ಸಾರಾಂಶ
ಆಳ್ವಾಸ್ ಸಂಸ್ಥೆಯ ೮ ವಿದ್ಯಾರ್ಥಿಗಳು ಹಿಮಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ: ಕರ್ನಾಟಕ ರಾಜ್ಯ ಅಮೆಚೂರ್ ಯೋಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಜಿಲ್ಲಾ ಯೋಗಾಸನ ಕ್ರೀಡಾ ಅಸೋಸಿಯೇಷನ್ ಮತ್ತು ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ಜುಲೈ 26ರಿಂದ 28ರವರೆಗೆ ರವರೆಗೆ ನಡೆಸಿದ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಟೀಮ್ ಚಾಂಪಿಯನ್‌ಶಿಪ್ ಪಡೆದಿದೆ. ಈ ಮೂಲಕ ಆಳ್ವಾಸ್ ಸಂಸ್ಥೆಯ ೮ ವಿದ್ಯಾರ್ಥಿಗಳು ಹಿಮಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
೧೦-೧೨ ವಿಭಾಗದಲ್ಲಿ ಶಶಾಂಕ ಮಹೇಶ ಬೆಳವಂಕಿ ದ್ವಿತೀಯ, ೧೪-೧೬ ವಿಭಾಗದಲ್ಲಿ ಸಾನಿಕಾ ಕಳಪ್ಪ ಸಾವಳೇ ದ್ವಿತೀಯ, ಜಯಲಕ್ಷ್ಮೀ ಜಿ.ಕೆ ನಾಲ್ಕನೇ, ಶ್ರೀವಾತ್ಸರಾಜ ಎಚ್.ಆರ್. ತೃತೀಯ, ೧೬-೧೮ ವಿಭಾಗದಲ್ಲಿ ಕುಮಾರ ಚಾವನ ನಾಲ್ಕನೇ, ಕವನಾ ಪಾಟೀಲ್ ನಾಲ್ಕನೇ ಹಾಗೂ ೧೮-೨೧ ವಿಭಾಗದಲ್ಲಿ ಹರ್ಷಿಣಿ ಎಚ್ ಆರ್ ಆರನೇ ಸ್ಥಾನ ಪಡೆದಿದ್ದಾರೆ. ೨೧-೨೫ ವಿಭಾಗದಲ್ಲಿ ನಿರ್ಮಲ ಸುಭಾಷ್ ಕೊಡ್ಲಿಕರ್ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರ ಈ ಸಾಧನೆಗೆ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.