ಬಾಲಕನ ಚಿಕಿತ್ಸೆಗೆ 5 ಲಕ್ಷ ರೂ. ನೆರವು ನೀಡಿದ ಜಮೀರ್ ಅಹಮದ್ ಖಾನ್

| Published : Aug 21 2025, 01:00 AM IST

ಬಾಲಕನ ಚಿಕಿತ್ಸೆಗೆ 5 ಲಕ್ಷ ರೂ. ನೆರವು ನೀಡಿದ ಜಮೀರ್ ಅಹಮದ್ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಕ ಗಗನ್ ಗೌಡ ಹಾಗೂ ಆತನ ತಂದೆ ಚೆಲುವಪ್ಪ ಅವರನ್ನು ವಿಕಾಸ ಸೌಧ ಕಚೇರಿಗೆ ಕರೆಸಿಕೊಂಡ ಸಚಿವ

ಫೋಟೋ - 20ಎಂವೈಎಸ್‌ 20ಕನ್ನಡಪ್ರಭ ವಾರ್ತೆ ಮೈಸೂರುಬೊನ್ ಮ್ಯಾರೋ ಟ್ರಾನ್ಸ್ ಪಲೆಂಟ್'''' ಕಾಯಿಲೆಯಿಂದ ಬಳಲುತ್ತಿದ್ದ ಎಚ್.ಡಿ. ಕೋಟೆಯ ಹಿರೇಹಳ್ಳಿಯ ಎನ್. ಚೆಲುವಪ್ಪ ಪುತ್ರ ಗಗನ್ ಗೌಡ ಎಂಬ 9 ವರ್ಷದ ಬಾಲಕನ ಚಿಕಿತ್ಸೆಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ವೈಯಕ್ತಿಕವಾಗಿ 5 ಲಕ್ಷ ರೂ. ನೆರವು ನೀಡಿದರು. ಬಾಲಕನ ವೈದ್ಯಕೀಯ ಚಿಕಿತ್ಸೆಗೆ 35 ಲಕ್ಷ ರೂ. ಅಗತ್ಯವಿದ್ದು, ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮೂಲಕ ನೆರವಿಗಾಗಿ ಬೆಂಗಳೂರಿಗೆ ಬಂದಿದ್ದ ಬಾಲಕ ಗಗನ್ ಗೌಡ ಹಾಗೂ ಆತನ ತಂದೆ ಚೆಲುವಪ್ಪ ಅವರನ್ನು ವಿಕಾಸ ಸೌಧ ಕಚೇರಿಗೆ ಕರೆಸಿಕೊಂಡ ಸಚಿವರು ಐದು ಲಕ್ಷ ರೂ. ನೀಡಿದರು.ಶಾಸಕರಾದ ಗಣೇಶ್, ಅಸೀಫ್ ಸೇಠ್, ಭರತ್ ರೆಡ್ಡಿ, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಭೀಮಾ ನಾಯ್ಕ್ ಇದ್ದರು.