ಸೋಲಾರ್ ಕೃಷಿ ಪಂಪ್ ಸೆಟ್ ಗೆ ಶೇ.80 ರಷ್ಟು ಅನುದಾನ: ಮಂಜುನಾಥ್

| Published : Sep 21 2024, 01:46 AM IST

ಸಾರಾಂಶ

ತರೀಕೆರೆಸೌರಮಿತ್ರ ಯೋಜನೆ ಮೂಲಕ ಸೋಲಾರ್ ಕೃಷಿ ಪಂಪ್ ಸೆಟ್ ಅಳವಡಿಸಲು ಶೇ.80 ರಷ್ಟು ಸರ್ಕಾರ ಅನುದಾನ ನೀಡಲಿದ್ದು. ಉಳಿದ ಶೇ 20ರಷ್ಟು ಹಣವನ್ನು ಫಲಾನುವಿಗಳು ಪಾವತಿಸಬೇಕಿದೆ ಎಂದು ಮೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಎಂ.ಎಸ್.ಮಂಜುನಾಥ್ ಹೇಳಿದರು.

ಮೆಸ್ಕಾಂ ಇಲಾಖೆ ಕಚೇರಿಯಲ್ಲಿ ಜನಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಸೌರಮಿತ್ರ ಯೋಜನೆ ಮೂಲಕ ಸೋಲಾರ್ ಕೃಷಿ ಪಂಪ್ ಸೆಟ್ ಅಳವಡಿಸಲು ಶೇ.80 ರಷ್ಟು ಸರ್ಕಾರ ಅನುದಾನ ನೀಡಲಿದ್ದು. ಉಳಿದ ಶೇ 20ರಷ್ಟು ಹಣವನ್ನು ಫಲಾನುವಿಗಳು ಪಾವತಿಸಬೇಕಿದೆ ಎಂದು ಮೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಎಂ.ಎಸ್.ಮಂಜುನಾಥ್ ಹೇಳಿದರು.

ಪಟ್ಟಣದ ಮೆಸ್ಕಾಂ ಇಲಾಖೆ ಕಚೇರಿಯಲ್ಲಿ ಗುರುವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಭಾರತೀಯ ಕಿಸಾನ್ ಸಂಘದ ರಾಜ್ಯ ಸಮಿತಿ ಸದಸ್ಯ ಪರಮೇಶ್ವರಪ್ಪ ಮಾತನಾಡಿ ಲಿಂಗದಹಳ್ಳಿ ಹೋಬಳಿ ಮಲ್ಲೇನಹಳ್ಳಿಯ ಹಳ್ಳದ ಬಳಿ ಯ ಟ್ರಾನ್ಸ್ ಫರ್ಮರ್ ಗೆ ಅಳವಡಿಸಿರುವ ವೈರ್‌ಗಳು ಹಾಳಾಗಿದ್ದು ಆಗಾಗ ತುಂಡಾಗುತ್ತಿವೆ. ಆ ಭಾಗದಲ್ಲಿರುವ ವಿದ್ಯುತ್ ಕಂಬಗಳು ದುರ್ಬಲವಾಗಿವೆ, ಲೈನ್ ಮನ್ ಗಳ ಕೊರತೆ ವಿಚಾರ ರೈತರ ಬಳಿ ಹೇಳಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿ ಕೊಳ್ಳಬೇಕು. ಟಿಸಿ ಸುತ್ತ ಗಿಡಗೆಂಟೆಗಳು ಬೆಳೆದಿದ್ದು ಸ್ವಚ್ಛಗೊಳಿಸಲು ಕ್ರಮವಹಿಸಬೇಕು ಎಂದು ಹೇಳಿದರು.ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಎಸ್.ಪಿ.ಚಂದಪ್ಪ ಮಾತನಾಡಿ, ನಂದಿ ಗ್ರಾಮದಲ್ಲಿ ನುಲಿಯ ಚಂದಯ್ಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ 8 ದಿನವೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಹೇಳಿದರು.ಎ.ಇ.ಇ.ಮಂಜುನಾಥ್, ಜೆ.ಇ.ಅಜಯ್ ಮತ್ತಿತರರು ಭಾಗವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಸದಸ್ಯರು ರುದ್ರಯ್ಯ ತರೀಕೆರೆ, ತಾಲೂಕು ಸಮಿತಿ ಸದಸ್ಯರಾದ ಯತೀಶ್ ಹುಲಿ ತಿಮ್ಮಾಪುರ, ಸಂಘದ ಸದಸ್ಯರಾದ ಲತೇಶ್ ಲಿಂಗದಹಳ್ಳಿ, ತಿಮ್ಮಾಬೋವಿ ಹುಲಿತಿಮ್ಮಾಪುರ, ಹಾಲೇಶಪ್ಪ ಹಲಸೂರು, ರಾಜಪ್ಪ ಮಲ್ಲೇನಹಳ್ಳಿ, ಮಹೇಶ್ ಟಿ.ಎನ್.ಮಲ್ಲೇನಹಳ್ಳಿ, ಉಮೇಶಣ್ಣ ಸುಣ್ಣದಹಳ್ಳಿ, ದಯಾನಂದ ಸುಣ್ಣದಹಳ್ಳಿ ಹಾಗೂ ಭಾರತೀಯ ಕಿಸಾನ್ ಸಂಘದ ಸದಸ್ಯರು ಮತ್ತಿತರರು ಭಾಗವಹಿಸಿದ್ದರು. 19ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಮೆಸ್ಕಾಂ ಇಲಾಖೆ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಯಿತು.