ನಾರಾಯಣಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ 8 ಮಂದಿ ಆಯ್ಕೆ

| Published : Apr 22 2025, 01:51 AM IST

ನಾರಾಯಣಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ 8 ಮಂದಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನ ನಾರಾಯಣಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 8 ಸ್ಥಾನಗಳಲ್ಲಿ ಹಾಗೂ ರೈತಸಂಘ-ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ನಾರಾಯಣಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 8 ಸ್ಥಾನಗಳಲ್ಲಿ ಹಾಗೂ ರೈತಸಂಘ-ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ನಾರಾಯಣಪುರದ ಜೆ.ಎಂ.ಪುಟ್ಟಸ್ವಾಮಿ, ಎನ್.ಎಸ್.ಯೋಗನರಸಿಂಹ್ಮೇಗೌಡ, ಸಣಬದ ಎಸ್.ಜೆ.ಚನ್ನಕೃಷ್ಣೇಗೌಡ, ಕಾಮನಾಯಕಹಳ್ಳಿಯ ಕೆ.ವಿ.ಶ್ರೀನಿವಾಸ್, ನಳ್ಳೇನಹಳ್ಳಿಯ ಎನ್.ಎಸ್.ಆನಂದ (ಸಾಮಾನ್ಯ ವರ್ಗ), ಹೊಸಹಳ್ಳಿಯ ಎನ್.ಎಸ್.ವಿನೋದ, ವಳಗೆರೆದೇವರಹಳ್ಳಿಯ ಎಲ್.ಚಂದ್ರವತಿ (ಮಹಿಳಾ ಮೀಸಲು), ಸಿಂಗಾಪುರದ ಕರಿಯಯ್ಯ (ಪರಿಶಿಷ್ಟ ಜಾತಿ), ವಳಗೆರೆ ದೇವರಹಳ್ಳಿಯ ನಂಜೇಗೌಡ (ಬಿಸಿಎಂ ಎ), ಟಿ.ದೇವರಾಜು (ಬಿಸಿಎಂ ಬಿ), ನಾರಾಯಣಪುರದ ಜವರಯ್ಯ (ಪರಿಶಿಷ್ಟ ಪಂಗಡ) ಅವಿರೋಧ ಆಯ್ಕೆ, ಸಾಲಗಾರರಲ್ಲದ ಕ್ಷೇತ್ರದಿಂದ ನಳ್ಳೇನಹಳ್ಳಿಯ ಎನ್.ಜಿ.ಅಶೋಕ (ಸಾಮಾನ್ಯ) ಅವರು ಚುನಾಯಿತರಾದರು.

ಈ ವೇಳೆ ನೂತನ ನಿರ್ದೇಶಕರನ್ನು ಅಭಿನಂದಿದ ಜೆಡಿಎಸ್ ಮುಖಂಡ ಕೋಡಾಲ ರಾಧಾಕೃಷ್ಣ ಅವರು ಮಾತನಾಡಿ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ನಾಯಕತ್ವದಲ್ಲಿ ನಾರಾಯಣಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು 8 ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಷೇರುದಾರರ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಎಲ್ಲಾ ನಿರ್ದೇಶಕರು ಶ್ರಮಿಸಲಿದ್ದಾರೆ ಎಂದರು.

ಈ ವೇಳೆ ಮುಖಂಡರಾದ ನಾರಾಯಣಪುರ ಸುಂದ್ರಣ್ಣ, ಎನ್.ಕೆ.ಜಯರಾಂ, ಕಡಬ ಬಲರಾಂ, ಕಾಮನಾಯಕನಹಳ್ಳಿ ರಾಮಚಂದ್ರ, ಕುಮಾರ, ಅನಿಲ್ ಇತರರಿದ್ದರು.

ನಾಳೆ ರಾಜ್ಯ ಮಟ್ಟದ ಯುಗಾದಿ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಮಂಡ್ಯ

ಅಳಿಲು ಸೇವಾ ಬಳಗದಿಂದ ಏ.23ರಂದು ನಗರದಲ್ಲಿ ಯುಗಾದಿ ಕಾವ್ಯ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ ಯುಗಾದಿ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಳಕದ ಅಧ್ಯಕ್ಷ ರವಿ ಕಿರಣ, ಅಂದು ಬೆಳಗ್ಗೆ 10 ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕವಿಗಳ ಕವಿತೆಯನ್ನು ಪದ್ಯದ ರೀತಿಯಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಆಡಳಿತ ಉಪ ಕಾರ್ಯದರ್ಶಿ ಎಂ.ಬಾಬು ಕಾರ್ಯಕ್ರಮ ಉದ್ಘಾಟಿಸುವರು, ಎಸ್.ಬಿ.ಎಜುಕೇಷನ್ ಟ್ರಸ್ಟ್‌ನ ಡಾ.ಮೀರಾಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಟಿ.ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡುವರು ಎಂದರು.

ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ತೋಟಗಾರಿಕೆ ಇಲಾಖೆ ಕೆ.ಎಂ.ರೇಖಾ, ಜಾನಪದ ವಿದ್ವಾಂಸ ಡಾ.ಜೆ.ರಾಜು ಗುಂಡಾಪುರ ಭಾಗವಹಿಸುವರು ಎಂದು ತಿಳಿಸಿದರು.

ಇದೇ ವೇಳೆ ಸಾಲುಮರದ ನಾಗರಾಜು, ರೂಪ ಮಂಜುನಾಥ್, ಬಾಲಸುಬ್ರಮಣ್ಯ, ಬಾನುಪ್ರಿಯ, ರಾಘವೇಂದ್ರ, ಚುಂಚಣ್ಣ ಜಿ ಕಲ್ಲಾರೆಪುರ, ಕೃಷ್ಣಮೂರ್ತಿ, ವಿ.ಎಲ್.ಬಸವರಾಜು, ಚಂದ್ರಕಾಂತ ಎಸ್.ಎಸ್, ಮಹೇಶ್, ರಾಜೇಂದ್ರ, ಜಯಸ್ವಾಮಿ, ಕೃಷ್ಣಮೂರ್ತಿ.ಕೆ.ಎಂ, ರಾಜು ಪೂರಿಗಾಲಿ ಅವರನ್ನುಸನ್ಮಾನಿಸಲಾಗುವುದು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಬಾಲ ಸುಬ್ರಮಣ್ಯ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಇದ್ದರು.