ಸಾರಾಂಶ
ವಿಶ್ವವಿಖ್ಯಾತ ಹಂಪಿಗೆ ಶನಿವಾರ ಒಂದೇ ದಿನ 80 ಸಾವಿರಕ್ಕೂ ಅಧಿಕ ದೇಶ, ವಿದೇಶಿ ಪ್ರವಾಸಿಗರು ಆಗಮಿಸಿದ್ದು, ಸ್ಮಾರಕಗಳ ಬಳಿ ಹೆಚ್ಚಿನ ಪ್ರವಾಸಿಗರು ಜಮಾಯಿಸಿದ್ದರು.
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಶನಿವಾರ ಒಂದೇ ದಿನ 80 ಸಾವಿರಕ್ಕೂ ಅಧಿಕ ದೇಶ, ವಿದೇಶಿ ಪ್ರವಾಸಿಗರು ಆಗಮಿಸಿದ್ದು, ಸ್ಮಾರಕಗಳ ಬಳಿ ಹೆಚ್ಚಿನ ಪ್ರವಾಸಿಗರು ಜಮಾಯಿಸಿದ್ದರು.
ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಪ್ರವಾಸಿ ಮಾರ್ಗದರ್ಶಿಗಳು ಕೂಡ ಸರಿಯಾಗಿ ದೊರೆಯದೇ ಪ್ರವಾಸಿಗರು ಪರದಾಟ ನಡೆಸಿದರು. ಹಂಪಿಯಲ್ಲಿ ಪ್ರವಾಸಿ ಮಾರ್ಗದರ್ಶಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು ಎಂದು ಪ್ರವಾಸಿಗರು ಒತ್ತಾಯಿಸಿದರು.ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೊಸಪೇಟೆ, ಗಂಗಾವತಿ ಭಾಗದ ಹೋಟೆಲ್, ರೆಸಾರ್ಟ್‌ಗಳು ಫುಲ್ ಆಗಿವೆ. ಕೆಲವು ಹೋಟೆಲ್‌ಗಳಲ್ಲಿ ರೂಮ್ ದೊರೆಯುತ್ತಿಲ್ಲ. ಇದರಿಂದ ಕಾರುಗಳಲ್ಲೇ ವಿಶ್ರಾಂತಿ ಪಡೆದು, ಪ್ರವಾಸಿಗರು ಸ್ಮಾರಕಗಳನ್ನು ನೋಡುವಂತಾಗಿದೆ. ಹೊಸಪೇಟೆ, ಕಮಲಾಪುರ ಭಾಗದ ಹೋಟೆಲ್, ರೆಸಾರ್ಟ್‌ಗಳು ಜನವರಿ 3ರ ವರೆಗೆ ಬುಕ್ ಆಗಿದ್ದು, ಎಲ್ಲಿಯೂ ರೂಮ್‌ಗಳು ಸಿಗದಂತಾಗಿದೆ. ಆದರೆ, ಈ ಪ್ರವಾಸಿಗರಿಂದಾಗಿ ಪ್ರವಾಸೋದ್ಯಮ ವಲಯ ಚೇತರಿಸಿದೆ.
ಹಂಪಿಗೆ ಶನಿವಾರ ಒಂದೇ ದಿನ 80 ಸಾವಿರಕ್ಕೂ ಅಧಿಕ ಪ್ರವಾಸಿಗರು ಹರಿ್ದು ಬಂದಿದ್ದು, ಕಲ್ಲಿನತೇರು ಸ್ಮಾರಕದ ಬಳಿ ಕಂಡು ಬಂದ ಪ್ರವಾಸಿಗರು.