ಶ್ರೀನಿವಾಸಪುರ ಪುರಸಭೆಗೆ ₹87.56 ಲಕ್ಷ ಉಳಿತಾಯ ಬಜೆಟ್‌

| Published : Mar 29 2025, 12:33 AM IST

ಶ್ರೀನಿವಾಸಪುರ ಪುರಸಭೆಗೆ ₹87.56 ಲಕ್ಷ ಉಳಿತಾಯ ಬಜೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿರುವ ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕರು ಹಾಗೂ ಕೆಲ ವಾಣಿಜ್ಯ ಮಳಿಗೆಗಳ ಮಾಲೀಕರು ಅನೇಕ ವರ್ಷದಿಂದ ಕಂದಾಯ ಕಟ್ಟಿಲ್ಲ ಇಂತಹವರು ಪಟ್ಟಣದ ಅಭಿವೃದ್ಧಿಗಾಗಿ ಸಹಕರಿಸಬೇಕು. ಈ-ಸ್ವತ್ತು ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು,ಈ-ಸ್ವತ್ತು ಮಾಡಿಸಿಕೊಳ್ಳದವರು ನಿಗಧಿತ ಅವಧಿಯೊಳಗೆ ಈ-ಸ್ವತ್ತು ಮಾಡಿಸಿಕೊಳ್ಳುವಂತೆ ಕೋರಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡುವ ಮೂಲಕ ಸ್ವಚ್ಛ ಹಾಗು ಸುಂದರವಾದ ಪಟ್ಟಣವನ್ನಾಗಿಸಲು ಪುರಸಭೆಯೊಂದಿಗೆ ಕೈ ಜೊಡಿಸುವಂತೆ ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮನವಿ ಮಾಡಿದರು.ಪುರಸಭಾ ಕಚೇರಿ ಸಭಾಂಗಣದಲ್ಲಿ ೨೦೨೫-೨೬ನೇ ಸಾಲಿನ ಆಯ-ವ್ಯಯ ಸಭೆ ಹಾಗೂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪಟ್ಟಣದಲ್ಲಿರುವ ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕರು ಹಾಗೂ ಕೆಲ ವಾಣಿಜ್ಯ ಮಳಿಗೆಗಳ ಮಾಲೀಕರು ಅನೇಕ ವರ್ಷದಿಂದ ಕಂದಾಯ ಕಟ್ಟಿಲ್ಲ ಇಂತಹವರು ಪಟ್ಟಣದ ಅಭಿವೃದ್ಧಿಗಾಗಿ ಸಹಕರಿಸಬೇಕೆಂದು ಮನವಿ ಮಾಡಿದರು.

ಈ-ಸ್ವತ್ತು ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು,ಈ-ಸ್ವತ್ತು ಮಾಡಿಸಿಕೊಳ್ಳದವರು ನಿಗಧಿತ ಅವಧಿಯೊಳಗೆ ಈ-ಸ್ವತ್ತು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.ಉಳಿತಾಯ ಬಜೆಟ್ ಮಂಡನೆಮನೆ ಕಂದಾಯ ಪರಿಷ್ಕರಣೆ, ಮಳಿಗೆ ಬಾಡಿಗೆ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪುರಸಭೆ ಅಧ್ಯಕ್ಷರು ೨೦೨೫-೨೬ನೇ ಸಾಲಿನಲ್ಲಿ ೮೭,೫೬,೦೦೦ ಉಳಿತಾಯ ಬಜೆಟ್ ಮಂಡಿಸಿದರು. ಕಟ್ಟೆಕೆಳಗಿನ ಪಾಳ್ಯವನ್ನು ಕೊಳಚೆ ನಿರ್ಮೂಲನ ಪ್ರದೇಶ ಎಂದು ಘೋಷಣೆ ಮಾಡುವ ವಿಚಾರ ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಿಗೆ ಪುಟ್‌ಪಾತ್ ನಿರ್ಮಾಣ ಮಾಡುವುದು ಸಭೆಯಲ್ಲಿ ಸಂಕ್ಷಿಪ್ತವಾಗಿ ಚರ್ಚೆಸಲಾಯಿತು.ಫುಟ್‌ಪಾತ್‌ ತೆರವಿಗೆ ಕ್ರಮ

ಫುಟ್‌ಪಾತ್ ಅತಿಕ್ರಮಕ್ಕೆ ಕಡಿವಾಣ ಪುರಸಭೆ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ನೀಡುವಂತೆ ಕೋರಿದ ಅವರು ಪಟ್ಟಣದಲ್ಲಿ ಫುಟ್‌ಪಾತ್‌ ಅತಿಕ್ರಮಣ ದಿಂದ ಸಂಚಾರಕ್ಕೆ ತೊಂದರೆಯಾಗಿದ್ದು ವಿಶೇಷವಾಗಿ ರಾಜಾಜಿರಸ್ತೆ, ರಾಮಕೃಷ್ಣ ಬಡಾವಣೆ ಮುಖ್ಯ ರಸ್ತೆ ರಾಮಕೃಷ್ಣ ರಸ್ತೆಗಳಲ್ಲಿ ಕೆಲವರು ಪುಟ್‌ಬಾತ್ ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದೆ. ಯಾವುದೇ ಕಾರಣಕ್ಕೂ ಫುಟ್‌ಪಾತ್‌ನಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಕಟ್ಟನಿಟ್ಟಿನ ಕ್ರಮಕೈಗೊಂಡು ಕಡಿವಾಣ ಹಾಕುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಕೆ.ಎಸ್.ಸುನೀತಾ, ಪುರಸಭಾ ಮುಖ್ಯಾಧಿಕಾರಿ ವಿ.ನಾಗರಾಜು, ಕಂದಾಯ ಅಧಿಕಾರಿ ಎನ್.ಶಂಕರ್, ನಿರೀಕ್ಷಕ ಮಂಜುನಾಥ್, ಕಂದಾಯ ವಸೂಲಿಗಾರ ಪ್ರತಾಪ್, ಆರೋಗ್ಯ ನಿರೀಕ್ಷಕ ಸಿ.ಸುರೇಶ್, ಎಫ್‌ಡಿಎಗಳಾದ ಸಂತೋಷ, ನಾಗೇಶ್ ಇದ್ದರು.