 ಮತಗಟ್ಟೆಗಳು ಇದ್ದು, 1,06,914 ಪುರುಷರು, 1,06,634 ಮಹಿಳೆಯರು ಹಾಗೂ 20 ತೃತೀಯ ಲಿಂಗಿಗಳ ಸಹಿತ ಒಟ್ಟು 2,13,568 ಮತದಾರರಿದ್ದಾರೆ. ಗುರುಮಠಕಲ್ನಲ್ಲಿ 289 ಮತಗಟ್ಟೆಗಳಿದ್ದು, 1,07,132 ಪುರುಷರು, 1,07,495 ಮಹಿಳೆಯರು, 7 ತೃತೀಯ ಲಿಂಗಿಗಳ ಸಹಿತ ಒಟ್ಟು 2,14,634 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,162 ಮತಗಟ್ಟೆಗಳಿದ್ದು, 4,45,605 ಪುರುಷ ಮತದಾರರು, 4,41,505 ಮಹಿಳಾ ಮತದಾರರು ಹಾಗೂ 64 ತೃತೀಯ ಲಿಂಗಿಗಳ ಸಹಿತ 8,87,174 ಮತದಾರರಿದ್ದಾರೆ.ಸೇವಾ ಮತದಾರರ ವಿವರಗಳ ಅನ್ವಯ ಶೋರಾಪುರದಲ್ಲಿ 60 ಪುರುಷರು ಮತದಾರರಿದ್ದಾರೆ. ಶಹಾಪುರದಲ್ಲಿ 31 ಪುರುಷರು, 1 ಮಹಿಳೆ ಸಹಿತ ಒಟ್ಟು 32 ಮತಗಳಿವೆ. ಯಾದಗಿರಿಯಲ್ಲಿ 10 ಪುರುಷರು, 1 ಮಹಿಳೆ ಸಹಿತ ಒಟ್ಟು 11 ಮತದಾರರಿರುವರು. ಗುರುಮಠಕಲ್ನಲ್ಲಿ 14 ಪುರುಷ ಸೇವಾ ಮತದಾರರು ಇದ್ದಾರೆ. 115 ಪುರುಷರು ಮತ್ತು 2 ಮಹಿಳೆ ಸಹತ ಒಟ್ಟು 117 ಸೇವಾ ಮತದಾರರಿದ್ದಾರೆಂದು ಯಾದಗಿರಿ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.