ಒಟ್ಟು 627 ಮತದಾರದಲ್ಲಿ 419 ಪುರುಷರು, 151 ಮಹಿಳೆಯರು ಸೇರಿ ಒಟ್ಟು 570 ಮತದಾರರು ಮತದಾನದಲ್ಲಿ ಪಾಲ್ಗೊಂಡಿದ್ದರು
ಹರಪನಹಳ್ಳಿ: ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಹರಪನಹಳ್ಳಿ ತಾಲೂಕಿನಲ್ಲಿ ಶೇ. 90.91 ರಷ್ಟು ಮತದಾನವಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ಶಾಂತಿಯುತವಾಗಿ ಜರುಗಿತು.
ಹರಪನಹಳ್ಳಿ ಸಪಪೂ ಕಾಲೇಜು ಮತಗಟ್ಟೆಯಲ್ಲಿ ಶೇ. 91.04, ತೆಲಿಗಿ ಗ್ರಾಪಂ ಮತಗಟ್ಟೆಯಲ್ಲಿ ಶೇ.88.17, ನಜೀರ ನಗರ ಶಾಲೆಯ ಮತಗಟ್ಟೆಯಲ್ಲಿ ಶೇ. 92.92 ಹಾಗೂ ಅರಸೀಕೆರೆ ನಾಡ ಕಚೇರಿಯಲ್ಲಿ ಶೇ.90.67 ರಷ್ಟು ಮತದಾನವಾಗಿದೆ. ಒಟ್ಟು 627 ಮತದಾರದಲ್ಲಿ 419 ಪುರುಷರು, 151 ಮಹಿಳೆಯರು ಸೇರಿ ಒಟ್ಟು 570 ಮತದಾರರು ಮತದಾನದಲ್ಲಿ ಪಾಲ್ಗೊಂಡಿದ್ದರು.ಉಪವಿಭಾಗಾಧಿಕಾರಿ ಸುರೇಶಕುಮಾರ, ತಹಸೀಲ್ದಾರ ಬಿ.ವಿ.ಗಿರೀಶಬಾಬು, ನಗರಸಭಾ ಆಯುಕ್ತೆ ರೇಣುಕಾ ದೇಸಾಯಿ, ಬಿಇಒ ಲೇಪಾಕ್ಷಪ್ಪ, ತೋಟಗಾರಿಕೆಯ ಜಯಸಿಂಹ, ಬಿಸಿಎಂ ಇಲಾಖೆಯ ಭೀಮಪ್ಪ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಮಿಯಾನ ಹಾಕಿಕೊಂಡು ಕುಳಿತ ಮುಖಂಡರು:ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ನಗರದ ಸಪಪೂ ಕಾಲೇಜಿನ ಮತಗಟ್ಟೆಯಿಂದ ಸ್ವಲ್ಪ ದೂರದಲ್ಲಿ ಶಾಮಿಯಾನ ಹಾಕಿಕೊಂಡು ಕುಳಿತು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನವಿ ಮಾಡುತ್ತಿದ್ದರು.
ತಾಲೂಕಿನ ವಿವಿಧೆಡೆ ಹಾಕಿದ್ದ ಕಾಂಗ್ರೆಸ್ ಪಕ್ಷದ ಶಾಮಿಯಾನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕುಬೇರಗೌಡ, ಗೌತಮ್ ಪ್ರಭು, ಬಸವರಾಜ ಸಂಗಪ್ಪನವರ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣನಾಯ್ಕ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉದಯಶಂಕರ, ಅಬ್ದುಲ್ ರಹಿಮಾನ್, ಲಾಟಿದಾದಾಪೀರ, ಟಿ.ವೆಂಕಟೇಶ,ದಂಡಿನ ಹರೀಶ, ಇಸ್ಮಾಯಿಲ್ ಎಲಿಗಾರ, ದೇವೇಂದ್ರಗೌಡ, ಮೈದೂರು ರಾಮಣ್ಣ, ಚಿದಾನಂದಸ್ವಾಮಿ, ಗುಡಿನಾಗರಾಜ, ತಿಮಲಾಪುರದ ಈಶ್ವರಪ್ಪ ಉಪಸ್ಥಿತರಿದ್ದರೆ. ಬಿಜೆಪಿ ಶಾಮಿಯಾನದಲ್ಲಿ ಮಾಜಿ ಶಾಸಕ ಜಿ. ಕರುಣಾಕರರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಮುಖಂಡ ಬಾಗಳಿ ಕೊಟ್ರೇಶಪ್ಪ, ಜಿಲ್ಲಾ ಕಾರ್ಯದರ್ಶಿ ಆರ್. ಲೋಕೇಶ, ಜಿಲ್ಲಾ ಯುವ ಮೋರ್ಚಾ ಪ್ರ ಕಾರ್ಯದರ್ಶಿ ಸಂಗಮೇಶ, ಉದಯ, ಮಲ್ಲೇಶ, ಪಂಪನಾಯ್ಕ, ಕೊಟ್ರಯ್ಯ, ಕಿರಣ್ ಶಾನ್ಬಾಗ್ , ವಿನಯ, ವಾಗೀಶ, ರಮೇಶ ನಾಯ್ಕ, ಮಾರುತಿ, ಮಹಾಂತೇಶ, ನಿಂಗರಾಜ, ಆಲೂರು ಶ್ರೀನಿವಾಸ ತಾಪಂ ಮಾಜಿ ಉಪಾಧ್ಯಕ್ಷ ಮಂಜನಾಯ್ಕ ಇತರರು ಹಾಜರಿದ್ದು ಮತದಾನ ಪ್ರಕ್ರಿಯೆ ಗಮನಿಸಿದರು.