8 ಜನ ಶಿಕ್ಷಕರ ಅಮಾನತು: ಬಿಇಒಗೆ ಮುತ್ತಿಗೆ

| Published : Apr 17 2025, 12:01 AM IST

ಸಾರಾಂಶ

ತಾಲೂಕಿನ ಎಂಟು ಜನ ಶಿಕ್ಷಕರ ಅಮಾನತು ಖಂಡಿಸಿ ರಾಜ್ಯ ಭೀಮಸೇನಾ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಬಿಇಒಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಎಂಟು ಜನ ಶಿಕ್ಷಕರ ಅಮಾನತು ಖಂಡಿಸಿ ರಾಜ್ಯ ಭೀಮಸೇನಾ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಬಿಇಒಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಬುಧವಾರ ಸಂಘದ ಪದಾಧಿಕಾರಿಗಳು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ಅಮಾನತು ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಈ ವೇಳೆ ಪದಾಧಿಕಾರಿಗಳು ಹಾಗೂ ಬಿಇಒ ನಟರಾಜು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಾತನಾಡಿದ ಪದಾಧಿಕಾರಿಗಳು ಶಿಕ್ಷಣ ಇಲಾಖೆ ವಿರುದ್ಧ ದೂರು ನೀಡಿದ ಕಾರಣಕ್ಕೆ ಶಿಕ್ಷಕ ದೇವರಾಜಯ್ಯ ಅವರನ್ನು ಅಮಾನತು ಮಾಡಲಾಗಿದೆ. ಅದೇ ರೀತಿ ಮುಗ್ಗೊಂಡನಹಳ್ಳಿ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕಿ ಕಮಲಮ್ಮ, ಸಹಶಿಕ್ಷಕ ಶಿವಮ್ಮ, ಜೋನಿಗರಹಳ್ಳಿ ಮುಖ್ಯಶಿಕ್ಷಕಿ ಸಿದ್ದಲಕ್ಷ್ಮಮ್ಮ, ಸೂರೇನಹಳ್ಳಿಯ ಮುಖ್ಯಶಿಕ್ಷಕಿ ಸುವರ್ಣಮ್ಮ, ಕೆರೆಯಾಗಲಹಳ್ಳಿ ಮುಖ್ಯಶಿಕ್ಷಕ ದೇವರಾಜಯ್ಯ, ಚಿಂಪುಗಾನಹಳ್ಳಿ ಮುಖ್ಯಶಿಕ್ಷಕ ಹನುಮಂತರಾಯಪ್ಪ, ಸಹಶಿಕ್ಷಕ ಅನಂತರಾಜು, ಅಲಪನಹಳ್ಳಿ ಮುಖ್ಯಶಿಕ್ಷಕ ರಾಮಚಂದ್ರಯ್ಯನಿಗೆ ತಿಳುವಳಿಕೆಯ ನೊಟೀಸ್ ನೀಡದೆ ಬಿಇಒ ನಟರಾಜು ಏಕಪಕ್ಷಿಯವಾಗಿ ಅಮಾನತು ಮಾಡಿದ್ದಾರೆ ಎಂದು ಆರೋಪಿಸಿದರು.

ಕೋಟ್‌...

ಬಿಇಒ ಕಚೇರಿಯ ಭ್ರಷ್ಟಚಾರದ ಬಗ್ಗೆ ವಿರುದ್ಧ ನಾನು ಲೋಕಾಯುಕ್ತ ಕಚೇರಿಗೆ ನಾನು ದೂರು ನೀಡಿದ್ದೇನೆ. ಏ.೩ರಂದು ಲೋಕಾಯುಕ್ತ ಅಧಿಕಾರಿಗಳು ಬಿಇಒ ಕಚೇರಿಗೆ ತನಿಖೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಬಿಇಒ ನಮ್ಮ ಶಾಲೆಗೆ ಏ.೫ರಂದು ಬಂದು ಪರಿಶೀಲನೆ ನಡೆಸಿ ಸರಿಯಾಗಿದೆ ಎಂದು ಸಹಿ ಹಾಕಿದ್ರು. ಕಾರಣ ನೀಡದೆ ನನ್ನನ್ನು ಏ.೭ರಂದು ನನ್ನನ್ನು ಅಮಾನತು ಮಾಡಿದ್ದಾರೆ ಇದು ನ್ಯಾಯವೆ.?

ಎಸ್.ದೇವರಾಜಯ್ಯ. ಮುಖ್ಯಶಿಕ್ಷಕ. ಕೆರೆಯಾಗಲಹಳ್ಳಿ

ಕೋಟ್‌.....

ದೇವರಾಜು ಅವರಿಗೆ ಯಾವುದೇ ರೀತಿಯಲ್ಲಿ ನಿಂದಿಸಿಲ್ಲ. ಶಾಲೆ ಕಾರ್ಯಗಳನ್ನು ಸರಿಯಾಗಿ ನಡೆಸದೆ ಇರುವುದು ಹಾಗೂ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ 8 ಜನ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. - ನಟರಾಜು, ಬಿಇಒ