ದಾವಣಗೆರೆ ವಿವಿಯ 13ನೇ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 12706 ವಿದ್ಯಾರ್ಥಿಗಳಿಗೆ ಶುಕ್ರವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದ್ದಾರೆ.
- ಘಟಿಕೋತ್ಸವದಲ್ಲಿ 12706 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ರಾಜ್ಯಪಾಲ ಗೆಹ್ಲೋಟ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ವಿವಿಯ 13ನೇ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 12706 ವಿದ್ಯಾರ್ಥಿಗಳಿಗೆ ಶುಕ್ರವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.ಘಟಿಕೋತ್ಸವದಲ್ಲಿ 45 ವಿದ್ಯಾರ್ಥಿಗಳು 87 ಚಿನ್ನದ ಪದಕ ಮುಡಿಗೇರಿಸಿಕೊಂಡರೆ, 70 ಸಂಶೋಧನಾರ್ಥಿಗಳು ಪಿಎಚ್.ಡಿ ಪದವಿ ಸ್ವೀಕರಿಸಿದರು. ವಿವಿಧ ಸ್ನಾತಕ ಪದವಿಗಳಲ್ಲಿ 6401 ಮಹಿಳಾ ಹಾಗೂ 4283 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 10684 ವಿದ್ಯಾರ್ಥಿಗಳು ಸ್ನಾತಕ ಪದವಿಗೆ ಭಾಜನರಾದರು. ಇನ್ನು 1191 ಮಹಿಳಾ ಹಾಗೂ 831 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 2022 ವಿದ್ಯಾರ್ಥಿಗಳು ವಿವಿಧ ಸ್ನಾತಕೋತ್ತರ ಪದವಿ ಸ್ವೀಕರಿಸಿದರು.
ಒಟ್ಟು 7 ಚಿನ್ನದ ಪದಕ ಮುಡಿಗೇರಿಸಿಕೊಂಡ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಜಿಗಳಿ ಗ್ರಾಮದ ಎನ್.ಬಿ.ನಯನ ಚಿನ್ನದ ಹುಡುಗಿಯೆಂಬ ಮನ್ನಣೆ ಪಡೆದರು. ಸ್ನಾತಕೋತ್ತರ ಪದವಿಯಲ್ಲಿ ಎಂಬಿಎ ವಿಭಾಗದ ಆರ್.ದೀಪಾ 5 ಸ್ವರ್ಣ ಪದಕ, ಗಣಿತಶಾಸ್ತ್ರ ವಿಭಾಗದ ಪಿ.ಎಂ.ಕವನ, ಜೀವ ರಸಾಯನ ಶಾಸ್ತ್ರ ವಿಭಾಗದ ಡಿ.ರುಚಿತಾ, ಭೌತ ವಿಜ್ಞಾನ ವಿಭಾಗದ ಎಂ.ಆರ್. ಪುಟ್ಟರಾಜ, ಪ್ರಾಣಿಶಾಸ್ತ್ರ ವಿಭಾಗ ಜೆ.ಪುಷ್ಪಾ, ಇಂಗ್ಲಿಷ್ ವಿಭಾಗದ ಬಿ.ಎಂ.ವಿಜಯಲಕ್ಷ್ಮೀ, ಕನ್ನಡ ವಿಭಾಗದ ಎಂ.ಎಂ. ಅನುಷಾ ತಲಾ 3 ಚಿನ್ನದ ಪದಕ ಹಂಚಿಕೊಂಡರು.ಸ್ನಾತಕ ಕಲಾ ಪದವಿ(ಬಿಎ)ಯಲ್ಲಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಡಿ.ಆರ್. ಪ್ರಿಯಾಂಕ, ವಾಣಿಜ್ಯ (ಬಿ.ಕಾಂ) ಪದವಿಯಲ್ಲಿ ದಾವಣಗೆರೆ ಎಜಿಬಿ ಪ್ರಥಮ ದರ್ಜೆ ಕಾಲೇಜಿನ ಎಸ್.ಕೀರ್ತನಾ, ಶಿಕ್ಷಣ (ಬಿ.ಇಡಿ) ಪದವಿಯಲ್ಲಿ ದಾವಣಗೆರೆ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಕಾಲೇಜಿನ ಜೆ.ಹಜ್ಮಾ ತಲಾ 3 ಚಿನ್ನದ ಪದಕ ಪಡೆದಿದ್ದಾರೆ. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದಲ್ಲಿ ಎಸ್‌ಬಿಸಿ ಪ್ರಥಮ ದರ್ಜೆ ಕಾಲೇಜಿನ ಕೋನೇನ್ ತಬಸುಂ, ಪತ್ರಿಕೋದ್ಯಮ ವಿಭಾಗದ ವಿ.ಎಂ. ಚಂದನ, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಬಿ.ಪ್ರದೀಪ ಕುಮಾರ, ಸಸ್ಯಶಾಸ್ತ್ರ ವಿಭಾಗದ ಎಂ.ಪ್ರಿಯಾ, ಎಂಪಿಇಡಿಯಲ್ಲಿ ಎ.ಎಂ. ಗಗನ, ರಸಾಯನಶಾಸ್ತ್ರ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಟಿ.ಚೌಡೇಶ್ವರಿ, ಗಣಕ ವಿಜ್ಞಾನ ವಿಭಾಗದ ಎಚ್.ಪಿ.ಸುಮತಿ, ಆಹಾರ ತಂತ್ರಜ್ಞಾನ ವಿಭಾಗದ ನಿತೀಶ್ ಕೆ.ಗೌಡ, ಜೈವಿಕ ತಂತ್ರಜ್ಞಾನ ವಿಭಾಗದ ಎಸ್.ಸತ್ಯಮೂರ್ತಿ., ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಗಾಯತ್ರಿ ದೀಪಿಕಾ ಬಿ ತಲಾ 2 ಬಂಗಾರದ ಪದಕ ತಮ್ಮದಾಗಿಸಿಕೊಂಡರು.
