ಜಿಲ್ಲೆಯಲ್ಲಿ 91072 ಸದಸ್ಯತ್ವ ಸಾಧನೆ: ಗಾಯಿತ್ರಿ ಸಿದ್ದೇಶ್ವರ

| Published : Oct 29 2024, 01:01 AM IST

ಜಿಲ್ಲೆಯಲ್ಲಿ 91072 ಸದಸ್ಯತ್ವ ಸಾಧನೆ: ಗಾಯಿತ್ರಿ ಸಿದ್ದೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ 5 ವರ್ಷಗಳ ಹಿಂದೆ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಿದ್ದರು. ಪ್ರತಿ 5 ವರ್ಷಗಳಿಗೊಮ್ಮೆ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ಜಿಲ್ಲೆಗೆ 4.60 ಲಕ್ಷ ಸದಸ್ಯತ್ವ ಗುರಿ ನೀಡಲಾಗಿದೆ. ಇಲ್ಲಿಯವರೆಗೆ 91,072 ಮಂದಿಯ ಸದಸ್ಯತ್ವ ನೋಂದಣೆ ಮಾಡಿಸಲಾಗಿದೆ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಧರ್ಮಪತ್ನಿ ಹಾಗೂ ಬಿಜೆಪಿ ಮಹಿಳಾ ಮುಖಂಡರಾದ ಗಾಯಿತ್ರಿ ಸಿದ್ದೇಶ್ವರ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಯಕ್ಕನಹಳ್ಳಿಯಲ್ಲಿ ಅಭಿಯಾನಕ್ಕೆ ಚಾಲನೆ । ದೇಶದಲ್ಲಿಯೇ ಅತಿ ದೊಡ್ಡ ಪಕ್ಷ ಬಿಜೆಪಿ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಧಾನಿ ನರೇಂದ್ರ ಮೋದಿ 5 ವರ್ಷಗಳ ಹಿಂದೆ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಿದ್ದರು. ಪ್ರತಿ 5 ವರ್ಷಗಳಿಗೊಮ್ಮೆ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ಜಿಲ್ಲೆಗೆ 4.60 ಲಕ್ಷ ಸದಸ್ಯತ್ವ ಗುರಿ ನೀಡಲಾಗಿದೆ. ಇಲ್ಲಿಯವರೆಗೆ 91,072 ಮಂದಿಯ ಸದಸ್ಯತ್ವ ನೋಂದಣೆ ಮಾಡಿಸಲಾಗಿದೆ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಧರ್ಮಪತ್ನಿ ಹಾಗೂ ಬಿಜೆಪಿ ಮಹಿಳಾ ಮುಖಂಡರಾದ ಗಾಯಿತ್ರಿ ಸಿದ್ದಶ್ವರ ಹೇಳಿದರು.

ಸೋಮವಾರ ಹೊನ್ನಾಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನೋಂದಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಕ್ಕನಹಳ್ಳಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ಬಿಜೆಪಿ ದೇಶದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿದ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ಉತ್ತರಕ್ಕೆ 75 ಸಾವಿರ ಸದಸ್ಯತ್ವ ಗುರಿ ನೀಡಲಾಗಿದೆ. ಈ ಪೈಕಿ 21763 ಜನ ನೋಂದಣಿ ಆಗಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 60 ಸಾವಿರ ಗುರಿಯಿದ್ದು, 8433 ನೋಂದಣೆಯಾಗಿದೆ. ಮಾಯಕೊಂಡ ಕ್ಷೇತ್ರಕ್ಕೆ 60 ಸಾವಿರ ಗುರಿಯಿದ್ದು, 7198 ನೋಂದಣೆಯಾಗಿದೆ, ಚನ್ನಗಿರಿ ಕ್ಷೇತ್ರದಲ್ಲಿ 75 ಸಾವಿರ ಗುರಿಯಿದ್ದು, ಇದರಲ್ಲಿ 18,901 ಸದಸ್ಯತ್ವ ನೋಂದಣೆಯಾಗಿದೆ ಎಂದರು.

ಅಂತೆಯೇ, ಹೊನ್ನಾಳಿ ಕ್ಷೇತ್ರದಲ್ಲಿ 60 ಸಾವಿರ ಗುರಿಯಿದ್ದು, 21534 ನೋಂದಣೆಯಾಗಿದೆ. ಹರಿಹರದಲ್ಲಿ 70 ಸಾವಿರ ಗುರಿಯಿದ್ದು, 4748 ನೋಂದಣೆಯಾಗಿದೆ. ಜಗಳೂರು ಕ್ಷೇತ್ರಕ್ಕೆ 60 ಸಾವಿರ ಗುರಿಯಿದ್ದು, ಇದರಲ್ಲಿ 9305 ನೋಂದಣೆಯಾಗಿದೆ ಎಂದು ಸದಸ್ಯತ್ವ ನೋಂದಣೆ ಅಂಕಿ -ಅಂಶಗಳ ಮಾಹಿತಿ ನೀಡಿದರು. ನೋಂದಣಿಗೆ ಅ.30ರವರೆಗೆ ಕಾಲಾವಕಾಶವಿದೆ. ಪಕ್ಷದ ಕಾರ್ಯಕರ್ತರು ಹೆಚ್ಚು ಶ್ರಮಹಾಕಿ ಬಿಜೆಪಿ ಸದಸ್ಯತ್ವ ನೋಂದಣಿ ಸಂಖ್ಯೆ ಹೆಚ್ಚಿಸಬೇಕಿದೆ ಎಂದು ತಿಳಿಸಿದರು.

ಬಿಜೆಪಿ ಮಾಜಿ ಅಧ್ಯಕ್ಷ ಅರಕೆರೆ ಎ.ಬಿ.ಹನುಮಂತಪ್ಪ ಮಾತನಾಡಿದರು. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಜಯಮ್ಮ, ಜಿಲ್ಲಾ ಮುಖಂಡ ಶಾಂತರಾಜ್ ಪಾಟೀಲ್, ಕೆ.ವಿ.ಚನ್ನಪ್ಪ, ನೆಲಹೊನ್ನೆ ದೇವರಾಜ್, ನ್ಯಾಮತಿ ಅಜೇಯ್ ರೆಡ್ಡಿ, ಜಿಪಂ ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ಮುಖಂಡ ಯಕ್ಕನಹಳ್ಳಿ ಜಗದೀಶ್, ಪ್ರಭು, ಚನ್ನೇಶ್, ಬಿಂಬ ಮಂಜಣ್ಣ, ಗ್ರಾಮದ ಮುಖಂಡ ಸಿ.ಎನ್. ಹಾಲೇಶಪ್ಪ, ಲೋಕೇಶಪ್ಪ, ಅನಂದಪ್ಪ, ಅಶೋಕ್, ಬಸವರಾಜಪ್ಪ, ಅವಿನಾಶ್‌ ಮುಂತಾದವರು ಇದ್ದರು.

- - -

-28ಎಚ್.ಎಲ್.ಐ1:

ಯಕ್ಕನಹಳ್ಳಿಯಲ್ಲಿ ಸೋಮವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಗಾಯಿತ್ರಿ ಸಿದ್ದೇಶ್ವರ ಚಾಲನೆ ನೀಡಿ ಮಾತನಾಡಿದರು.