88559 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಗೆ ಎಲೆಚುಕ್ಕೆ ರೋಗ, ಪ್ರತಾಪಸಿಂಹ ನಾಯಕ್ ಪ್ರಶ್ನೆಗೆ ಸಚಿವರ ಉತ್ತರ

ಬೆಳ್ತಂಗಡಿ: ಮಲೆನಾಡು, ಕರಾವಳಿ ಹಾಗೂ ಶಿವಮೊಗ್ಗ ಭಾಗದ ಅಂದಾಜು 88559 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಗೆ ಎಲೆಚುಕ್ಕೆ ರೋಗವು ಭಾದೆ ಕಂಡುಬಂದಿರುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಅವರು ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ ಗಮನ ಸೆಳೆಯುವ ಪ್ರಶ್ನೆಗೆ ಸಚಿವರು ಉತ್ತರಿಸಿದರು 2025-26 ನೇ ಸಾಲಿನಲ್ಲಿ ಎಂಐಡಿಎಚ್‌ ಮಾರ್ಗಸೂಚಿಯನ್ವಯ ರಾಷ್ಟ್ರೀಯ ತೋಟಗಾರಿಕೆ ಮಿಶನ್ ಯೋಜನೆಯ ಸ್ಪೆಷಲ್‌ ಇಂಟರ್‌ವೆನ್ಷನ್‌ ಎಲೆಚುಕ್ಕೆ ರೋಗದ ನಿಯಂತ್ರಣ ಕಾರ್ಯಕ್ರಮದಡಿ ಸಮಗ್ರ ರೋಗ/ಕೀಟಗಳ ಹಾಗೂ ಪೋಷಕಾಂಶಗಳ ನಿರ್ವಹಣೆಗಾಗಿ ಪ್ರತಿ ಹೆಕ್ಟೇರಿಗೆ ತಗಲುವ ರು. 5000/ ಗಳಲ್ಲಿ ಶೇ.30 ರಂತೆ ಪ್ರತಿ ಹೆಕ್ಟೇರಿಗೆ ರು..1500/ ದರದಲ್ಲಿ 2 ಹೆಕ್ಟೇರ್ ರವರೆಗೆ 3000 ರು.ನಂತೆ 860-65 ಲಕ್ಷ ರು. ಅನುದಾನ ನಿಗದಿಯಾಗಿದೆ. ಈವರೆಗೂ 14115 ರೈತರಿಗೆ 452.61 ಲಕ್ಷ ರು. ಸಹಾಯಧನ ನೀಡಲಾಗಿರುತ್ತದೆ. ಸಹಾಯಧನ ನೀಡುವಿಕೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಮುಂಗಾರು ಮತ್ತು ಹಿಂಗಾರು ಮರುವಿನ್ಯಾಸಗೊಳಿಸಲಾದ ಬೆಳೆವಿಮೆ ನಮ್ಮ ಸಂಭವಿಸಿದಲ್ಲಿ ವಿಮಾ ಒದಗಿಸಲಾಗುತ್ತಿದೆ. ಪ್ರಸ್ತಕ ಸಾಲಿನಲ್ಲಿ ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕಿ ರೋಗ ಬಾಧಿತ ಸಸ್ಯದ ಭಾಗಗಳನ್ನು ತೆಗೆಯುವುದು ಮತ್ತು ನಾಶಪಡಿಸುವುದು ಸಸ್ಯ ನಿರ್ವಹಣೆಗೆ ಸಹಾಯಧನಕ್ಕಾಗಿ ಒಟ್ಟಾರೆ 57776.33 ಲಕ್ಷ ರು. ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಎಂಐಡಿಎಚ್‌ ಮಾರ್ಗಸೂಚಿಯನ್ವಯ ಸಹಾಯಧನದಂತೆ ರು.17332.90 ಲಕ್ಷ ರು.ಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿಮಾ ಪರಿಹಾರದಲ್ಲಿ ಹವಮಾನ ವೈಪರಿತ್ಯದಿಂದ ಆಗುವ/ ಹೆಚ್ಚಾಗುವ ರೋಗಗಳಿಂದಾಗುವ ನಷ್ಟವು ಸಹ ಪರೋಕ್ಷವಾಗಿ ಒಳಗೊಂಡಿರುತ್ತದೆ, 2024-25ನೇ ಸಾಲಿನಲ್ಲಿ ಈ ಯೋಜನೆಯಡಿ ಅಡಿಕೆ ಬೆಳೆಗೆ ವಿಮಾ ಕಂಪನಿಗಳಿಂದ ಈವರೆಗೆ 365920 ಅರ್ಹ ರೈತರಿಗೆ 47254 13 ಲಕ್ಷ ರು.ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.