ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾಣೆಯಲ್ಲಿ ಹಾನಗಲ್ಲ ತಾಲೂಕಿನ ೪ ಮತ ಕೇಂದ್ರಗಳಲ್ಲಿ ಶೇ.೭೮.೭೫ ಮತದಾನವಾಗಿದ್ದು, ಬೆಳಗಿನಿಂದಲೇ ಮಳೆ, ವಿದ್ಯುತ್ ವ್ಯತ್ಯಯ, ಇಡೀ ದಿನ ಮತದಾರರ ಸರತಿ ಸಾಲಿನೊಂದಿಗೆ ಶಾಂತ ಮತದಾನ ನಡೆಯಿತು.
ಹಾನಗಲ್ಲ: ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾಣೆಯಲ್ಲಿ ಹಾನಗಲ್ಲ ತಾಲೂಕಿನ ೪ ಮತ ಕೇಂದ್ರಗಳಲ್ಲಿ ಶೇ.೭೮.೭೫ ಮತದಾನವಾಗಿದ್ದು, ಬೆಳಗಿನಿಂದಲೇ ಮಳೆ, ವಿದ್ಯುತ್ ವ್ಯತ್ಯಯ, ಇಡೀ ದಿನ ಮತದಾರರ ಸರತಿ ಸಾಲಿನೊಂದಿಗೆ ಶಾಂತ ಮತದಾನ ನಡೆಯಿತು.
ಹಾನಗಲ್ಲ ೧೩೦೮, ತಿಳವಳ್ಳಿ ೬೭೨, ಅಕ್ಕಿಆಲೂರು ೬೯೯, ಬಮ್ಮನಹಳ್ಳಿ ೬೮೦ ಮತದಾನಗಳಲ್ಲಿ ಒಟ್ಟು ೩೩೫೯ ಮತದಾರರಿದ್ದರು. ಇದರಲ್ಲಿ ೨೨೪೨ ಪುರುಷ ಹಾಗೂ ೧೧೧೭ ಮಹಿಳಾ ಮತದಾರರಿದ್ದರು. ಇದರಲ್ಲಿ ಹಾನಗಲ್ಲ ಮತಗಟ್ಟೆಯಲ್ಲಿ ಶೇ. , ತಿಳವಳ್ಳಿ ಮತಗಟ್ಟೆಯಲ್ಲಿ ಶೇ.೭೬.೭೯, ಅಕ್ಕಿಆಲೂರು ಮತಗಟ್ಟೆಯಲ್ಲಿ ಶೇ.೮೩.೮೩, ಬಮ್ಮನಹಳ್ಳಿ ಮತಗಟ್ಟೆಯಲ್ಲಿ ೮೩.೦೯ ಮತದಾನವಾಗಿದೆ.ಬೆಳಗಿನಿಂದಲೇ ಮೋಡ ಕವಿದ ವಾತಾವರಣದಲ್ಲಿ ಮತದಾನ ಆರಂಭವಾಯಿತು. ೧೧ ಗಂಟೆಯ ಹೊತ್ತಿಗೆ ಆಗಾಗ ಮಳೆಯಾಗುತ್ತಿತ್ತು. ಹಾನಗಲ್ಲ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಇದ್ದ ಮತದಾರರ ದೊಡ್ಡ ಸರದಿಯಲ್ಲಿದ್ದವರು ಮಳೆಯಲ್ಲಿಯೇ ನೆನೆಯಬೇಕಾಯಿತು. ದಿನವಿಡೀ ಸರದಿಯ ದೊಡ್ಡ ಸಾಲು ಇತ್ತು. ಕೆಲವು ಮತದಾರರು ಸರದಿ ಸಾಲು ನೋಡಿ ನಂತರ ಬರುವುದಾಗಿ ಮನೆಗೂ ತೆರಳಿದರು. ಮಳೆಯೂ ಬರುತ್ತಿದುದರಿಂದ ಮತದಾನ ಮಾಡುವವರಿಗೆ ಒಂದಷ್ಟು ಅನಾನುಕೂಲವೂ ಆಯಿತು.
ವಿದ್ಯುತ್ ಕಣ್ಣುಮುಚ್ಚಾಲೆಯಿಂದಾಗಿ ಮತದಾನ ಕೊಠಡಿಯಲ್ಲಿ ಬೆಳಕಿನ ಅಭಾವ ಕಾಣಿಸಿತು. ಕೊನೆಗೆ ಮತ ದಾಖಲಿಸುವ ಕೌಂಟರ್ನಲ್ಲ್ಲಿ ಮೇಣಬತ್ತಿಯನ್ನು ಹಚ್ಚುವ ಪ್ರಸಂಗ ಒದಗಿತು. ವಿದ್ಯುತ್ ವ್ಯತ್ಯಯದಿಂದಾಗಿ ಚುನಾವಣಾ ಸಿಬ್ಬಂದಿಗೂ ಬೆಳಕಿನ ಕೊರತೆಯಾಯಿತು.ಸಂಜೆ ೪ ಗಂಟೆಗೆ ಮತದಾನದ ಅವಧಿ ಮುಗಿದಾಗಲೂ ಹಾನಗಲ್ಲ ಮತಗಟ್ಟೆಯಲ್ಲಿ ಇನ್ನೂ ೨ ನೂರರಷ್ಟು ಮತದಾರರು ಮತದಾನಕ್ಕಾಗಿ ಸರದಿಯಲ್ಲಿ ಕಾಯುತ್ತಿದ್ದರು. ಈ ಮತಗಟ್ಟೆಯಲ್ಲಿ ೧೩೦೮ ಮತದಾರರಿದ್ದುದರಿಂದ ಮತದಾನ ಮುಕ್ತಾಯ ವಿಳಂಬವಾಯಿತು
ಹಾನಗಲ್ಲ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಶಾಸಕ ಶ್ರೀನಿವಾಸ್ ಮಾನೆ ಮತ ಚಲಾಯಿಸಿದರು.ಮೂರನೇ ಬಾರಿಗೆ ಎಸ್.ವಿ. ಸಂಕನೂರ ಆಯ್ಕೆ ಖಚಿತ. ಅವರ ಎರಡು ಅವಧಿಯ ಕೆಲಸಗಳು, ಕಾರ್ಯಕರ್ತರ ಶ್ರಮದಿಂದಾಗಿ ನಮಗೆ ಜಯ ಲಭಿಸಲಿದೆ. ಈ ಚುನಾವಣೆ ೨೦೨೮ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕಟ್ಟೆಗೌಡರ ಹೇಳಿದರು.