ಕಲಬುರಗಿ-ಯಾದಗಿರ ಜಿಲ್ಲೆಯಲ್ಲಿ ೯.೭೨ ಲಕ್ಷ ಪಡಿತರ ಚೀಟಿ ಚಾಲ್ತಿ

| Published : Jul 25 2024, 01:22 AM IST

ಕಲಬುರಗಿ-ಯಾದಗಿರ ಜಿಲ್ಲೆಯಲ್ಲಿ ೯.೭೨ ಲಕ್ಷ ಪಡಿತರ ಚೀಟಿ ಚಾಲ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನೆರೆಯ ಯಾದಗಿರಿ ಹಾಗೂ ಕಲಬುರಗಿ ಉಭಯ ಜಿಲ್ಲೆಯಲ್ಲಿ ಒಟ್ಟು ೯೭೨೮೫೫ ಪಡಿತರ ಕಾರ್ಡ್‌ಗಳು ಚಾಲ್ತಿಯಲ್ಲಿವೆ ಮತ್ತು ಇಲ್ಲಿನ ದಾಸೋಹ ಯೋಜನೆ ಅಡಿಯೂ ಆಹಾರಧಾನ್ಯ ವಿತರಿಸಲಾಗುತ್ತಿದೆ ಎಂದು ಆಹಾರ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನೆರೆಯ ಯಾದಗಿರಿ ಹಾಗೂ ಕಲಬುರಗಿ ಉಭಯ ಜಿಲ್ಲೆಯಲ್ಲಿ ಒಟ್ಟು ೯೭೨೮೫೫ ಪಡಿತರ ಕಾರ್ಡ್‌ಗಳು ಚಾಲ್ತಿಯಲ್ಲಿವೆ ಮತ್ತು ಇಲ್ಲಿನ ದಾಸೋಹ ಯೋಜನೆ ಅಡಿಯೂ ಆಹಾರಧಾನ್ಯ ವಿತರಿಸಲಾಗುತ್ತಿದೆ ಎಂದು ಆಹಾರ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.

ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಅವರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲಬುರಗಿ ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಅಡಿ ೬೨೩೦೯, ಆದ್ಯತಾ ಪಡಿತರ ಚೀಟಿ ೫೦೭೯೩೬ ಮತ್ತು ಆದ್ಯತರ ಪಡಿತರ ಚೀಟಿ ೧೧೫೪೮೫ ಸೇರಿ ೬೮೫೭೩೦ ಕಾರ್ಡ್ಗಳಿವೆ. ಯಾದಗಿರಿ ಜಿಲ್ಲೆಯಲ್ಲಿ ಅಂತ್ಯೋದಯ ೨೯೨೦೯, ಆದ್ಯತಾ ೨೪೦೩೧೧, ೩ ೧೭೬೦೫೮ ೨೮೭೧೨೫ ಚೀಟಿಗಳು ಚಾಲ್ತಿಯಲ್ಲಿವೆ ಎಂದು ಸಚಿವರು ವಿವರಿಸಿದರು.

ಪಡಿತರ ಚೀಟಿಗಾಗಿ ಕಲಬುರಗಿ ಜಿಲ್ಲೆಯಲ್ಲಿ ೨೦೩೦೩ ಅರ್ಜಿ ಬಾಕಿ ಇದ್ದು, ಇದರಲ್ಲಿ ೮೭೭೨ ಅರ್ಜಿ ಅನುಮೋದಿಸಲಾಗಿದೆ. ೩೨೭ ತಿರಸ್ಕೃತ, ೧೧೨೦೪ ಅರ್ಜಿ ಪರಿಶೀಲನೆ ಹಂತದಲ್ಲಿವೆ.

ರಾಜ್ಯದಲ್ಲಿ ೨೦೧೭-೧೮ನೇ ಸಾಲಿನಿಂದ ದಾಸೋಹ ಯೋಜನೆ ಅಡಿ ರಾಜ್ಯದ ಅರ್ಹ ಕಲ್ಯಾಣ ಸಂಸ್ಥೆಗಳಿಗೆ ಉಚಿತ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ. ಜೂನ್‌ನಲ್ಲಿ ೨೭೨ ರಾಜ್ಯ ಸಂಸ್ಥೆಗಳು, ೧೭೦ ಕೇಂದ್ರ ಸಂಸ್ಥೆಗಳು ಸೇರಿ ೪೪೨ ಸಂಸ್ಥೆಗಳ ೪೩೦೧೧ ಫಲಾನುಭವಿಗಳಿಗೆ ಆಹಾರಧಾನ್ಯ ಹಂಚಿಕೆ ಮಾಡಲಾಗುತ್ತಿದೆ.

ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ೨೭೬೪೫೯ ಮತ್ತು ೧೫೫೯೨೭ ಅರ್ಹ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸರ್ಕಾರ ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು ಆದ್ಯತಾ ಪಡಿತರ ಚೀಟಿ ಪಡೆಯಲು ಅರ್ಹರಲ್ಲ ಎಂದು ಹೇಳಿದರು. ಕುಟುಂಬದ ವಾರ್ಷಿಕ ಆದಾಯ ೧.೨೦ ಲಕ್ಷಕ್ಕಿಂತಲೂ ಹೆಚ್ಚು ಇರುವ ಕುಟುಂಬ, ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬ ಈ ಚೀಟಿಗೆ ಅರ್ಹತೆ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.