ಅರ್ಥಶಾಸ್ತ್ರ ವಿಭಾಗದಲ್ಲಿ ಶಿವಗಂಗೋತ್ರಿ ಆವರಣದ ಆರ್.ಕಾವ್ಯಾ, ಕನ್ನಡ ವಿಭಾಗದಲ್ಲಿ ಚಿತ್ರದುರ್ಗ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಸಿ.ಸಿ.ಬೋರಯ್ಯ, ರಾಜ್ಯಶಾಸ್ತ್ರ ವಿಭಾಗದ ಎಚ್.ಸಿಂಧು, ಜಿ.ಎಂ. ಅಮೂಲ್ಯ, ಸಮಾಜಶಾಸ್ತ್ರ ವಿಭಾಗದಲ್ಲಿ ಪಿ.ಒ. ಶುಭಾ, ಉರ್ದು ವಿಭಾಗದಲ್ಲಿ ಶುಬ್ನಮ್ ಬಳಿಗಾರ, ಎಂಎಸ್‌ಡಬ್ಲ್ಯು ವಿಭಾಗದಲ್ಲಿ ಎಂ.ಚಿಕ್ಕಮ್ಮ. ಎಂ.ಕಾಂನಲ್ಲಿ ಎಸ್.ಎ. ತೇಜರಾಜ, ಎಂಬಿಎ ವಿಭಾಗದಲ್ಲಿ ಎಸ್.ಪಾವನಿ, ಕೆ.ಎಸ್.ಪಲ್ಲವಿ, ಎಂಇಡಿಯಲ್ಲಿ ಎಂ.ಸಮ್ರಿನ್, ಜೀವ ರಸಾಯನಶಾಸ್ತ್ರ ವಿಭಾಗದ ಎನ್.ನಂದಿತಾ, ಜೈವಿಕ ತಂತ್ರಜ್ಞಾನ ವಿಭಾಗದ ಆರ್. ಕೆ. ಧನರಾಜ, ಅಪರಾಧ ಶಾಸ್ತ್ರ ವಿಭಾಗದ ಓ.ಎಸ್. ಐಶ್ವರ್ಯ, ಯೋಗ ವಿಜ್ಞಾನ ವಿಭಾಗದಲ್ಲಿ ಬಾಳಾ ಸಾಹೇಬ ಸುರಪುರ ತಲಾ 1 ಚಿನ್ನದ ಪದಕ ಪಡೆದರು.ದೃಶ್ಯಕಲಾ ಮಹಾವಿದ್ಯಾಲಯದ ಐಶ್ವರ್ಯ ಎಲಿಗಾರ, ಬಿಸಿಎ ಪದವಿಯಲ್ಲಿ ಇಂಟರ್‌ಫೇಸ್ ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನ ಪಿ.ವೆಂಕಟದುರ್ಗಾ ಪ್ರಸಾದ, ಬಿಎಸ್‌ಸಿಯಲ್ಲಿ ಎ.ವಿ. ಕಮಲಮ್ಮ ಕಾಲೇಜಿನ ಹಬೀಬಾ ಮಿಸ್ಬಾ ತಲಾ 2 ಚಿನ್ನದ ಪದಕ ಗಳಿಸಿದ್ದಾರೆ. ಬಿ.ಪಿ.ಇಡಿಯಲ್ಲಿ ಮಲ್ಲಾಡಿಹಳ್ಳಿ ಶತಮಾನೋತ್ಸವ ದೈಹಿಕ ಶಿಕ್ಷಣ ಕಾಲೇಜಿನ ಬಿ.ನಾಗವೇಣಿ, ಬಿಬಿಎನಲ್ಲಿ ಆರ್‌ಜಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದಿಶಾ ಜೈನ್, ಗಣಿತ ಶಾಸ್ತ್ರದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಿಆರ್‌ಎಂ ಕಾಲೇಜಿನ ಸುಶ್ಮಿತಾ ರಾವ್ ಹಾಗೂ ದೃಶ್ಯ ಕಲಾ ಕಾಲೇಜಿನ ಎ.ಆರ್. ನವ್ಯಾ ತಲಾ ಒಂದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಘಟಿಕೋತ್ಸವದಲ್ಲಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲ ಸಚಿವ ಪ್ರೊ.ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ವಂದನಾ, ವಿವಿಧ ನಿಕಾಯಗಳ ಡೀನ್ ಪ್ರೊ. ಕೆ.ವೆಂಕಟೇಶ, ಪ್ರೊ. ಎಂ.ಯು.ಲೋಕೇಶ, ಪ್ರೊ.ಗೋವಿಂದಪ್ಪ, ಪ್ರೊ.ಶ್ರೀನಿವಾಸ, ಸಿಂಡಿಕೇಟ್ ಮತ್ತು ಅಕಾಡೆಮಿಕ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.- - -
(ಫೋಟೋಗಳಿವೆ)